ಕಾನೂನು ವಿದ್ಯಾರ್ಥಿಗಳಿಗೆ ಭವಿಷ್ಯದಲ್ಲಿ ಬಹಳಷ್ಟು ಅವಕಾಶಗಳಿವೆ; ಜಿಲ್ಲಾಧಿಕಾರಿ
Law students have many opportunities in the future: District Magistrate
ಕೊಪ್ಪಳ 18: ಕಾನೂನು ವಿದ್ಯಾರ್ಥಿಗಳಿಗೆ ಬಹಳಷ್ಟು ಅವಕಾಶಗಳಿವೆ. ಜೀವನದಲ್ಲಿ ಅವುಗಳನ್ನು ಸದುಪಯೋಗಪಡಿಸಿಕೊಂಡು ಮುನ್ನಡೆಯಬೇಕು ಎಂದು ಕೊಪ್ಪಳ ಜಿಲ್ಲಾಧಿಕಾರಿ ಡಾ.ಸುರೇಶ ಇಟ್ನಾಳ ಹೇಳಿದರು. ಕೊಪ್ಪಳದಲ್ಲಿ ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾ ಅಂಗಸಂಸ್ಥೆ ಕೊಪ್ಪಳದ ಭಾರತರತ್ನ ಅಟಲ ಬಿಹಾರಿ ವಾಜಪೇಯಿ ಕಾನೂನು ಮಹಾವಿದ್ಯಾಲಯದ ಶುಭೋತ್ಸವ 2025- ವಿದ್ಯಾರ್ಥಿಗಳ ಕಾರ್ಯಚಟುವಟಿಕೆಗಳ ಫ್ರೆಶರ್ಸಡೆ ಕಾರ್ಯಕ್ರಮದಲ್ಲಿ ಗಣ್ಯಮಾನ್ಯರೊಂದಿಗೆ ಭಾಗವಹಿಸಿ ಸಮಾರಂಭಕ್ಕೆ ಚಾಲನೆ ನೀಡಿದರು.
ಹುಬ್ಬಳ್ಳಿ - ಧಾರವಾಡ ಮಹಾನಗರ ಪಾಲಿಕೆ ಮಾಜಿ ಮಹಾಪೌರರು ಸಭಾನಾಯಕರಾದ ಈರೇಶ ಅಂಚಟಗೇರಿ ಭಾಗವಹಿಸಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಡಾ ಸುರೇಶ ಇಟ್ನಾಳ ಅವರು ಭಾರತ ಸರ್ಕಾರ ನೂತನ ನ್ಯಾಯ ಸಂಹಿತೆಯನ್ನ ಅಳವಡಿಸಿದ್ದು ವಿದ್ಯಾರ್ಥಿಗಳು ನೂತನವಾಗಿ ಅಳವಡಿಸಿದ ಎಲ್ಲ ಕಾನೂನು ಪಠ್ಯವನ್ನು ಅಧ್ಯಯನ ಮಾಡಬೇಕು. ಮುಂಬರುವ ದಿನಮಾನಗಳಲ್ಲಿ ಪ್ರಸ್ತುತ ನೀತಿ ಸಂಹಿತೆಗಳಿಂದ ಕಾನೂನು ಪ್ರಕ್ರಿಯೆಗಳು ಜರುಗುವವು. ಕಾನೂನು ವೃತ್ತಿಯನ್ನಾಗಿ ಆಯ್ಕೆಮಾಡಿಕೊಂಡ ವಿದ್ಯಾರ್ಥಿಗಳಿಗೆ ಭವಿಷ್ಯದಲ್ಲಿ ಬಹಳಷ್ಟು ಅವಕಾಶಗಳಿರುತ್ತವೆ.
ಅವುಗಳನ್ನು ಸದುಪಯೋಗಪಡಿಸಿಕೊಳ್ಳಿ ಎಂದು ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಖ ಓ ಪರಾಂಡೆ, ಸಿಂಡಿಕೇಟ ಸದಸ್ಯರಾದ ಕಾನೂನು ವಿಶ್ವ ವಿದ್ಯಾಲಯ, ಶ್ರೀಶೈಲ ಯಕ್ಕುಂಡಿಮಠ, ಎಸ್.ರಾಧಾಕೃಷ್ಣನ್, ಬಸವರಾಜ ವಸ್ತ್ರದ , ಉಷಾದೇವಿ ಹಿರೇಮಠ, ಬಸವರಾಜ ಎಸ ಎಮ, ವಿದ್ಯಾರ್ಥಿಗಳು ಶಿಕ್ಷಕರು ಉಪಸ್ಥಿತರಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 