ಬಿ.ಈಡಿ ಕಾಲೇಜಿಗೆ ಎಲ್‌ಐಸಿ ಟೀಮ್ ಭೇಟಿ
LIC team visits B.Ed College
ಮುಧೋಳ 24: ಬಾಗಲಕೋಟ ಬಿವ್ಹಿವ್ಹಿ ಸಂಘದ ಮುಧೋಳದ ಎಸ್.ಆರ್.ಕಂಠಿ ಪದವಿ ಮಹಾವಿದ್ಯಾಲಯದಲ್ಲಿ 2026-27ನೇ ಶೈಕ್ಷಣಿಕ ಸಾಲಿಗೆ ನೂತನವಾಗಿ ಆರಂಭವಾಗಲಿರುವ ದ್ವೀತಿಯ ಪಿಯುಸಿ ನಂತರದ ನಾಲ್ಕು ವರ್ಷದ ಸಂಯುಕ್ತ ಬಿ.ಈಡಿ ಕೋರ್ಸ್ (ಐಟಿಇಪಿ) ಗೆ ಜಮಖಂಡಿಯ ಬಾಗಲಕೋಟ ವಿಶ್ವವಿದ್ಯಾಲಯದ ಸ್ಥಳೀಯ (ಸ್ಥಾನಿಕ) ತನಿಖಾ ದಳದ ತಂಡವು (ಎಲ್‌ಐಸಿ) ಬುಧವಾರ ದಂದು ಭೇಟಿ ನೀಡಿತು.
ಬಾಗಲಕೋಟ ವಿಶ್ವವಿದ್ಯಾಲಯದ ಸ್ಥಳೀಯ (ಸ್ಥಾನಿಕ) ವಿಚಾರಣಾ ಸಮಿತಿಯ ಅಧ್ಯಕ್ಷ ಡಾ.ಮಹೇಶ ಚಿಂತಾಮಣಿ ಹಾಗೂ ಸದಸ್ಯ ಡಾ.ಯಂಕೋಭಾ ನಾರಾಯಣಪ್ಪ ಅವರು ಮಹಾವಿದ್ಯಾಲಯದ ಮೂಲಭೂತ ಸೌಕರ್ಯ ಮತ್ತು ಸೌಲಭ್ಯಗಳ ಕುರಿತು ಸಮಗ್ರವಾಗಿ ಪರೀಶೀಲನೆ ಮಾಡಿ, ಸಂಯೋಜನಗೆ ಒಳಪಡಿಸಲು ರಾಜ್ಯ ಸರ್ಕಾರಕ್ಕೆ ಶಿಫಾರಸು ಮಾಡಿದರು. ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಮಲ್ಲಿಕಾರ್ಜುನ ಜರಕುಂಟಿ ಅವರು ಸಂಬಂಧಪಟ್ಟ ಎಲ್ಲ ದಾಖಲೆಗಳನ್ನು ಎಲ್‌ಐಸಿ ತಂಡಕ್ಕೆ ಒದಗಿಸಿದರು.
ಇದೇ ಸಂದರ್ಭದಲ್ಲಿ ಬಿವ್ಹಿವ್ಹಿ ಸಂಘದ ಆಡಳಿತ ಮಂಡಳಿಯ ಸದಸ್ಯ ಎಸ್.ಆರ್.ಮನಹಳ್ಳಿ ಹಾಗೂ ಬಾಗಲಕೋಟ ಬಸವೇಶ್ವರ ಕಲಾ ಮಹಾವಿದ್ಯಾಲಯದ ಪ್ರಾಚಾರ್ಯ ಎಸ್.ಆರ್.ಮುಗನೂರಮಠ ಅವರು ಆಡಳಿತ ಮಂಡಳಿಯ ಪ್ರತಿನಿಧಿಗಳಾಗಿ ಭಾಗವಹಿಸಿದ್ದರು. ಸಂಯುಕ್ತ ಬಿ.ಈಡಿ ಸಂಯೋಜಕರಾದ ಡಾ.ವ್ಹಿ.ಡಿ.ಹೂಲಗೇರಿ, ಡಾ.ಎಮ್.ಕೆ. ಗವಿಮಠ ಮತ್ತು ಬೋಧಕ-ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 