ಬಳ್ಳಾರಿಯಲ್ಲಿ ನಡೆದ ಗಲಾಟೆಯಲ್ಲಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ : ಸಂಸದ ಈ.ತುಕಾರಾಂ
Legal action will be taken against those responsible for the riots in Bellary: MP E. Tukaram
ಕಂಪ್ಲಿ 02: ಬಳ್ಳಾರಿ ನಗರದಲ್ಲಿ ನಡೆದ ಗಲಾಟೆ ಸಂಬಂಧ ಸರ್ಕಾರ ವರದಿ ತರಿಸಿಕೊಂಡು, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮಕೈಗೊಂಡು, ಭಯದ ವಾತಾವರಣ ದೂರ ಮಾಡಲಿದ್ದಾರೆ ಎಂದು ಸಂಸದ ಈ.ತುಕಾರಾಂ ಹೇಳಿದರು. ಪಟ್ಟಣದ ಗಂಗಾವತಿ ರಸ್ತೆಯಲ್ಲಿರುವ ಬಡೇ ಸಾಹೇಬ್ ದರ್ಗಾದಲ್ಲಿ ಗಂಧ, ಉರುಸ್, ಪಲ್ಲಕ್ಕಿ ಉತ್ಸವ ಹಿನ್ನಲೆ ಶುಕ್ರವಾರ ಮಧ್ಯಾಹ್ನ ದರ್ಗಾಕ್ಕೆ ಭೇಟಿ ನೀಡಿ, ಆಶೀರ್ವಾದ ಪಡೆದ ನಂತರ ಪತ್ರಕರ್ತರೊಂದಿಗೆ ಮಾತನಾಡಿ, ಇಲ್ಲಿನ ಘರ್ಷಣೆ ಪೂರ್ವಯೋಜಿತವಲ್ಲ. ಇದು ಆಕಸ್ಮಿಕವಾದ ಘಟನೆಯಾಗಿದೆ. ಭಯದ ವಾತಾವರಣ ಇಲ್ಲದಂಗೆ ನೋಡಿಕೊಳ್ಳಲಿದ್ದಾರೆ. ಈಗಾಗಲೇ ಜಿಲ್ಲೆಯ ಜಿಲ್ಲಾಧಿಕಾರಿಗಳು, ಎಸ್ಪಿ ಸೇರಿದಂತೆ ಅನೇಕ ಅಧಿಕಾರಿಗಳು ಬಳ್ಳಾರಿಯಲ್ಲಿ ಬೀಡುಬಿಟ್ಟು, ಪರಿಸ್ಥಿತಿ ತಿಳಿಗೊಳಿಸುವಂತಹ ಕೆಲಸ ಮಾಡಿದ್ದಾರೆ. ಗಲಾಟೆಯ ವರದಿಯು, ಸರ್ಕಾರಕ್ಕೆ ಸೇರಲಿದ್ದು, ವರದಿಯನ್ನಾದರಿಸಿ, ಸೂಕ್ತ ಕ್ರಮಕೊಳ್ಳಲಿದ್ದಾರೆ. ರಾಜ್ಯದಲ್ಲಿ ಐದು ವರ್ಷ ಸರ್ಕಾರ ಸುಭದ್ರವಾಗಿ ನಡೆಯಲಿದೆ. ನಾಡಿನ ಜನರ ಭರವಸೆಗಳಿವೆ. ಕಾಂಗ್ರೆಸ್‌ನಲ್ಲಿ ಹೈಕಮಾಂಡುದ್ದೇ ಅಂತಿಮ ತೀರ್ಮಾನ. ಸಂಸದರ ಕ್ಷೇತ್ರಕ್ಕೆ ಬಂದ ಐದು ಕೋಟಿಯಲ್ಲಿ,
ಎಲ್ಲಾ ಕ್ಷೇತ್ರಗಳಿಗೆ ತಲಾ 80 ಲಕ್ಷ ಅನುದಾನ, ಇದರಲ್ಲಿ ರೈತ ಸಂಪರ್ಕ ಕೇಂದ್ರದ ಅಭಿವೃದ್ಧಿಗೆ 2 ಲಕ್ಷ, 7 ಪ್ರೌಢಶಾಲೆಗಳಿಗೆ ತಲಾ 7 ಲಕ್ಷದ ಡಿಜಿಟಲ್ ಗ್ರಂಥಾಲಯಕ್ಕೆ ಅನುದಾನ, ಎಮ್ಮಿಗನೂರು ಪೋಸ್ಟ್ ಆಫೀಸ್ ಕಚೇರಿಗೆ 50 ಲಕ್ಷ ಅನುದಾನ ತಂದಿರುವೆ. ಪ್ರೌಢಶಾಲೆಗಳ ಕ್ರೀಡೆಗಳ ಸಾಮಾಗ್ರಿಗಳಿಗೆ ತಲಾ ಒಂದೊಂದು ಲಕ್ಷ ನೀಡಿರುವೆ. ಸಿದ್ದಮ್ಮನಹಳ್ಳಿ ಪ್ಲೈಓವರ್ ಕಾಮಗಾರಿ ನಡೆಯುತ್ತಿದ್ದು, ಈಗಾಗಲೇ ಕೊನೆ ಹಂತದಲ್ಲಿದ್ದು, ಫೆಬ್ರವರಿಯಲ್ಲಿ ಉದ್ಘಾಟನೆಗೊಳ್ಳಲಿದೆ. ಹೀಗೆ ನಾನಾ ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡಲಾಗುತ್ತಿದೆ. ಕಂಪ್ಲಿಯ ಬಡೇಸಾಹೇಬ್ ದರ್ಗಾಕ್ಕೆ ಬೇಟಿ ನೀಡಿ, ದೇವರ ಆಶೀರ್ವಾದ ಪಡೆದಿದ್ದು, ನಾಡಿಗೂ, ಲೋಕಸಭಾ ಕ್ಷೇತ್ರಕ್ಕೂ ಸರ್ವ ಧರ್ಮದವರಿಗೂ ಸುಖ, ಸಮೃದ್ಧಿ ನೀಡಲಿ ಎಂದರು. ಈ ಸಂದರ್ಭದಲ್ಲಿ ಧರ್ಮಗುರು ಸೈಯದ್ ಷಾ ಅಬುಲ್ ಹಸನ್ ಖಾದ್ರಿ, ಮುಖಂಡರಾದ ಕೆ.ಎಸ್.ಎಲ್.ಸ್ವಾಮಿ, ಕೆ.ಶ್ರೀನಿವಾಸರಾವ್, ಎಂ.ಸುದೀರ್, ಕೆ.ಮೆಹಬೂಬ್, ಎಂ.ಉಸ್ಮಾನ್, ಇಮ್ತಿಯಾಜ್, ಅಕ್ಕಿ ಜಿಲಾನ್, ಯು.ಜಹಿರುದ್ದೀನ್ ಸೇರಿದಂತೆ ಸರ್ವ ಧರ್ಮದದವರು ಇದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 