ವಿದ್ಯಾರ್ಥಿಗಳಿಗೆ ಕೌಶಲ್ಯ ಕೊರತೆ: ಉದ್ಯೋಗ ಕ್ಷೇತ್ರದಲ್ಲಿ ಕೌಶಲ್ಯಕ್ಕೆ ಹೆಚ್ಚಿನ ಆದ್ಯತೆ
Lack of skills for students: More priority given to skills in the employment sector
ವಿದ್ಯಾರ್ಥಿಗಳಿಗೆ ಕೌಶಲ್ಯ ಕೊರತೆ: ಉದ್ಯೋಗ ಕ್ಷೇತ್ರದಲ್ಲಿ ಕೌಶಲ್ಯಕ್ಕೆ ಹೆಚ್ಚಿನ ಆದ್ಯತೆ
ಬಾಗಲಕೋಟೆ 17: ಇತ್ತೀಚಿನ ದಿನದಲ್ಲಿ ಉದ್ಯೋಗಕ್ಷೇತ್ರದಲ್ಲಿ ಕೌಶಲ್ಯಕ್ಕೆ ಹೆಚ್ಚಿನಆದ್ಯತೆ ನೀಡಲಾಗುತ್ತಿದೆ. ಉದ್ಯೋಗದಾತರು ಕೌಶಲ್ಯನಿರತ ಉದ್ಯೋಗಿಗಳ ಆಕಾಂಕ್ಷೆಯಲ್ಲಿ ಇರುವುದರಿಂದ ನಮ್ಮ ಪದವಿಯಿಂದಲ್ಲ ಕೌಶಲ್ಯದಿಂದಉದ್ಯೋಗ ಸೃಷ್ಟಿಯಾಗುತ್ತಿವೆ ಎಂದು ಅಗಸ್ತ್ಯ ಫೌಂಡೇಶನ್ ವಿಜಯಪುರ ವಿಭಾಗದಕ್ಯಾಟಲೈಝರ್ ದಿನೇಶ್‌ರಾಠೋಡ್ ಹೇಳಿದರು. ನಗರದ ಬಿವಿವಿ ಸಂಘದ ಬಸವೇಶ್ವರ ಕಲಾ ಮಹಾವಿದ್ಯಾಲಯದಲ್ಲಿಅಗಸ್ತ್ಯ ಫೌಂಡೇಶನ್, ಮಹಾವಿದ್ಯಾಲಯದ ಪ್ಲೇಸ್ಮೆಂಟ್ ಸೆಲ್, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ಹಾಗೂ ಕಂಪ್ಯೂಟರ್‌ಅಪ್ಲಿಕೇಶನ್ ವಿಭಾಗಗಳ ಸಹಯೋಗದಲ್ಲಿ ಹಮ್ಮಿಕೊಂಡ ಸೃಜನಾತ್ಮಕಕೌಶಲ್ಯತರಬೇತಿಕುರಿತು ಮೂರು ದಿನದಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದಅವರು ನಾವೆಲ್ಲರೂತಂತ್ರಜ್ಞಾನದಜೊತೆಗೆ ಸಾಗಬೇಕಾಗಿದೆ. ಎಐ ಎಲ್ಲಕ್ಷೇತ್ರದಲ್ಲಿಯೂ ಪ್ರಭಾವ ಬೀರುತ್ತಿದ್ದುಅದರೊಂದಿಗೆ ಹೊಂದಿಕೊಳ್ಳುವುದು ಅವಶ್ಯಕ.ಪದವಿ ಮತ್ತು ಅಂಕಪಟ್ಟಿಗಳನ್ನು ಬದಿಗಿಟ್ಟುಕೌಶಲ್ಯವನ್ನುಅರಿಸುವ ದಿನಮಾನಗಳು ಹತ್ತಿರವಾಗಿದ್ದು ಬೇರೆ ಬೇರೆ ಕೌಶಲ್ಯಗಳಲ್ಲಿ ಪರಿಣಿತರಾಗಬೇಕುಅದಕ್ಕಾಗಿ ನಿರಂತರ ಪ್ರಯತ್ನ ಮತ್ತುಅಭ್ಯಾಸಅವಶ್ಯಕಎಂದರು.
ಪ್ರತಿಯೊಬ್ಬರ ಬಳಿಯೂ ವಿವಿಧ ಕೌಶಲ್ಯಗಳಿದ್ದು ಅವುಗಳನ್ನು ಹೊರಹಾಕುವ ಸಾಮರ್ಥ್ಯವನ್ನು ವಿದ್ಯಾರ್ಥಿಗಳು ಬೆಳಸಿಕೊಳ್ಳಬೇಕು ಅಗಸ್ತ್ಯ ಫೌಂಡೇಶನ್ ವತಿಯಿಂದ ಹಮ್ಮಿಕೊಂಡ ಮೂರ ದಿನಗಳ ವಿಶೇಷ ತರಭೇತಿಯಲ್ಲಿಅತ್ಯುತ್ತಮವಾಗಿ ಭಾಗವಹಿಸಿದ ವಿದ್ಯಾರ್ಥಿಗಳನ್ನು ಬೂಟ್‌ಕ್ಯಾಂಪ್ ಗೆ ಆಯ್ಕೆ ಮಾಡಿ ವಿಶೇಷ ತರಬೇತಿ ನೀಡಲಾಗುವುದು.ಕೌಶಲ್ಯಇದ್ದರೆಉದ್ಯೋಗವೇ ನಿಮ್ಮನರಸಿ ಬರುತ್ತದೆ.ನಾವು ಎಲ್ಲರಿಗಿಂತಲೂ ವಿಶಿಷ್ಟವಾಗಿರಬೇಕು.ಆಗ ನಮ್ಮಲ್ಲಿರುವಜ್ಞಾನವನ್ನುಚಿಮ್ಮಿಸಲು ಸಾಧ್ಯ. ಶ್ರದ್ದೆ, ಪ್ರಯತ್ನದಿಂದಕೌಶಲ್ಯಾಭಿವೃದ್ಧಿಎಂದು ವಿದ್ಯಾರ್ಥಿಗಳಿಗೆ ಶ್ಲಾಘಿಸಿದರು.
ಅತಿಥಿಸ್ಥಾನ ವಹಿಸಿದ ಪ್ರಾಚಾರ್ಯರಾದ ಎಸ್.ಆರ್.ಮೂಗನೂರಮಠಅವರು ಮಾತನಾಡಿ ಪ್ರತಿಯೊಬ್ಬರೂ ಸಂವಹನ ಮತ್ತು ಎಐ ಬಳಸಿಕೊಂಡು ಕೆಲಸ ಮಾಡಬೇಕು.ಎಐಯಿಂದ ವಿಷಯವನ್ನುಉತ್ತಮವಾಗಿ ನಿರೂಪಿಸಲು ಸಹಾಯಕ. ಸಮುದಾಯದಅಗತ್ಯತೆಯನ್ನು ಪೂರೈಸುತ್ತದೆ.ಉದ್ಯೋಗ ಮಾರುಕಟ್ಟೆಯಲ್ಲಿಗಟ್ಟಿಯಾಗಿ ನಿಲ್ಲಿಸುತ್ತದೆ.ಅಂತರ್‌ಕೌಶಲ್ಯ, ಸಾಮರ್ಥ್ಯವನ್ನು ಅನಾವರಣಗೊಳಿಸಲು ಎಐ ಸಹಕಾರಿ.ಜೊತೆಗೆಕಡಿಮೆ ಸಮಯದಲ್ಲಿ ಸಮಸ್ಯೆಯನ್ನು ಬಗೆಹರಿಸುತ್ತದೆ. ಇದನ್ನು ಸಮರ್ಥವಾಗಿ ಬಳಸಿಕೊಂಡರೆ ನಿಮ್ಮಲ್ಲಿರುವ ಹೊಳಪು ಹೆಚ್ಚುತ್ತದೆಎಂದರು. ಕಾರ್ಯಕ್ರಮದಲ್ಲಿ ಪ್ಲೇಸ್ಮೆಂಟ್ ಸೆಲ್ ಮುಖ್ಯಸ್ಥರಾದಎಸ್.ವಿ. ಕಟ್ಟಿಅವರು ಪ್ರಾಸ್ತವಿಕವಾಗಿ ಮಾತನಾಡಿದರು. ಐಕ್ಯೂಎಸಿ ಸಂಯೋಜಕರಾದಡಾ.ಎ.ಯು.ರಾಠೋಡ್, ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರಾದ ಐ.ಬಿ. ಚಿಕ್ಕಮಠ, ಕಾರ್ಯಕ್ರಮ ಸಂಯೋಜಕರಾದ ಮಹಾಂತೇಶ ಪಿ.ದೊಡವಾಡ ಹಾಗೂ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 