ಗುರ್ಲಾಪೂರದಲ್ಲಿ ಲಕ್ಷ್ಮೀದೇವಿ ಜಾತ್ರೆ ಪ್ರಾರಂಭ
Lakshmi Devi fair begins in Gurlapur
ಗುರ್ಲಾಪೂರದಲ್ಲಿ ಲಕ್ಷ್ಮೀದೇವಿ ಜಾತ್ರೆ ಪ್ರಾರಂಭ
ಗುರ್ಲಾಪೂರ 14: ಪ್ರತಿ ವರ್ಷದಂತೆ ಈ ವರ್ಷವೂ ಗ್ರಾಮದ ಆರಾಧ್ಯದೇವರಾದ ಶ್ರೀ ಲಕ್ಷ್ಮೀದೇವಿ ಜಾತ್ರೆಯು ದಿ. 16ರಿಂದ 17 ರ ವರೆಗೆ ಅತೀ ವಿಜೃಂಭಣೆಯಿಂದ ಜರಗುವುದು. ಜಾತ್ರೆಯ ಪ್ರಾರಂಭದಲ್ಲಿ ಗ್ರಾಮದಲ್ಲಿ ಪ್ರತಿ ಮಂಗಳವಾರ ಹಾಗೂ ಶುಕ್ರವಾರ ಹೀಗೆ ಐದು ವಾರಗಳವರೆಗೆ ಗ್ರಾಮದಲ್ಲಿ ಅಂಗಡಿ ಮುಗ್ಗಟ್ಟುಗಳನ್ನು ಯಾವುದೇ ಕೆಲಸ ಕಾರ್ಯಕ್ಕೆ ಹೋಗದೆ ಸ್ವ-ಪ್ರೇರಿತವಾಗಿ ಯಾವುದೇ ಕೆಲಸದಲ್ಲಿ ತೊಡಗದೆ ಬಂದ್ ಮಾಡಿ ಗ್ರಾಮದಲ್ಲಿರುವ ದೇವರ ಗುಡಿಗಳಿಗಳಿಗೆ ಗ್ರಾಮದಲ್ಲಿ ಯಾವುದೆ ರೂಗ ರೂಜನ ಬಾರದಂತೆ ದೇವಿ ನಮ್ಮನು ಕಾಪಾಡಲಿ ಎಂದು ನೀರನ್ನು ಕೂಡಗಳಲ್ಲಿ ತಗೆದುಕೂಂಡು ದೇವಸ್ಥಾನದ ಆವರನದಲ್ಲಿ ಹಾಕುವರು. ನಂತರ ದೇವಸ್ಥಾನದ ಅಬಿವೃದ್ದಿಕುರಿತು ಚರ್ಚಸುವರು ಮತ್ತು ಜಾತ್ರೆಗೆ ಅಂಬಲಿ ಕಾಳು ತರಲು ಭಕ್ತರ ಮನೆ ಮನೆಗೆ ತರುವ ವಾಡಿಕೆ ಮಾಡುವರು. ಮಂಗಳವಾರ ದಿ.16 ರಂದು ಮುಂಜಾನೆ ಲಕ್ಷ್ಮೀದೇವಿ ಅಭಿಷೇಕ ಹಾಗೂ ಉಡಿ ತುಂಬುವುರು, ಸಾಯಂಕಾಲ ಖಾನಟ್ಟಿ ಶ್ರೀ ಶಿವಲಿಂಗೇಶ್ವರ ಪಲ್ಲಕ್ಕಿ ಬರಮಾಡಿಕೊಂಡು ಗ್ರಾಮದ ಸಮಸ್ತ ದೇವರುಗಳ ಒಕ್ಕೋರದಿಂದ ಪಲ್ಲಕ್ಕಿ ಉತ್ಸವ ಜರಗುವುದು. ರಾತ್ರಿ 10 ಗಂಟೆಗೆ ಡೊಳ್ಳಿನ ಪದ ಜರಗುವುದು. ಬುಧವಾರ ಸಮಸ್ತ ದೇವರುಗಳ ಪಲ್ಲಕ್ಕಿಯು ಹೂವು ಮತು ಬಂಡಾರ ಹಾರಿಸುತ್ತಾ ಪ್ರಮುಖ ಬೀದಿಗಳಲ್ಲಿ ಸಂಚರಿಸುತ್ತಾ ಸಕಲ ವಾದ್ಯ ಮೇಳದೊಂದಿಗೆ ಶ್ರೀ ಬಸವೇಶ್ವರ ದೇವಸ್ಥಾನ ತಲುಪಿ ಅಲ್ಲಿ ಡೂಳ್ಳಿನ ಪದಗಳನ್ನು ಹಾಡುವರು ಮತ್ತು ದತ್ತಿ ಆಟಗಳು ಜರಗುವುದು. ಜಾತ್ರೆಗೆ ಬಂದ ಭಕ್ತರಿಗೆ ನೇಲಗಡಲೆ ಬೆಲ್ಲ ಪ್ರಸಾದಮಾಡುವರು ನಂತರ ಪಲ್ಲಕ್ಕಿ ಉತ್ಸವ ಶ್ರೀ ಲಕ್ಷ್ಮೀದೇವಿ ದೇವಸ್ಥಾನ ತಲಪುವುದು. ನಂತರ ಮಹಾಪ್ರಸಾದ ಜರಗುವುದು. ನಂತರ ಸಂಜೆ 5 ಗಂಟೆಗೆ ಖಾನಟ್ಟಿ ಶ್ರೀ ಶಿವಲಿಂಗೇಶ್ವರ ಪಲ್ಲಕ್ಕಿಯನ್ನು ಸಕಲ ವಾದ್ಯ ಮೇಳದೊಂದಿಗೆ ಬೀಳಕೂಡುವರು. ಜಾತ್ರೆಯ ಅಂಗವಾಗಿ ಗ್ರಾಮದಲ್ಲಿ ಕಬಡ್ಡಿ ಪಂಧ್ಯಾವಳಿಗಳು 1 ನಿಮಿಷದ ಜೊಡೆತ್ತಿನ ಬಂಡಿ ಶರ್ತು ಜರಗುವುದು ಸೈಕಲ ಮೂಟಾರ ಹಾಗು ಟಗರಿನ ಕಾಳಗಳ ವಿವಿದ ಪದ್ಯಾವಳಿಗಳನ್ನು ಹಮ್ಮಿಕೋಂಡಿದ್ದಾರೆ ಗೆದ್ದ ತಂಡಗಳಿಗೆಬಹುಮಾನ ನೀಡಲಾಗುವುದು. ಎಂದು ಜಾತ್ರಾ ಕಮಿಟಿಯವರು ತಿಳಿಸಿರುತ್ತಾರೆ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 