ೋಕದರ್ಶನ ವರದಿ
ಶಿಗ್ಗಾವಿ : ತಾಲೂಕಿನ ಗೊಟಗೋಡಿಯ ಕನರ್ಾಟಕ ಜಾನಪದ ವಿಶ್ವವಿದ್ಯಾಲಯವು ಇದೇ ಸೆ. 28ಕ್ಕೆ ಜಾನಪದ ವಿವಿಯ ಸಂಸ್ಥಾಪನಾ ದಿನಾಚರಣೆ ಆಚರಿಸಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಹಾವೇರಿ ಜಿಲ್ಲೆಯ ಹಾಗೂ ಶಿಗ್ಗಾವಿ ತಾಲೂಕಿನ ಕೆಲ ಸ್ಥಳೀಯ ಕಲಾವಿಧರನ್ನು ಪ್ರತಿ ಕಾರ್ಯಕ್ರಮಕ್ಕೆ ಆಹ್ವಾನಿಸುವಲ್ಲಿ ಕಡೆಗಣಿಸಲಾಗುತ್ತಿದೆ ಎಂದು ಅಕ್ರೋಷ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಮುಗಳಿಯ ಕಲ್ಮೇಶ್ವರ ಜಾನಪದ ಕಲಾ ತಂಡ, ಮಲ್ಲಿಕಾಜರ್ುನ ಜಾನಪದ ಕಲಾ ತಂಡ, ಚಿಕ್ಕಮಣಕಟ್ಟಿಯ ಜೋಡಿ ಬಸವೇಶ್ವರ ಜಾನಪದ ಕಲಾ ತಂಡ, ರಾಣೆಬೆನ್ನೂರಿನ ಸೌರಭ ಜಾನಪದ ಕಲಾತಂಡ, ಹಾವೇರಿಯ ಜಿಲ್ಲಾ ಕಲಾ ಬಳಗ, ಹುರಳಿಕೊಪ್ಪಿಯ ವಿರಭದ್ರೇಶ್ವರ ಕಲಾ ಸಂಘ, ತಿಳವಳ್ಳಿಯ ಜೋಗಿ ಜಾನಪದ ಕಲಾ ತಂಡ, ಹಿರೇಲಿಂಗದಳ್ಳಿಯ ಗೀಗೀಪದ ಕಲಾತಂಡ, ಚಿಕ್ಕಬೆಂಡಿಗೇರಿಯ ದೊಡ್ಡಾಟ ಮಂಡಳಿ, ಹುರಳಿಕೊಪ್ಪಿಯ ಅಲಾವಿ ಮೇಳ ತಂಡ, ಯಕಲಾಶಪುರದ ಜನನಿ ಜಾನಪದ ಕಲಾ ತಂಡ ಸೇರಿದಂತೆ ಜಿಲ್ಲಾ ಮತ್ತು ತಾಲೂಕಿನ ಕಲಾವಿಧರು ಮತ್ತು ಕಲಾ ತಂಡಗಳು ಕನರ್ಾಟಕ ಜಾನಪದ ವಿಶ್ವವಿದ್ಯಾಲಯ ಸ್ಥಾಪನೆ ಆದಾಗಿನಿಂದ ಸ್ಥಳೀಯ ಕಲಾವಿಧರ ಕಡೆಗಣನೆ ಸಾಗುತ್ತಲೇ ಇದೆ, ಕಲೆಯ ಮತ್ತು ಕಲಾವಿಧರ ತವರೂರಂತಿರುವ ಹಾವೇರಿ ಜಿಲ್ಲೆ ಶಿಗ್ಗಾವಿ ತಾಲೂಕಿನಲ್ಲಿಯ ಕಲಾವಿಧರು ರಾಜ್ಯಾದ್ಯಂತ ಮತ್ತು ಟಿ ವಿ ಮಾದ್ಯಮದ ಮೂಲಕ ಕಲಾಸೇವೆಯಲ್ಲಿ ತೊಡಗಿದ್ದರೂ ಸ್ಥಳೀಯ ಜಾನಪದ ಕಲಾವಿಧರ ಕಡಗಣನೆ ಮುಗಿಯುವ ಲಕ್ಷಣ ಕಾಣುತ್ತಿಲ್ಲ ಎನಿಸುತ್ತಿದೆ, ಕಲಾವಿಧರ ಸ್ವಂತ ಪ್ರಯತ್ನದಿಂದ ಸಾಧನೆ ಮಾಡಿದ ಕಲಾವಿಧರ ಬಗ್ಗೆ ಕನರ್ಾಟಕ ಜಾನಪದ ವಿಶ್ವವಿದ್ಯಾಲಯ ತೋರಿಸುತ್ತಿರುವ ಖಾಳಜಿ ನಮ್ಮನ್ನು ಅತೀ ಬೇಸರ ತರಿಸಿದೆ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಕನರ್ಾಟಕ ಜಾನಪದ ವಿಶ್ವವಿದ್ಯಾಲಯ ಸ್ಥಾಪನೆಯಾಗಿ ಸ್ಥಳೀಯ ಕಲಾವಿಧರನ್ನು ಕಡೆಗಣಿಸಿರುವುದನ್ನು ಗಮನಿಸಿದಾಗ "ಹಿತ್ತಲಗಿಡ ಮದ್ದಲ್ಲ ಎಂಬ ನಾಣ್ಣುಡಿ ನೆನಪಾಗುತ್ತದೆ ಎಂದು ಅಕ್ರೋಷ ವ್ಯಕ್ತಪಡಿಸಿದ್ದಾರೆ.