ಶಿ.ಶಿ. ಬಸವನಾಳರ ಬದುಕು-ಬರಹ’ ಕುರಿತು ಉಪನ್ಯಾಸ ಕಾರ್ಯಕ್ರಮ
Lecture program on the life and writings of Shi. Shi. Basavanala
ಧಾರವಾಡ 06: ಕರ್ನಾಟಕ ವಿದ್ಯಾವರ್ಧಕ ಸಂಘವು ಪ್ರೊ. ಶಿ.ಶಿ. ಬಸವನಾಳ ದತ್ತಿ ಅಂಗವಾಗಿ ದಿನಾಂಕ 7-11-2025 ರಂದು ಬೆಳಿಗ್ಗೆ 10-30ಕ್ಕೆ ಧಾರವಾಡ ಕೆ.ಎಲ್.ಇ. ಸಂಸ್ಥೆಯ ಮೃತ್ಯುಂಜಯ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದಲ್ಲಿ ‘ಶಿ.ಶಿ. ಬಸವನಾಳರ ಬದುಕು-ಬರಹ’ ಕುರಿತು ಉಪನ್ಯಾಸ ಕಾರ್ಯಕ್ರಮ ಆಯೋಜಿಸಿದೆ. ಧಾರವಾಡ ಕವಿವಿ ಸಿಂಡಿಕೆಟ್ ಸದಸ್ಯರು ಹಾಗೂ ಕೆ.ಎಲ್.ಇ. ಸಂಸ್ಥೆಯ ಮೃತ್ಯುಂಜಯ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ಪ್ರಾಚಾರ್ಯರು ಡಾ. ನಿಲಕ್ಕಾ ಪಾಟೀಲ ಅಧ್ಯಕ್ಷತೆ ವಹಿಸುವರು.
ಧಾರವಾಡದ ಅಂಜುಮನ್ ಕಲಾ, ವಾಣಿಜ್ಯ, ವಿಜ್ಞಾನ ಮಹಾವಿದ್ಯಾಲಯದ ಕನ್ನಡ ವಿಭಾಗ ಹಾಗೂ ಸ್ನಾತಕೋತ್ತರ ಅಧ್ಯಯನ ಮುಖ್ಯಸ್ಥ ಡಾ. ಮೇಟಿ ರುದ್ರೇಶ ಉಪನ್ಯಾಸ ನೀಡುವರು. ದತ್ತಿ ದಾನಿಗಳಾದ ರವೀಂದ್ರ ಶಿ. ಬಸವನಾಳ ಉಪಸ್ಥಿತರಿರುವರು. ಸಾಹಿತಿಗಳು, ಕಲಾವಿದರು, ಚಿಂತಕರು, ವಿದ್ಯಾರ್ಥಿಗಳು, ಸಂಘದ ಆಜೀವ ಸದಸ್ಯರು, ಆಸಕ್ತ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಪ್ರಕಟಣೆಯಲ್ಲಿ ಕೋರಿದ್ದಾರೆ.
ಪ್ರೊ. ಶಿ. ಶಿ. ಬಸವನಾಳ ಪ್ರೊ. ಶಿವಲಿಂಗಪ್ಪ ಶಿವಯೋಗಪ್ಪ ಬಸವನಾಳರ ಹೆಸರು ಕನ್ನಡ ಸಾಹಿತ್ಯ ಶಾಸ್ತ್ರದಲ್ಲಿ, ವಚನಶಾಸ್ತ್ರದಲ್ಲಿ ಚಿರಸ್ಥಾಯಿಯಾದುದು. ಇವರು ದಿನಾಂಕ 7-11-1893 ರಂದು ಜನಿಸಿದರು. ವ್ಯಾಕರಣ, ಅಲಂಕಾರ, ಛಂದಸ್ಸು ಮುಂತಾದ ವಿಷಯಗಳನ್ನು ಅವರು ಆಳವಾಗಿ ಅಭ್ಯಸಿಸಿದ್ದರು. ಅವುಗಳನ್ನು ಕೇಳುಗರಿಗೆ ಆಸಕ್ತಿ ಹುಟ್ಟುವಂತೆ ವಿವರಿಸುತ್ತಿದ್ದರು. ಅಲಂಕಾರಗಳನ್ನು ತಿಳಿಸುವ ರೀತಿ, ಲಕ್ಷ್ಯ ಲಕ್ಷಣಗಳನ್ನು ಸಮನ್ವಯ ಮಾಡುವ ಬಗೆ, ಅವುಗಳನ್ನು ವರ್ಗೀಕರಿಸಿ ತುಲನೆ ಮಾಡುವ ಜಾಣ್ಮೆ ತುಂಬಾ ಮೆಚ್ಚುವಂತಹವು. ಶಿಕ್ಷಣ, ಸಾಹಿತ್ಯ, ಸಮಾಜ ಕ್ಷೇತ್ರಗಳಿಗೆ ಅಪಾರ ಸೇವೆ ಸಲ್ಲಿಸಿರುವಂತೆ ಸಂಶೋಧನಾ ಕ್ಷೇತ್ರಕ್ಕೆ ನೀಡಿದ ಕೊಡುಗೆಯೂ ಚಿರನೂತನವಾಗಿದೆ.
ಪ್ರೊ. ಬಸವನಾಳರು ಹಲವಾರು ಶಿಕ್ಷಣ ಸಂಸ್ಥೆಗಳ ಹುಟ್ಟಿಗೆ ಪ್ರೇರಣೆ ನೀಡಿದವರು. ಬದುಕಿನುದ್ದಕ್ಕೂ ಸರಳತೆಯನ್ನು ರೂಪಿಸಿಕೊಂಡವರು ಮತ್ತು ತಾವು ನಂಬಿದ ಕೆ.ಎಲ್.ಇ. ಸಂಸ್ಥೆಯ ಸಂಸ್ಥಾಪನೆಯಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದವರು. ಅವರು ದಿನಾಂಕ 22-12-1951 ರಂದು ಲಿಂಗೈಕ್ಯರಾದರು. ಇಂಥ ಮಹಾನ್ ಕನ್ನಡ ಚೇತನದ ಸ್ಮರಣೆಯನ್ನು ಪ್ರತಿವರ್ಷ ಅವರ ಜನ್ಮದಿನದಂದು ಸ್ಮರಿಸಿಕೊಳ್ಳುವಂತೆ ಅವರ ಮಗ ರವೀಂದ್ರ ಬಸವನಾಳ ಅವರು 2009 ರಲ್ಲಿ ದತ್ತಿ ಇಟ್ಟಿದ್ದು ಅಭಿನಂದನೀಯ. ಬನ್ನಿ ಶಿ.ಶಿ. ಬಸವನಾಳರನ್ನು ಸ್ಮರಿಸುತ್ತ ಕನ್ನಡದ ಪ್ರಜ್ಞೆ ಪಡೆಯೋಣ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 