ನಿಸ್ಕಾಳಜಿ ತೋರಿಸುವ ಅಧಿಕಾರಿಗಳ ವಿರುದ್ದ ಮೇಲಾಧಿಕಾರಿಗಳಿಗೆ ಕಾನೂನು ಕ್ರಮ :ಯಾಸೀರ್ ಅಹ್ಮದ್ ಖಾನ್ ಪಠಾಣ್
Legal action against negligent officers: Yasir Ahmed Khan Pathan
ಶಿಗ್ಗಾವಿ 18 : ಈ ಹಿಂದೆ ಪ್ಲಡ್ ಸಮಯದಲ್ಲಿ ಸರ್ವೆಯರ್, ಪಿಡಿಓಗಳು ಮತ್ತು ವಿಎ ಕೂಡಿಕೊಂಡು ಮನೆಗಳನ್ನು ಕೊಟ್ಟಂತೆ ಇಲ್ಲಿಯೂ ಕೂಡಿ ಕೆಲಸ ಮಾಡಬೇಕು, ಅಲ್ಲಿ ವೈಯಕ್ತಿಕ ಹಿಸಾಕ್ತಿಯಿಂದ ಕೆಲಸ ಮಾಡಿದ್ದೀರಿ, ಇಲ್ಲಿ ಸಾರ್ವಜನಿಕ ಹಿತಾಸಕ್ತಿ ಇಟ್ಟುಕೊಂಡು ಕೆಲಸ ಮಾಡಿ, ನಿಸ್ಕಾಳಜಿ ತೋರಿಸುವ ಅಧಿಕಾರಿಗಳ ವಿರುದ್ದ ಮೇಲಾಧಿಕಾರಿಗಳಿಗೆ ಕಾನೂನು ಕ್ರಮ ಜರುಗಿಸುವಂತೆ ಪತ್ರ ಬರೆಯಲಾಗುವುದು ಎಂದು ಶಾಸಕ ಯಾಸೀರ್ ಅಹ್ಮದ್ ಖಾನ್ ಪಠಾಣ್ ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದ ಘಟನೆ ಸೋಮವಾರ ಜರುಗಿತು. ಪಟ್ಟಣದ ಡಾ. ಬಿ ಆರ್ ಅಂಭೇಡ್ಕರ್ ಆಡಳಿತ ಭವನದ ವಾಣಿಜ್ಯ ಸಂಕೀರ್ಣದ ಸಭಾ ಭವನದಲ್ಲಿ ಹಮ್ಮಿಕೊಂಡ ಶಿಗ್ಗಾವಿ -ಸವಣೂರ ಕಂದಾಯ ಗ್ರಾಮದಡಿ ಕಂದಾಯ ಗ್ರಾಮಕ್ಕೆ ಸಂಬಂದಿಸಿದಂತೆ ಪಿಡಿಓ, ಕಂದಾಯ ಇಲಾಖೆಯ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.
ತಾಲೂಕಿನಲ್ಲಿ ಬಹುತೇಕ ಗ್ರಾಮಗಳು ಅನಧಿಕೃತವಿದ್ದು ಸುಮಾರು 40 ವರ್ಷಗಳಿಂದ ಅಧಿಕಾರಿಗಳು ನಿರ್ಲಕ್ಷ ವಹಿಸಿರುವುದೇ ಕಾರಣವಾಗಿದೆ, ಕಾಮನಹಳ್ಳಿ ಗ್ರಾಮದಲ್ಲಿ 280 ಅನಧಿಕೃತ ಮನೆಗಳಿವೆ, ಇದು ಅಧಿಕಾರಿಗಳ ನಿರ್ಲಕ್ಷಕ್ಕೆ ಕಾರಣ ಎಂದ ಅವರು, ಕೆಲವು ಗ್ರಾಮಗಳ ಸರ್ವೆಗಳ ಪ್ರಪೋಜಲ್ ಬಂದಿದ್ದು ಅವುಗಳನ್ನು ಕಂದಾಯ ಗ್ರಾಮದಡಿ ಹಕ್ಕು ಪತ್ರ ವಿತರಿಸುವಲ್ಲಿ ಸಮಸ್ಯೆಗಳಾಗಿದ್ದು, ಅಧಿಕಾರಿಗಳಿಗೆ ಕಾನೂನು ಬದ್ದವಾಗಿ ಅವುಗಳನ್ನು ಸೇರಿಸಲು ಸೂಚಿಸಲಾಗಿದೆ, ಕೆಲವು ಗ್ರಾಮಗಳಲ್ಲಿ 10ಕ್ಕೂ ಕಡಿಮೆ ಮನೆಗಳು ಕಂದಾಯ ಗ್ರಾಮದಡಿ ಹಕ್ಕುಪತ್ರ ಪಡೆಯಲು ವಿಫಲವಾಗಿವೆ ಎಂದರು.
ಪ್ರತಿ ಗ್ರಾಮದಲ್ಲಿ ಶೇ.80 ರಷ್ಟು ಮನೆಗಳು ರಿಜೆಕ್ಟ್ ಆಗಿವೆ ಇದಕ್ಕೆ ತಹಶೀಲ್ದಾರ ಮತ್ತು ಇಓ ಅವರು ಸಭೆಗಳನ್ನು ಮಾಡದಿರುವುದು ಕಾರಣವಾಗಿದೆ ಎಂದು ತಹಶೀಲ್ದಾರ ಯಲ್ಲಪ್ಪ ಗೋಣೆಣ್ಣನವರ ಅನ್ನು ತರಾಟೆಗೆ ತಗೆದುಕೊಂಡ ಶಾಸಕರು, ಕ್ಷೇತ್ರದ ಎಲ್ಲಾ ಮನೆಗಳು ಅನಧಿಕೃತವಿದ್ದು ಸರಿಯಾದ ಮೇಲ್ವಿಚಾರಣೆ ಮಾಡದ ಹಿನ್ನೆಲೆಯಲ್ಲಿ ಬಹುತೇಕ ಮನೆಗಳು ರಿಜೆಕ್ಟ ಆಗಿವೆ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು ಕೆಲ ಪಿಡಿಓ ಮತ್ತು ವಿ.ಎ ಗಳನ್ನು ತಮ್ಮ ಕಾರ್ಯ ವ್ಯಾಪ್ತಿಯ ಗ್ರಾಮಗಳಿಗೆ ಕಳಸಿ ಮನೆಗಳ ಸಂಖ್ಯೆಯನ್ನು ತರುವಂತೆ ಸಭೆಯಿಂದ ಕಳಿಸಿದ್ದು ಕಂಡು ಬಂತು.
ಅಧಿಕಾರಿಗಳು ಸಾರ್ವಜನಿಕರಿಗೆ ನೆಮ್ಮದಿಯಿಂದ ಬದುಕಲು ಕಾನೂನಿನಲ್ಲಿನ ದಾರಿಗಳನ್ನು ಹುಡುಕಿ ಅವರಿಗೆ ಹಕ್ಕುಪತ್ರ ವಿತರಿಸಲು ಮುಂದಾಗಬೇಕು, ಯಶಸ್ವಿ ಮಾಡುವ ವರೆಗೆ ಅಧಿಕಾರಿಗಳನ್ನು ಮಲಗಲು ಬಿಡುವುದಿಲ್ಲ ಎಂದು ಹರಿಹಾಯ್ದರು. ಸಭೆಯಲ್ಲಿ ಶಿಗ್ಗಾವಿ ತಹಶೀಲ್ದಾರ ಯಲ್ಲಪ್ಪ ಗೊಣೆಣ್ಣವರ, ಸವಣೂರ ತಹಶೀಲ್ದಾರ ರವಿ ಕೊರವರ, ಇಓ ಮಂಜುನಾಥ ಸಾಳೋಂಕೆ, ಗ್ಯಾರಂಟಿ ಸಮೀತಿಯ ಎಸ್ ಎಫ್ ಮಣಕಟ್ಟಿ, ಸುಭಾಸ ಮಜ್ಜಗಿ, ಶಂಕರಗೌಡ ಪಾಟೀಲ, ಗುಡ್ಡಪ್ಪ ಜಲದಿ ಸೇರಿದಂತೆ ತಾಲೂಕಿನ ಪಿಡಿಓಗಳು, ವಿಎಗಳು ಹಾಗೂ ವಿವಿಧ ಅಧಿಕಾರಿಗಳು ಇದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 