ರಬಕವಿಯಲ್ಲಿ ಎಲ್‌ಪಿಜಿ ಪಂಚಾಯತ ಕಾರ್ಯಕ್ರಮ
LPG Panchayat Program at Rabkavi
ರಬಕವಿ-ಬನಹಟ್ಟಿ : ಮುಂಜಾಗ್ರತಾ ಕ್ರಮಗಳಿಂದ ಅಗ್ನಿಅವಘಡ ನಿಯಂತ್ರಿಸಲು ಸಾಧ್ಯಎಂದು ಮುಖ್ಯ ಗುರುಗಳಾದ ಪಿ. ಎಚ್. ಪ್ರತಾಪ್ ಸಲಹೆ ನೀಡಿದರು. ರಬಕವಿ ಹಳೇ ಬಸ್ ನಿಲ್ದಾಣದ ಬಳಿ ಇರುವರಬಕವಿ ಶಿಕ್ಷಣ ಸಂಸ್ಥೆಯ ಬಾಲಕಿಯರ ಶಾಲೆಯ ಆವರಣದಲ್ಲಿ ರಬಕವಿ-ಬನಹಟ್ಟಿ ಭಾರತ ಗ್ಯಾಸ ಸರ್ವಿಸ್‌ನವರು ಹಮ್ಮಿಕೊಂಡಿದ್ದ ಎಲ್‌ಪಿಜಿ ಪಂಚಾಯತ್ ಕಾರ್ಯಕ್ರಮದ ಅವರು ಭಾಗವಹಿಸಿ ಮಾತನಾಡಿದರು.
ಅಗ್ನಿಶಾಮಕ ಠಾಣಾ ಅಧಿಕಾರಿಗಳು ತೈಲ ಬೆಂಕಿ, ಗ್ಯಾಸ್ ಫೈರ್, ಎಲೆಕ್ಟ್ರಿಕಲ್ ಮತ್ತು ಮೆಟಲ್ ಫೈರ್ 4 ವಿಧದ ಬೆಂಕಿಯನ್ನು ಬೆಂಕಿಯ ತೀವ್ರತೆಯನ್ನು ಆಧರಿಸಿ ನಂದಿಸಬೇಕು. ನೀರಿನಿಂದತಣಿಸುವಿಕೆ, ಬೇರಿ್ಡಸುವಿಕೆ, ಮುಚ್ಚುವಿಕೆ. ಬೆಂಕಿಯನ್ನು ನಂದಿಸುವ ವಿಧಾನಗಳು. ಯಾವ ಬಗೆಯ ಬೆಂಕಿಗೆ ಯಾವುದನ್ನು ಬಳಸಬೇಕು ಎಂಬ ಮಾಹಿತಿ ಅಗತ್ಯಎಂದು ಮಾಹಿತಿ ನೀಡಿದರು.
ಈ ಕಾರ್ಯಕ್ರಮದಲ್ಲಿ ರಬಕವಿ-ಬನಹಟ್ಟಿ ಅಗ್ನಿಶಾಮಕ ಠಾಣೆ ಸಿಬ್ಬಂದಿ ಕೆಲವು ಪ್ರಾತ್ಯಕ್ಷಿಕೆಗಳನ್ನು ಮಾಡುವ ಮೂಲಕ ಜನರಲ್ಲಿ ಅಗ್ನಿ ಅವಘಡಗಳ ಬಗ್ಗೆ ಅರಿವು ಮೂಡಿಸಿದರು. ಅಗ್ನಿ ಶಾಮಕ ಠಾಣೆಯ ಎಲ್ಲ ಸಿಬ್ಬಂದಿಗಳಿಗೆ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಭಾರತ ಗ್ಯಾಸಿನ ವ್ಯವಸ್ಥಾಪಕರಾದ ಸಂಗಮೇಶ ಗುಣಕಿ, ಇತರ ಸಿಬ್ಬಂದಿ ಹಾಗೂ ಶಾಲೆಯ ಶಿಕ್ಷಕರು, ವಿದ್ಯಾರ್ಥಿನಿಯರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 