ಕೆರೆ ಅಭಿವೃದ್ಧಿಯಿಂದ ಅಂತರಜಲಮಟ್ಟ ಹೆಚ್ಚಳ: ಶೀತಲ ಪಾಟೀಲ
Lake development will increase groundwater level: Sheetala Patil
ಕಾಗವಾಡ, 16 : ತಾಲೂಕಿನ ಉಗಾರ ಬುದ್ರಕ್ ಗ್ರಾಮದ ಅಭಿವೃದ್ಧಿಗಾಗಿ ಡಾ. ವಿರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಧರ್ಮಸ್ಥಳ ಯೋಜನೆಯವರು ಸಾಕಷ್ಟು ಸಹಕಾರ ನೀಡಿದ್ದಾರೆ. ಈಗ ಗ್ರಾಮದಲ್ಲಿಯ ಕೆರೆ ಹೂಳೆತ್ತುವ ಕಾರ್ಯ ಕೈಗೊಂಡಿರುವುದು, ಅವರ ಸಾಮಾಜಿಕ ಕಾಳಜಿ ನಿಜಕ್ಕೂ ಶ್ಲಾಘನೀಯವಾಗಿದೆ. ಇದರಿಂದ ಕೆರೆಯಲ್ಲಿ ನೀರಿನ ಮಟ್ಟದಲ್ಲಿ ಗಣನೀಯ ಪ್ರಮಾಣದ ಹೆಚ್ಚಳವಾಗುವುದುದೆಂದು ಕರ್ನಾಟಕ ಜೈನ ಅಸೋಸಿಯೇಷನ್‌ನ ಉಪಾಧ್ಯಕ್ಷರು, ಕೆರೆ ಸಮಿತಿಯ ಗೌರವ ಅದ್ಯಕ್ಷ ಹಾಗೂ ಗ್ರಾಮದ ಮುಖಂಡ ಶೀತಲ ಪಾಟೀಲ ಹೇಳಿದ್ದಾರೆ.
ಅವರು, ಶುಕ್ರವಾರ ದಿ. 16 ರಂದು ತಾಲೂಕಿನ ತಾಲೂಕಿನ ಉಗಾರ ಬುದ್ರಕ್ ಗ್ರಾಮದಲ್ಲಿ ತಾಲೂಕಾ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭೀವೃದ್ದಿ ಯೋಜನೆ, ಗ್ರಾಮ ಪಂಚಾಯತ ಹಾಗೂ ಕೆರೆ ಅಭಿವೃದ್ಧಿ ಸಮಿತಿ ಉಗಾರ ಬಿಕೆ ಇವರ ಸಹಭಾಗಿತ್ವದಲ್ಲಿ ಮಾದರಿ ನಮ್ಮೂರ ನಮ್ಮ ಕೆರೆ ಹೂಳೆತ್ತುವ ಕಾಮಗಾರಿ ಭೂಮಿ ಪೂಜೆ ನೆರವೇರಿಸಿ, ಮಾತನಾಡುತ್ತಿದ್ದರು.
ಹಮ್ಮಿಕೊಂಡಿದ್ದು ತಾಲೂಕು ಕ್ಷೇತ್ರ ಯೋಜನಾಧಿಕಾರಿಗಳಾದ ಶ್ರೀ ಸಂಜೀವ ಮರಾಠಿ ಅವರು ಕಾರ್ಯಕ್ರಮದಲ್ಲಿ ಕಾಗವಾಡ ಯೋಜನಾ ಕಚೇರಿಯ ಕಿರು ಪರಿಚಯ ಹಾಗೂ ವ್ಯಾಪ್ತಿಯ ಬಗ್ಗೆ ಈ ವರಗೆ ತಾಲೂಕಿನಲ್ಲಿ ಕೈಗೊಂಡಿರುವ
ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಮೋಹನರಾವ ಶಹಾ, ಧಾರವಾಡ ಪ್ರಾದೇಶಿಕ ಕಛೇರಿಯ ಕೆರೆ ಅಭಿಯಂತರರು ನಿಂಗರಾಜ ಮೊಳವಾಡ, ಧರ್ಮಸ್ಥಳ ಯೋಜನೆಯ ಅಥಣಿ ಜಿಲ್ಲಾ ನಿರ್ದೇಶಕಾರ ನಾಗರತ್ನಾ ಹೆಗಡೆ ಮಾತನಾಡಿದರು. ಈ ವೇಳೆ ಗ್ರಾ.ಪಂ. ಅಧ್ಯಕ್ಷೆ ಉಜ್ವಲಾ ಚೌಗಲೆ, ಕೆರೆ ಸಮಿತಿ ಅಧ್ಯಕ್ಷ ರಾಹುಲ ಶಹಾ, ಉಪಾಧ್ಯಕ್ಷ ದೀಪಕ ಪಾಟೀಲ, ಗ್ರಾ.ಪಂ. ಉಪಾಧ್ಯಕ್ಷರು ಹಾಗೂ ಕೆರೆ ಸಮಿತಿ ಕೋಶಾಧಿಕಾರಿ ಅಮೀನ ಶೇಖ, ಕೃಷಿ ಮೇಲ್ವಿಚಾರಕ ಶಿವಪ್ಪಾ ಶಿಪರಮಟ್ಟಿ, ವಲಯ ಮೇಲ್ವಿಚಾರಕಿ ಚನ್ನಮ್ಮ ಸುತಗಟ್ಟಿ ಸೇರಿದಂತೆ ಕೆರೆ ಸಮಿತಿಯ ಎಲ್ಲ ಸದಸ್ಯರು, ಗ್ರಾ.ಪಂ. ಸದಸ್ಯರು, ಗಣ್ಯರು, ಸೇವಾಪ್ರತಿನಿಧಿಗಳು, ಸ್ವ-ಸಹಾಯ ಸಂಘದ ಸದಸ್ಯರು, ಗ್ರಾಮಸ್ಥರು ಉಪಸ್ಥಿತರಿದ್ದರು.
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ 