ಮಾದಕ ಓಷಧಿಗಳ ದುರಪಯೋಗ ಕುರಿತು ಉಪನ್ಯಾಸ
ಮಾದಕ ಓಷಧಿಗಳ ದುರಪಯೋಗ ಕುರಿತು ಉಪನ್ಯಾಸ
ಹಾವೇರಿ 06: ದಿನಾಂಕ 05-11-2024 ರಂದು ಹಾವೇರಿಯ ಬಸವೇಶ್ವರ ನಗರದಲ್ಲಿನ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಮಾದಕ ಓಷಧಿಗಳ ದುರುಪಯೋಗ ತಡೆ ಕುರಿತು ಅರಿವು ಕಾರ್ಯಕ್ರಮ ಹಮ್ಮಕೊಳ್ಳಲಾಗಿತ್ತು. ಶ್ರೀ ಸಂಗಣ್ಣ ಶೀಳಿ ಸಹಾಯಕ ಓಷಧ ನಿಯಂತ್ರಕರು ಹಾವೇರಿ ಇವರು ಇಂದು ವಿದ್ಯಾರ್ಥಿಗಳು ಮಾದಕ ವಸ್ತುಗಳಿಗೆ ಹೇಗೆ ವ್ಯಸನಗೊಂಡು ತಮ್ಮ ಜೀವನವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ ಎಂದು ವಿರಿಸಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಅರುಣ ಕುಮಾರ ಪಿ ಜೆ ಇವರು ಕಾರ್ಯಕ್ರಮದ ಸದುಪಯೊಗ ಪಡಿಸಿಕೊಳ್ಳಲು ಕರೆ ನೀಡಿದರು.ಹಾವೇರಿಯ ಲಯನ್ಸ ಕ್ಲಬ್‌ನ ಅಧ್ಯಕ್ಷರಾದ ಶ್ರೀ ಸುಭಾಸ ಹುಳ್ಯಾಳದ ಇವರು ಪ್ರತಿಯೊಬ್ಬ ವಿದ್ಯಾರ್ಥಿಯು ಬದಲಾವಣೆಯಾಗಿ ಜೀವನವನ್ನು ಉತ್ತಮಪಡಿಸಿಕೊಳ್ಳಲು ಕರೆ ನೀಡಿದರು.ಕಾರ್ಯಕ್ರಮದ ಕುರಿತು ಎ.ಹೆಚ್.ಕಬ್ಬಿಣಕಂತಿಮಠ ಇವರು ಪ್ರಸ್ತಾವಿಕ ಮಾತುಗಳನ್ನು ಆಡಿದರು.ಕಾರ್ಯಕ್ರಮದಲ್ಲಿ ಲಯನ್ಸ ಕ್ಲಬ್‌ನ ಖಜಾಂಚಿ ಶ್ರೀ ಗೀರಿಶ ಬಣಕಾರ , ಶ್ರೀ ಪಿ ಸಿ ಹಿರೇಮಠ ಉಪಸ್ಥಿತರಿದ್ದರು.ಲಯನ್ಸ ಕ್ಲಬ್‌ನ ಕಾರ್ಯದರ್ಶಿ ವಿ ಆರ್ ಹಾವನೂರ ವಂದಿಸಿದರು. ಶ್ರೀ ಎಸ್ ಬಿ ದೊಡ್ಡಮನಿ ಕಾರ್ಯಕ್ರಮವನ್ನು ನಿರೂಪಿಸಿದರು.