ಹಾವೇರಿ ಜಿಲ್ಲಾ ನೋಟರಿ ಸಂಘದ ಅಧ್ಯಕ್ಷರಾಗಿ ಕುಮಾರ ಮಡಿವಾಳರ ಆಯ್ಕೆ
Kumar Madiwala elected as President of Haveri District Notary Association
ರಾಣೆಬೆನ್ನೂರ:1 ಕರ್ನಾಟಕ ರಾಜ್ಯ ನೋಟರಿ ಸಂಘದ ಸಲಹಾ ಸಮೀತಿಯ ಸದಸ್ಯ ಎಮ್. ಸಿ. ನಡುವಿನಮಠ, ಸಂಘದ ಉಪಾಧ್ಯಕ್ಷ ಆರ್. ವ್ಹಿ. ಬೆಳಕೇರಿಮಠ ಹಾಗೂ ಕಾರ್ಯಕಾರಿ ಮಂಡಳಿಯ ಸದಸ್ಯ ಜಿ. ಕೆ. ಕಮ್ಮಾರ ಹಾಗೂ ಜಿಲ್ಲೆಯ ರಾಣೇಬೆನ್ನೂರ, ಹಾವೇರಿ, ಶಿಗ್ಗಾಂವ, ಸವಣೂರ, ಹಾನಗಲ್ಲ, ಬ್ಯಾಡಗಿ, ಹಿರೇಕೆರೂರು, ರಟ್ಟೀಹಳ್ಳಿ, ತಾಲೂಕುಗಳ ಎಲ್ಲಾ ನೋಟರಿಗಳು ರವಿವಾರ ಸಭೆ ಸೇರಿ, 2026-2027ನೇ ಸಾಲಿಗಾಗಿ ನೂತನವಾಗಿ ಹಾವೇರಿ ಜಿಲ್ಲಾ ನೋಟರಿ ಅಧ್ಯಕ್ಷರನ್ನಾಗಿ ಸ್ಥಳೀಯ ಕುಮಾರ ಡಿ. ಮಡಿವಾಳರ ಇವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಹಾವೇರಿಯ ಕೆ. ಸಿ. ರಜಪೂತ ಜಿಲ್ಲಾ ಕಾರ್ಯದರ್ಶಿಯಾಗಿ, ಹಾವೇರಿಯ ಎನ್. ಎಸ್. ಪಾಟೀಲ ಜಿಲ್ಲಾ ಸಂಚಾಲಕರಾಗಿ, ಸವಣೂರಿನ ಎಸ್. ಎಸ್. ಕೆರಿಯವರ, ಶಿಗ್ಗಾಂವಿಯ ಬಿ. ಎಮ್. ಸುಂಕದ, ಬ್ಯಾಡಗಿಯ ಕೆ. ಡಿ. ಪಾಟೀಲ, ಹಿರೇಕೆರೂರಿನ ದುರ್ಗೇಶ ತಿರಕಣ್ಣನವರ, ರಾಣೆಬೆನ್ನೂರಿನ ಪಿ. ಎಸ್. ಪಾಟೀಲ, ಹಾನಗಲ್ಲಿನ ಎಮ್. ಹೆಚ್. ತೊಗರಳ್ಳಿ, ಹಾವೇರಿಯ ಎಮ್. ಸಿ. ಮರಡಿ ಇವರುಗಳನ್ನು ಸದಸ್ಯರಾಗಿ ಆಯ್ಕೆ ಮಾಡಲಾಯಿತು ಎಂದು ಜಿಲ್ಲಾ ನೋಟರಿ ಸಂಘವು ಪ್ರಕಟಣೆಯಲ್ಲಿ ತಿಳಿಸಿದೆ.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 