ವಿಕಸಿತ ಭಾರತ-ಗ್ಯಾರಂಟಿ ದಿಳ್ತಿ ಹಾಗೂ ಅಜೀವಿಕ ಮಿಷನ್ ಯೋಜನೆಗೆ ಚಾಲನೆ

ವಿಕಸಿತ  ಭಾರತ-ಗ್ಯಾರಂಟಿ ದಿಳ್ತಿ ಹಾಗೂ ಅಜೀವಿಕ ಮಿಷನ್ ಯೋಜನೆಗೆ ಚಾಲನೆ Launch of the Viksit Bharat-Guarantee Yatra and the Livelihood Mission scheme

ಲೋಕದರ್ಶನ ವರದಿ

ಹಾವೇರಿ 02:  ಗ್ರಾಮೀಣ ಭಾಗದ ಜನರ ಜೀವನಮಟ್ಟ ಸುಧಾರಣೆ ಹಾಗೂ ಉದ್ಯೋಗಾವಕಾಶಗಳನ್ನು ವಿಸ್ತರಿಸುವ ಉದ್ದೇಶದಿಂದ ವಿಕಸಿತ ಭಾರತ-ಗ್ಯಾರಂಟಿ ಫಾರ್ ರೋಜ್ಗಾರ್ ಹಾಗೂ ಅಜೀವಿ ಭಾರತ-ಗ್ಯಾರಂಟಿ (ವಿಬಿ-ಜಿ ರಾಮ್ಜಿ) ಯೋಜನೆಗೆ ಜುಲೈ 1ರಿಂದ ಜಾರಿಗೆ ತರಲಾಗಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ದಲ್ಜಿತ್ ಕುಮಾರ್ ತಿಳಿಸಿದ್ದಾರೆ.  ಜಿಲ್ಲಾ ಪಂಚಾಯತ್ ಸಭಾಭವನದಲ್ಲಿ ನಡೆದ ಯೋಜನೆಗಳ ಪ್ರಗತಿ ಪರೀಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಗ್ರಾಮೀಣ ಕುಟುಂಬಗಳಿಗೆ 125 ದಿನಗಳ ಅಕೌಶಲ್ಯ ಉದ್ಯೋಗ ನೀಡುವ ಅವಕಾಶವನ್ನು ಈ ಯೋಜನೆಯಡಿ ಕಲ್ಪಿಸಲಾಗಿದೆ ಎಂದು ಹೇಳಿದರು.  ಯೋಜನೆಯಡಿ ಕೇಂದ್ರ ಸರ್ಕಾರದಿಂದ ನಿಗದಿಪಡಿಸಿದ 318 ಕಾಮಗಾರಿಗಳನ್ನು ಹಂತಹಂತವಾಗಿ ಅನುಷ್ಠಾನಗೊಳಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಈಗಾಗಲೇ ಪ್ರಗತಿಯಲ್ಲಿರುವ ಕಾಮಗಾರಿಗಳನ್ನು ವೇಗವಾಗಿ ಪೂರ್ಣಗೊಳಿಸಬೇಕೆಂದು ಅವರು ತಿಳಿಸಿದರು.