ಪ್ರಜ್ಞಾವಂತ ಪ್ರಜೆಯಾಗಲು ಕಾನೂನಿನ ಅರಿವು ಅತಿ ಅವಶ್ಯಕ : ಡಿ.ಎಂ. ಅಥಣಿ
Legal knowledge is essential to become a conscious citizen: D.M. Athani
ಮಾಂಜರಿ 30: ಕೆ.ಎಲ್.ಇ ಸಂಸ್ಥೆಯ ಪದವಿ ಮಹಾವಿದ್ಯಾಲಯ ಅಂಕಲಿಯ ರಾಷ್ಟ್ರೀಯ ಸೇವಾ ಯೋಜನೆ ವಿಶೇಷ ಶಿಬಿರದ ಎರಡನೇ ದಿನ ಶುಕ್ರವಾರ ರಂದು ಶ್ರಮದಾನವನ್ನು ದತ್ತು ಪಡೆದ ಗ್ರಾಮ ಚಿಕ್ಕೋಡಿ ತಾಲೂಕಿನ ಇಂಗಳಿ ಗ್ರಾಮದ ಬಸವೇಶ್ವರ ದೇವಸ್ಥಾನದ ಸುತ್ತಮುತ್ತಲಿನ ಪ್ರದೇಶವನ್ನು ಸ್ವಚ್ಛ ಮಾಡಲಾಯಿತು.
ಮಧ್ಯಾಹ್ನ ವಿಶೇಷ ಉಪನ್ಯಾಸಕ್ಕೆ ಆಗಮಿಸಿದ ಅಂಕಲಿ ಪೊಲೀಸ್ ಠಾಣೆಯ ಪಿಎ? ನಂದೀಶ್ ಅವರು ವಿದ್ಯಾರ್ಥಿಗಳನ್ನು ಕುರಿತು ವಿದ್ಯಾರ್ಥಿ ಜೀವನದಲ್ಲಿ ಗುರಿಯನ್ನು ಬಹಳ ಮುಖ್ಯ ಪ್ರತಿಯೊಬ್ಬ ವಿದ್ಯಾರ್ಥಿಯು ತನ್ನ ಭವಿಷ್ಯದ ಜೀವನದ ಬಗ್ಗೆ ಗುರಿಯನ್ನು ಹೊಂದಿದಾಗ ಮಾತ್ರ ಸಾಧನೆ ಎಂಬುದು ಲಭಿಸುತ್ತದೆ ಎಂದು ಕಿವಿಮಾತು ಹೇಳಿ ಅದರ ಜೊತೆಗೆ ವಿದ್ಯಾರ್ಥಿಗಳಿಗೆ ರಸ್ತೆ ಸುರಕ್ಷಿತ ನಿಯಮ ಹಾಗೂ ಸಂವಹನ ಮಾಧ್ಯಮಗಳ ಸಾಧಕ ಬಾಧಕ ಅರಿತು ಬಳಕೆ ಮಾಡಿ ಕೊಳ್ಳುವುದು ಬಹಳ ಮುಖ್ಯ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಉಪಸ್ಥಿತರಿರುವ ಡಿ. ಎಂ. ಅಥಣಿಯವರು ವಿದ್ಯಾರ್ಥಿಗಳನ್ನು ಕುರಿತು ಕಾನೂನಿನ ಸುರಕ್ಷತೆ ಹಾಗೂ ನಾಗರಿಕ ಪ್ರಜ್ಞೆಯನ್ನು ತಮ್ಮಲ್ಲಿ ಅಳವಡಿಸಿಕೊಳ್ಳಬೇಕೆಂದು ತಿಳಿಸಿದರು.
ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಪ್ರೊ. ಎಂ. ಎಸ್. ಕಾನಡೆಯವರು ವಿದ್ಯಾರ್ಥಿಗಳು ಪ್ರಸ್ತುತ ದಿನಮಾನಗಳಲ್ಲಿ ಮೊಬೈಲ್ ಅನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಸುತ್ತ ಅನಾವಶ್ಯಕ ಆಪ್ ಗಳನ್ನು ಡೌನ್ ಲೋಡ್ ಮಾಡುತ್ತಾ ತೊಂದರೆಗೆ ಒಳಪಡುತ್ತಿದ್ದಾರೆ ಅದರಿಂದ ಮೊಬೈಲ್ ಅನ್ನು ಸದುಪಯೋಗಕ್ಕೆ ಬಳಸಿಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ತಿಳುವಳಿಕೆ ನೀಡಿದರು.. ಎಲ್.ಆರ್.ಮೇತ್ರಿ ಸ್ವಾಗತ ಭಾಷಣ ಮಾಡಿದರು. ಶಿವರಾಧಿಕಾರಿಗಳಾದ ಆರ್.ಎ.ಕೆರಗುಟ್ಟೆ ಗ್ರಾಮ ಪಂಚಾಯಿತಿಯ ಸದಸ್ಯರಾದ ಹನುಮಂತ್ ಮಮಿರ್ಚೆ ಉಪಸ್ಥಿತರಿದ್ದರು. ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ವರ್ಗದವರು ಮತ್ತು ಶಿಬಿರಾರ್ಥಿಗಳು ಉಪಸ್ಥಿತರಿದ್ದರು. ಕು. ಸುಷ್ಮಾ ಮುತ್ನಾಳೆ ನಿರೂಪಣೆ ನೆರವೇರಿಸಿದರು. ಕು. ಅಶ್ವಿನಿ ಶಿಂದೆ ವಂದಿಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 