ಸಾಂತ್ವನ ಹೇಳಿದ ನ್ಯಾಯವಾದಿ ಬಸವರಾಜ
Lawyer Basavaraja offered his condolences
ಶಿಗ್ಗಾವಿ 02 : ತಾಲೂಕಿನ ಮುಗಳಿ ಗ್ರಾಮದ ಸರೋಜವ್ವ ವೀರುಪಾಕ್ಷಪ್ಪ ಕಾಮನಹಳ್ಳಿ ಶಾಹಿ ಗಾಮೇಂರ್ಟ್ಸ್ ನಲ್ಲಿ ಕಾರ್ಯನಿರ್ವಹಿಸಿ ಬರುವಾಗ ಟ್ಯಾಕ್ಸಿ ಗಾಡಿಯಿಂದ ಬಿದ್ದು ಮೃತ ಪಟ್ಟ ಕುಟುಂಬಸ್ಥರ ಮನೆಗೆ ಬೇಟಿ ಕೊಟ್ಟು ನ್ಯಾಯವಾದಿ ಹಾಗೂ ಕಾಂಗ್ರೆಸ್ ಮುಖಂಡ ಬಸವರಾಜ ಜೇಕಿನಕಟ್ಟಿ 10 ಸಾವಿರ ಸಹಾಯ ಧನ ನೀಡಿ ಸಾಂತ್ವನ ಹೇಳಿದರು. ನಂತರ ಮಾತನಾಡಿದ ಅವರು ಕ್ಷೇತ್ರದ ಜನಪ್ರತಿನಿಧಿಗಳು ಈ ವಿಚಾರದಲ್ಲಿ ತಾರತಮ್ಯ ಮಾಡುತ್ತಿದ್ದಾರೆ ಅಂದರೆ ಸವಣೂರಿನ ನಿವಾಸಿಗಳು ಯಲ್ಲಾಪೂರದಲ್ಲಿ ಲಾರಿ ದುರಂತದಲ್ಲಿ ಸಾವನ್ನಪ್ಪಿದ 21 ಜನರಿಗೆ 3 ಲಕ್ಷ ಹಾಗೂ ಗಾಯಗೊಂಡವರಿಗೆ ತಲಾ ಒಂದು ಲಕ್ಷ ನೀಡಿ ಜೊತೆಗೆ ಚಿಕಿತ್ಸಾ ವೆಚ್ಚವನ್ನು ಭರಿಸಿ ಮನೆಗೆ ಹೋಗಿ ಸಾಂತ್ವನ ಹೇಳಿದರು ಹಾಗೂ ಸವಣೂರ ರಸ್ತೆಯಲ್ಲಿ ಬಸ್ಸ್ ಹಾಗೂ ದ್ವಿಚಕ್ರ ವಾಹನ ನಡುವೆ ಅಪಘಾತ ಸಂಭವಿಸಿದಾಗೂ ಸಹಿತ ಜನಪ್ರತಿನಿಧಿಗಳು ಹಣವನ್ನು ನೀಡಿ ಸಾಂತ್ವನ ಹೇಳಿದರು ಆದರೆ ಇವರಿಗೆ ಇಲ್ಲಿಯವರೆಗೂ ಮೃತ ಪಟ್ಟವರ ಮನೆಗೆ ಹಾಗೂ ಗಾಯಾಳುಗಳ ಮನೆಗೆ ಯಾರು ಸಹಿತ ಮಾನವೀಯತೇ ದೃಷ್ಟಿಯಿಂದ ಬಂದು ಸಾಂತ್ವನ ಹೇಳದಿರುವುದು ಖಂಡನೀಯ ಇಲ್ಲಿ ಜನಪ್ರತಿನಿಧಿಗಳು ಜಾತಿ ರಾಜಕಾರಣ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಈ ಸಂದರ್ಭದಲ್ಲಿ ಸಮತಾ ಸೈನಿಕ ದಳದ ಕಾರ್ಮಿಕ ಘಟಕ ರಾಜ್ಯಾಧ್ಯಕ್ಷ ಧರ್ಮಣ್ಣ ಓಲೇಕಾರ, ಸಮತಾ ಸೈನಿಕ ದಳದ ಜಿಲ್ಲಾಧ್ಯಕ್ಷ ಅಶೋಕ ಕಾಳೆ, ಜೀವಿಕ ಜಿಲ್ಲಾಧ್ಯಕ್ಷ ಸುರೇಶ ಹರಿಜನ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 