ಲಕ್ಷ್ಮಿಕೊಪ್ಪಕೇರೆ ಅಷ್ಟಲಕ್ಷ್ಮಿ ನವದುರ್ಗಾದೇವಿ ದೇವರ ಪುನರ್ ಪ್ರತಿಷ್ಟಾಪನೆ

ಲಕ್ಷ್ಮಿಕೊಪ್ಪಕೇರೆ ಅಷ್ಟಲಕ್ಷ್ಮಿ ನವದುರ್ಗಾದೇವಿ ದೇವರ ಪುನರ್ ಪ್ರತಿಷ್ಟಾಪನೆ Lakshmikoppakere Ashtalakshmi Navadurgadevi Reincarnation of Goddess

ಲೋಕದರ್ಶನ ವರದಿ 

        ಶಿಗ್ಗಾವಿ 07 : ಧಾರ್ಮಿಕ ಕಾರ್ಯಕ್ರಮಗಳು ನಮ್ಮ ಸಂಸ್ಕೃತಿ, ಪರಂಪರೆ ಮತ್ತು ಸಾಮಾಜಿಕ ಒಗ್ಗಟ್ಟನ್ನು ಉಳಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ, ಇವು ಭಕ್ತರಲ್ಲಿ ಭಕ್ತಿಭಾವ ಮೂಡಿಸುವುದರ ಜೊತೆಗೆ ಸಾಮೂಹಿಕ ಪ್ರಾರ್ಥನೆಗೆ ಅವಕಾಶ ಕಲ್ಪಿಸುತ್ತವೆ ಎಂದು ಬಂಡಿವಾಡ ಸೀತಾಗಿರಿಯ ಸದ್ಗುರು ಸಮರ್ಥ ಡಾ. ಎ ಸಿ ವಾಲಿ ಮಹಾರಾಜರು ಹೇಳಿದರು. 

ತಾಲೂಕಿನ ಗಂಗೇನೂರ ಹತ್ತಿರದ ಲಕ್ಷ್ಮಿಕೊಪ್ಪಕೇರೆ ಅಷ್ಟಲಕ್ಷ್ಮಿ ನವದುರ್ಗಾದೇವಿ ದೇವರ ಪುನರ್ ಪ್ರತಿಷ್ಟಾಪನೆ ದೇವಸ್ಥಾನದ ಕಳಸಾರೋಹಣ ಹಾಗೂ ಲೋಕಾರೆ​‍್ಣ ಕಾರ್ಯಕ್ರಮದಲ್ಲಿ ಸಮ್ಮುಖವಹಿಸಿ ಆಶೀರ್ವಚನ ನೀಡಿದ ಶ್ರೀಗಳು, ಧಾರ್ಮಿಕ ಸಂಸ್ಕೃತಿ, ಸಂರಕ್ಷಣೆ ನಮ್ಮ ಪ್ರಾಚೀನ ಪರಂಪರೆ ಮತ್ತು ಆಚಾರ-ವಿಚಾರಗಳನ್ನು ಮುಂದಿನ ಪೀಳಿಗೆಗೆ ದಾಟಿಸುತ್ತವೆ, ಇದರಿಂದ ಸಾಮಾಜಿಕ ಒಗ್ಗಟ್ಟು ಊರಿನ ಜನರೆಲ್ಲರೂ ಒಂದಾಗಿ ಭಾಗವಹಿಸುವುದರಿಂದ ಸಮಾಜದಲ್ಲಿ ಒಗ್ಗಟ್ಟು ಮೂಡುತ್ತದೆ ಎಂದರು. 

ದಿವ್ಯ ಸಾನಿದ್ಯ ವಹಿಸಿ ಶಿಗ್ಗಾವಿ ವಿರಕ್ತಮಠದ ಸಂಗನಬಸವ ಮಹಾಸ್ವಾಮಿಗಳು ಮಾತನಾಡಿ, ಪ್ರತಿಯೊಬ್ಬರೂ ಮಾನವ ಧರ್ಮದ ನೆಲೆಗಟ್ಟಿನ ಮೇಲೆ ಬದುಕು ಸಾಗಿಸಲಾಗುತ್ತಿದೆ, ಜನರ ಭಾವನೆಗಳಿಗೆ ಅನುಸಾರವಾಗಿ ಧಾರ್ಮಿಕತೆಯು ನಮ್ಮ ಧರ್ಮದ ಜಾಗೃತಿ, ಮೌಲ್ಯ ಉಳಿಸಿ ಬೆಳೆಸಿಕೊಂಡು, ಬದುಕಿಗೆ ಅರ್ಥ ತಂದುಕೊಡುವಲ್ಲಿ ಪ್ರತಿಯೊಬ್ಬರೂ ಗಮನ ಹರಿಸಬೇಕಿದೆ, ಜೊತೆಗೆ ಭಕ್ತಿ ಮಾರ್ಗದ ಹುಡುಕಿದರೆ ಸನ್ಮಾನ ನಮಗೆ ದಾರಿ ತೋರಿಸುತ್ತದೆ ಎಂದರು. 

         ಬೆಳಿಗ್ಗೆಯಿಂದಲೇ ವೇ.ಮೂ ಮಂಜಯ್ಯ ಶಾಸ್ತ್ರಿಗಳ ವೈದಿಕತ್ವದಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಡಾ. ರಾಜೇಂದ್ರ ಅರಳೇಶ್ವರ, ಸಿ ಎನ್ ಕುಂಬಾರ, ಉಳುವಪ್ಪ ಹೊನ್ನಣ್ಣನವರ, ಡಾ. ಸಿ ಡಿ ಯತ್ನಳ್ಳಿ, ರುದ್ರ​‍್ಪ ಮುಂಡಗೋಡ, ಸಂತೋಷ್ ಕಟಗಿ, ಬಸವರಾಜ ಲಕ್ಷ್ಮಿಕೊಪ್ಪ, ಬಸಪ್ಪ ಚಳ್ಳಾಳ, ಶಶಿಕಾಂತ್ ರಾಠೋಡ, ರಮೇಶ ಹರಿಜನ, ಎಂ ಎಸ್ ಎಲಿಗಾರ ಸೇರಿದಂತೆ ಗಂಗೇನೂರ, ಕಾಮನಹಳ್ಳಿ ಗ್ರಾಮದ ಹಿರಿಯರು, ಸುತ್ತ ಮುತ್ತಲಿನ ಗ್ರಾಮದ ಭಕ್ತಾದಿಗಳು ಭಾಗವಹಿಸಿದ್ದರು.