2028ಕ್ಕೆ ಸತೀಶ ಮುಖ್ಯಮಂತ್ರಿ, ವೈದ್ಯ ಮಂತ್ರಿಯಾಗಿ ನೋಡಬೆಕೆಂದು ಮುಖಂಡ ಎ ಎಮ್ ಶಂಕರಲಿಂಗಪ್ಪ ಅಭಿಮತ
ಯರಗಟ್ಟಿ, 26 : ಗ್ರಾಮದ ಕರೇಮ್ಮಾದೇವಿ ಆರ್ಶಿವಾದದಿಂದ 2028ಕ್ಕೆ ಮಾನ್ಯ ಸತೀಶ ಜಾರಕಿಹೋಳಿ ಮುಖ್ಯಮಂತ್ರಿ ಆಗುತ್ತಾರೆ ಹಾಗೂ ನಮ್ಮ ಹೆಮ್ಮೇಯ ಜನಪ್ರಿಯ ಶಾಸಕ ವಿಶ್ವಾಸ ವೈದ್ಯ ಅವರು ಮಂತ್ರಿ ಸ್ಥಾನದಲ್ಲಿ ನೋಡಬೆಕೆಂದು ನಮ್ಮ ಹಾಗೂ ಗ್ರಾಮದ ಜನರ ಆಸಯವಾಗಿದೆ ಎಂದು ಗ್ರಾಮದ ಮುಖಂಡ ಎ ಎಮ್ ಶಂಕರಲಿಂಗಪ್ಪ ಅವರು ಮುಖ್ಯ ಅತಿಥಿಗಳಾಗಿ ಜಾತ್ರಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಸಮೀಪದ ಯರಝರ್ವಿ ಗ್ರಾಮದಲ್ಲಿ ಮಂಗಳವಾರದಂದು ಹಮ್ಮಿಕೊಂಡಿದ್ದ ಶ್ರೀ ಕರೆಮ್ಮದೇವಿ ಜಾತ್ರಾ ಮಹೋತ್ಸವದಲ್ಲಿ ಅವರು ಮಾತನಾಡಿ ಹಿಂದೆ ಆಗದಂತಹ ಅಭಿವೃದ್ದಿ ಕೆಲಸಗಳನ್ನು ಶಾಸಕರು ನಮ್ಮ ಗ್ರಾಮಕ್ಕೆ ಹೆಚ್ಚು ಅನುಧಾನವನ್ನು ಕೊಡುವ ಮೂಲಕ ಯರಝರ್ವಿ ಗ್ರಾಮ ಅಭಿವೃದ್ದಿ ಪಥದತ್ತ ಸಾಗುತ್ತಿದೆ ಇಂತಹ ಒಬ್ಬ ಶಾಸಕರು ಸಿಕಿದ್ದು ನಾವೆ ಭಾಗ್ಯವಂತರು ಎಂದು ಹೇಳಿದರು. ನಂತರ ಮಾತನಡಿದ ಶಾಸಕ ವಿಶ್ವಾಸ ವೈದ್ಯ ಅವರು ಈಗಾಗಲೆ ಬಸವಣ್ಣನ ದೇವಸ್ಥಾನದಿಂದ ಕಡಬಿ ಗ್ರಾಮದವರೆಗೆ ರಸ್ತೆ ಕಾಮಗಾರಿ ಸೇರಿದಂತೆ ಗ್ರಾಮದೇವಿ ದೇವಸ್ತಾನಕ್ಕೆ 15 ಲಕ್ಷ ಅನುದಾನ ನೀಡಿದ್ದು ಮುಂಬರುವ ದಿನಗಳಲ್ಲಿ ವಾಲ್ಮೀಕಿ ದೇವಸ್ತಾನದಲ್ಲಿ ಗ್ರಾಮದ ಬಡ ಜನರಿಗೆ ಮದುವೆ ಹಾಗೂ ಇನ್ನಿತರ ಸಮಾರಂಭ ಮಾಡಲು ಕಲ್ಯಾಣ ಮಂಟಪ ನಿರ್ಮಿಸುವದಾಗಿ ಹೇಳಿದರು. ಗ್ರಾಮದ ಜನರ ಬಹುದಿನಗಳಿಂದ ಬೇಡಿಕೆಯಾದ ಗ್ರಾಮಕ್ಕೆ ಅತ್ಯ ಅವಶ್ಯ ಇರುವ ಕಾಲೇಜು ಮತ್ತು ಆರೋಗ್ಯ ಕೇಂದ್ರ ಒದಗಿಸಿ ಕೊಡಲಾಗುವದೆಂದು ಶಾಸಕ ವಿಶ್ವಾಸ ವೈದ್ಯ ಅವರು ಬರವಸೆ ಹೇಳಿದರು. ಈ ಸಂದರ್ಬದಲ್ಲಿ ಯಲ್ಲಾಲಿಂಗ ಶ್ರೀಗಳು, ಫಕೀರ್ಪ ಲಿಂಗರಡ್ಡಿ, ಯರಗಟ್ಟಿ ಎಪಿಎಮಸಿ ಅಧ್ಯಕ್ಷ ನೀಲಕಂಠ ಸಿದ್ದಬಸನವರ, ಕೆಎಮಎಫ್ ನಿರ್ದೆಶಕ ಶಂಕರ ಇಟ್ನಾಳ, ಗುತ್ತಿಗೆದಾರ ಮಹಾಂತೇಶ ಉರಬಿನವರ, ಎಚ್. ಎಸ್. ನಾಯ್ಕರ, ಡಾ. ಚಿದಾನಂದ ಮಾಳೈನ್ನವರ ಗ್ರಾಮ ಪಂಚಾಯತಿ ಅಧ್ಯಕ್ಷರು, ಉಪಧ್ಯಕ್ಷರು, ಸರ್ವ ಸದಸ್ಯರು, ಡೋಳ್ಳಿನ ಮೇಳದವರು, ಸ್ವ ಸಹಾಯ ಸಂಘದವರು ಸೇರಿದಂತೆ ಗ್ರಾಮ ಹಾಗೂ ಸುತ್ತಮುತ್ತಲಿನ ಕರೆಮ್ಮದೇವಿ ಭಕ್ತರು ಇದ್ದರು.