ಕಾಗಿನೆಲೆ ಅಭಿವೃದ್ಧಿಯಿಂದ ಹಿಂದುಳಿಯಲು ಶಾಸಕರ ಇಚ್ಛಾಶಕ್ತಿಯ ಕೊರತೆಯೇ ಕಾರಣ: ಮೋಹನ್ ಕಿನ್ನಾಳ ಆಕ್ರೋಶ
ಬ್ಯಾಡಗಿ 16: ಕಾಗಿನೆಲೆ ಅಭಿವೃದ್ಧಿಯಿಂದ ಹಿಂದುಳಿಯಲು ಶಾಸಕ ಬಸವರಾಜ ಶಿವಣ್ಣನವರ ಇಚ್ಛಾಶಕ್ತಿಯ ಕೊರತೆಯೇ ಕಾರಣವಾಗಿದ್ದು, ಚುನಾವಣೆಯಲ್ಲಿ ಅವರು ನೀಡಿದ ಭರವಸೆಗಳಿಗಿಲ್ಲ ಕಿಮ್ಮತ್ತು ಮೂಲಭೂತ ಸೌಲಭ್ಯದಿಂದ ವಂಚಿತಗೊಂಡ ಗ್ರಾಮಕ್ಕೆ ಬೇಕಿದೆ ಕಾಯಕಲ್ಪವೆಂದು ತಾಲೂಕಾ ಜೆಡಿಎಸ್ ಅಧ್ಯಕ್ಷ ಮೋಹನ್ ಕಿನ್ನಾಳ ಆಕ್ರೋಶ ವ್ಯಕ್ತಪಡಿಸಿದರು.
ಗುರುವಾರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಸ್ವಾತಂತ್ರ್ಯ ದೊರೆತು 75 ವರ್ಷ ಕಳೆದರೂ ಕಾಗಿನೆಲೆ ಅಭಿವೃದ್ಧಿಗೆ ಸ್ವಾತಂತ್ರ್ಯ ದೊರೆತಿಲ್ಲ,ಶಾಸಕರು ಎರಡನೇ ಬಾರಿ ಆಯ್ಕೆಯಾಗಿದ್ದರೂ ಈ ಗ್ರಾಮದ ಋಣ ತೀರಿಸುವಂತ ಕಾರ್ಯ ಮಾಡಿಲ್ಲ, ಸಮಸ್ಯೆಗಳ ಸುಳಿಯಲ್ಲಿ ಈ ಗ್ರಾಮ ಸಿಲುಕಿದೆ, ಪರ್ಯಾಯ ಅಭ್ಯರ್ಥಿಗಳು ಸಿಗದೇ ಇರುವುದರಿಂದ ಜನ ನಿಮ್ಮನ್ನು 2 ನೆ ಬಾರಿ ಆಯ್ಕೆ ಮಾಡಿದ್ದಾರೆ.ಗ್ರಾಮದಲ್ಲಿ ಕುಡಿಯುವ ನೀರಿನ ಘಟಕ ಒಂದೇ ಇದೆ. ಚರಂಡಿ ವ್ಯವಸ್ಥೆಯಿಲ್ಲ, ಗ್ರಾಮದಲ್ಲಿ ಬಸ್ ನಿಲ್ದಾಣದ ತೊಂದರೆ ಹಾಗೂ ಬಸ್ ಗಳು ಕೊರತೆಯಿದೆ ಎಂದು ಆರೋಪಿಸಿದರು.ಸರ್ಕಾರಿ ಆಸ್ಪತ್ರೆಯಲ್ಲಿ ಬೆಡ್ ಗಳ ಸಮಸ್ಯೆ, ವೇಳೆಗೆ ಸರಿಯಾಗಿ ವೈದ್ಯರು ಬರುತ್ತಿಲ್ಲ ಇದರಿಂದಾಗಿ ರೋಗಿಗಳು ಪರದಾಡುತ್ತಿದ್ದಾರೆ. ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸಬೇಕು. ಕಡು ಬಡವರಿಗೆ ಮನೆ ವಿತರಿಸಬೇಕು. ಅಭಿವೃದ್ಧಿ ಪ್ರಾಧಿಕಾರದಂತೆ ಗ್ರಾಮವನ್ನು ಅಭಿವೃದ್ಧಿ ಮಾಡಬೇಕೆಂದು ಒತ್ತಾಯಿಸಿದರಲ್ಲದೇ ಮುಂದಿನ ದಿನಗಳಲ್ಲಿ ಬೃಹತ್ ಪ್ರತಿಭಟನೆ ಮಾಡುವುದಾಗಿ ಎಚ್ಚರಿಸಿದರು.ಮಾಜಿ ಸೈನಿಕ ಅಸಿಫ್ ಅಲಿ ಮತ್ತಿಹಳ್ಳಿ ಮಾತನಾಡಿ ಕಾಗಿನೆಲೆಯ ಯಾವುದೇ ಅಭಿವೃದ್ಧಿ ಕೆಲಸ ನನ್ನ ಹತ್ತಿರ ತರಬೇಡಿ ಎಂದು ರಾಜಕಾರಣಿಗಳು ಹೇಳುತ್ತಿದ್ದಾರೆ. ಈ ಗ್ರಾಮದ ಕೆಲಸವೆಂದರೆ ಮೂಗು ಮುರಿಯುತ್ತಿದ್ದಾರೆ. ಗ್ರಾಮದ ಜನರು ಕಾಂಗ್ರೆಸ್ ಬಿಟ್ಟು ಬೇರೆ ಪಕ್ಷಕ್ಕೆ ಮತ ನೀಡುವುದಿಲ್ಲ ಎನ್ನುವ ಉದಾಸಿನತೆಯಿಂದ ಶಾಸಕರು ಗ್ರಾಮವನ್ನು ನಿರ್ಲಕ್ಷ್ಯಿಸಿದ್ದಾರೆಂದು ಆರೋಪಿಸಿದರು.ಈ ಗ್ರಾಮದಲ್ಲಿ ಅಲ್ಪ ಸಂಖ್ಯಾತರ ಹೆಚ್ಚಿರುವ ಕಾರಣ ನಿರ್ಲಕ್ಷ್ಯ ವಹಿಸಿದೆ ಶಾದಿ ಮಹಲ್ ಕಟ್ಟಿಕೋಡಿ, ಪಂಚಾಯತ್ ಕಾರ್ಯಾಲಯ ಅಸ್ವಸ್ಥತೆಯಿಂದ ಕೂಡಿದೆ. ಉಪ ತಹಶೀಲ್ದಾರ್ ಕಚೇರಿ ಸಿಬ್ಬಂದಿಗೆ ಸರಿಯಾದ ಕಾರ್ಯಾಲಯವಿಲ್ಲ, ರಾಷ್ಟ್ರೀಯ ಬ್ಯಾಂಕ್ ಇಲ್ಲ, ಶಾಲಾ ಮಕ್ಕಳಿಗೆ ಆಟದ ಮೈದಾನ ಶೌಚಾಲಯದ ಕೊರತೆಯಿದೆ ಇಷ್ಟೆಲ್ಲಾ ಸಮಸ್ಯೆಗಳನ್ನು ಪರಿಹರಿಸುವುದು ಕಷ್ಟದ ಕೆಲಸವೇನಲ್ಲವೆಂದರು.ಈ ಎಲ್ಲ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿ ಕೊಡದೇ ಹೋದಲ್ಲಿ ಮುಂದೊಂದು ದಿನ ಕಾಗಿನೆಲೆಯಿಂದ ಬ್ಯಾಡಗಿ ತಾಲೂಕಾ ಕಛೇರಿವರೆಗೆ ಪಾದ ಯಾತ್ರೆಯ ಮೂಲಕ ಪ್ರತಿಭಟನೆ ಮಾಡುವುದಾಗಿ ಎಚ್ಚರಿಸಿದರು. ಈ ಸಂದರ್ಭದಲ್ಲಿ ಸಮಾಜ ಸೇವಕರಾದ ಮೋಹಿನ್ ಮುಲ್ಲಾ, ಮೆಹಬೂಬಲಿ ಎಲ್ಲಿಗಾರ ಸೇರಿದಂತೆ ಇತರರಿದ್ದರು.