ಹಿ​‍​‍್ರ​‍್ಪ ಆಣೆಕಟ್ಟಿನ ಗೇಟ್ ಮುರಿದ ಪರಿಣಾಮ ಖಾಲಿಯಾದ ಕೃಷ್ಣೆ, ಜನತೆ, ರೈತರಿಗೆ ಹೆಚ್ಚಿದ ಜಲಕ್ಷಾಮದ ಆತಂಕ !

ಹಿ​‍​‍್ರ​‍್ಪ ಆಣೆಕಟ್ಟಿನ ಗೇಟ್ ಮುರಿದ ಪರಿಣಾಮ ಖಾಲಿಯಾದ ಕೃಷ್ಣೆ,  ಜನತೆ, ರೈತರಿಗೆ ಹೆಚ್ಚಿದ ಜಲಕ್ಷಾಮದ ಆತಂಕ ! Krishna river emptied due to broken gate of Hirpa dam, increasing fear of water scarcity for people

         ರಬಕವಿ-ಬನಹಟ್ಟಿ 10: ಹಿಪ್ಪರಗಿ ಬ್ಯಾರೇಜ್‌ಗೆ ಕರಾಳ ದಿನಗಳು ಒಕ್ಕರಿಸಿದ್ದು, ಕಳೆದ ಮಂಗಳವಾರದಿಂದ ಐದು ದಿನ ಸಾಕಷ್ಟು ಪ್ರಮಾಣದ ನೀರು ಬ್ಯಾರೇಜ್‌ನಿಂದ ಖಾಲಿಯಾಗಿರುವದು ನಿಜಕ್ಕೂ ಇಲ್ಲಿನ ನಾಗರಿಕರಿಗೆ, ರೈತರಿಗೆ ಜೀರ್ಣಿಸಿಕೊಳ್ಳಲಾಗದ ವಿಷಯವಾಗಿದ್ದು, ರಾಜ್ಯ ಸರ್ಕಾರದ ಬೇಜವಾಬ್ದಾರಿ ಮತ್ತು ನೀರಾವರಿ ನಿಗಮದ ಅಧಿಕಾರಿಗಳ ಹೊಣೆಗೇಡಿತನದಿಂದ ಮುಂದಿನ ಆರು ತಿಂಗಳು ಕುಡಿಯುವ ನೀರು ಹಾಗೂ ಬೆಳೆದು ನಿಂತಿರುವ ಪೈರಿಗೆ ನೀರುಣಿಸಲು ಹೇಗೆಂದು ಹಿನ್ನೀರಿನ ಜನತೆ ಹಾಗೂ ರೈತರು ಕಂಗಾಲಾಗಿ ತಲೆ ಮೇಲೆ ಕೈಹೊತ್ತು ಕುಳಿತುಕೊಳ್ಳುವ ದುಸ್ಥಿತಿ ಬಂದೊದಗಿದೆ.  

ರೈತರೊಡನೆ ವಿಧಾನ ಪರಿಷತ್ ಸದಸ್ಯ ಹನುಮಂತ ನಿರಾಣಿ ಜಲಾಶಯಕ್ಕೆ ಭೇಟಿ ನೀಡಿ ಬ್ಯಾರೇಜ್‌ನ ಗೇಟ್ ನಂ.22 ಹಾಗೂ ನೀರಿನ ಪ್ರಮಾಣ ವೀಕ್ಷಣೆ ನಂತರ ಮಾತನಾಡಿದ ಅವರು, ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯ ಹಾಗೂ ಸರ್ಕಾರದ ಮಲತಾಯಿ ಧೋರಣೆಯಿಂದ ಈ ಅವಘಡ ಸಂಭವಿಸಿದೆ. 15 ವರ್ಷಕ್ಕೊಮ್ಮೆ ಬದಲಿಸಬೇಕಾದ ಬ್ಯಾರೇಜ್‌ನ ಗೇಟ್‌ಗಳ ಪ್ಲೇಟ್‌ಗಳು 21 ವರ್ಷಗಳಾದರೂ ಅವುಗಳನ್ನೇ ಬಳಕೆ ಮಾಡುತ್ತಿದ್ದಾರೆ. ಉತ್ತರ ಕರ್ನಾಟಕದ ಜಲಾಶಯ ಹಾಗೂ ಬ್ಯಾರೇಜ್‌ಗಳೆಂದರೆ ಸರ್ಕಾರಕ್ಕೆ ನಿರ್ಲಕ್ಷ್ಯವೆಂಬುದಕ್ಕೆ ಇದೇ ನಿದರ್ಶನವೆಂದು ನಿರಾಣಿ ಸರ್ಕಾರದ ವಿರುದ್ಧ ಹರಿಹಾಯ್ದರು. 

         ಗೇಟ್‌ನ ದುರಸ್ಥಿ ಕಾರ್ಯ ಸಮರ​‍್ಕವಾಗಿಲ್ಲ. ಗೇಟ್‌ಗೆ ಪ್ಲೇಟ್ ಅಳವಡಿಕೆ ಬಳಿಕವೂ ಇನ್ನೂ ಶೇ.20 ರಷ್ಟು ಹೊರ ಹರಿವಿನ ಪ್ರಮಾಣವಿದೆ. ನಿತ್ಯ 400ಕ್ಯೂಸೆಕ್ ತೇಪೆ ಕಾಮಗಾರಿಯಿಂದಾಗಿ ನಿರಂತರ ಹೊರಹೋಗುತ್ತಿದ್ದು, ಉಳಿದ ಗೇಟ್‌ಗಳು ಕೂಡ ದುರ್ಬಲವಾಗಿದ್ದು, ಅವು ಯಾವಾಗ ಕೈಕೊಡುತ್ತವೆ ಎಂಬ ಭಯ ಜನತೆಯನ್ನು ಇನ್ನಷ್ಟು ಬೆಚ್ಚಿ ಬೀಳುವಂತೆ ಮಾಡುತ್ತಿದೆ. ಇದರಿಂದ ಮತ್ತಷ್ಟು ನೀರು ಹಿಪ್ಪರಗಿ ಬ್ಯಾರೇಜ್‌ನಿಂದ ಖಾಲಿಯಾಗುವ ಸಂಭವವಿದೆ. ಈಗಾಗಲೇ ಅರ್ಧದಷ್ಟು ನೀರು ಖಾಲಿಯಾಗಿದೆ. ಮುಂದಿನ ದಿನಗಳು ಭೀಕರತೆಗೆ ಕಾಡಲಿದ್ದು, ಈ ಭಾಗದ ರೈತರ ಬೆಳೆಗೆ ಹಾಗೂ ಸಾರ್ವಜನಿಕರ ಕುಡಿಯುವ ನೀರಿಗೆ ಹಾಹಾಕಾರವಾಗುವ ಮುಂಚೆಯೇ ಸರ್ಕಾರ ಮುನ್ನೆಚ್ಚರಿಕೆ ಕ್ರಮ ವಹಿಸಬೇಕೆಂಬುದು ಜನತೆಯ ಒಕ್ಕೊರಲಿನ ಆಗ್ರಹವಾಗಿದೆ. 

          ‘ಮಹಾ’ ನೀರು ಬಂದೀತೆ ? : ಬೆಳಗಾವಿ ಹಾಗೂ ಬಾಗಲಕೋಟ ಜಿಲ್ಲೆಗಳ ಕುಡಚಿ, ರಾಯಬಾಗ, ಅಥಣಿ, ರಬಕವಿ-ಬನಹಟ್ಟಿ, ತೇರದಾಳ, ಮಹಾಲಿಂಗಪುರ ನಗರ ಹಾಗೂ ನೂರಾರು ಗ್ರಾಮಗಳಿಗೆ ಜೀವಜಲವಾಗಿರುವ ಕೃಷ್ಣೆಯ ಒಡಲು ಸಂಪೂರ್ಣ ಬತ್ತಿರುವುದರಿಂದ ಹನಿ ನೀರಿಗೂ ತತ್ವಾರ ಪಡುವಂತಾಗಿದೆ. ರಾಜ್ಯ ಸರ್ಕಾರ ಉತ್ತರ ಕರ್ನಾಟಕದ ಎಲ್ಲ ಶಾಸಕ, ವಿಧಾನ ಪರಿಷತ್ ಸದಸ್ಯರು ಹಾಗೂ ಸಂಸದರನ್ನೊಳಗೊಂಡು ಮಹಾರಾಷ್ಟ್ರದಿಂದ ಕನಿಷ್ಠ 2 ಟಿಎಂಸಿಯಷ್ಟು ನೀರನ್ನು ತಕ್ಷಣವೇ ಬಿಡುಗಡೆಗೆ ಮುಂದಾಗುವ ಮೂಲಕ ಸಮಸ್ಯೆಗೆ ಕನಿಷ್ಟ ಪರಿಹಾರ ಕಾಣಲು ಸಾಧ್ಯ.  

          ಈಗಾಗಲೇ ತುಂಗಭದ್ರ ಜಲಾಶಯಕ್ಕೆ ಹೊಸ ಗೇಟ್‌ಗಳನ್ನು ಅಳವಡಿಸುವ ಯೋಜನೆ ಸರ್ಕಾರ ಮಾಡಿದೆ. ಅದೇ ರೀತಿ ಹಿಪ್ಪರಗಿ ಬ್ಯಾರೇಜ್‌ನ ಎಲ್ಲ 22 ಗೇಟ್‌ಗಳನ್ನೂ ಹೊಸದಾಗಿ ಅಳವಡಿಸುವ ಕಾರ್ಯ ಮಾಡಬೇಕೆಂದು ಮಾಜಿ ಶಾಸಕ ಆನಂದ ನ್ಯಾಮಗೌಡ ಮತ್ತು ಸಿದ್ದು ಕೊಣ್ಣೂರ ಡಿಸಿಎಂ ಡಿ.ಕೆ.ಶಿವಕುಮಾರ ಗಮನಕ್ಕೆ ತಂದಿದ್ದು, ಅವರಿಂದ ಹಸಿರು ನಿಶಾನೆ ದೊರೆತಿದೆ ಎನ್ನಲಾಗುತ್ತಿದೆ. ಊರು ಕೊಳ್ಳೆರ ಹೊಡೆದ ಮೇಲೆ ದಡ್ಡಿ ಬಾಗಿಲು ಹಾಕಿದರು ಎಂಬಂತಾಗದೇ ರಾಜ್ಯ ಸರ್ಕಾರ ಕನೀನಿ ಅಧಿಕಾರಿಗಳಿಗೆ ಎಲ್ಲ ಗೇಟ್‌ಗಳ ಅಳವಡಿಕೆಗೆ ತಗುಲುವ ವೆಚ್ಚದ ಮಾಹಿತಿ ಪಡೆದು ಎಲ್ಲ 22 ಗೇಟ್‌ಗಳಿಗೂ ಹೊಸದಾಗಿ ಗೇಟ್‌ಗಳ ಅಳವಡಿಕೆಗೆ ತಲಾ ಒಂದು ಗೇಟ್‌ಗೆ ರು.1ಕೋಟಿ ಅಂದಾಜಿಸಲಾಗಿದ್ದು, ಒಟ್ಟು ವೆಚ್ಚದ ಅನುದಾನ ತಕ್ಷಣ ಬಿಡುಗಡೆಗೊಳಿಸಿ ಶಾಶ್ವತ ಕಾಮಗಾರಿ ನಡೆಸಬೇಕು. ಉತ್ತರ ಕರ್ನಾಟಕಕ್ಕೆ ಯಾವುದೇ ರೀತಿಯ ಅನ್ಯಾಯವೆಸಗದೆ ಪಾರದರ್ಶಕ ಆಡಳಿತ ನಡೆಸಬೇಕಾದುದು ಸರ್ಕಾರದ ಕರ್ತವ್ಯವಾಗಿದೆಯೆಂದು ಜನತೆ ಆಗ್ರಹಿಸಿದೆ. 

         ತಾತ್ಕಾಲಿಕ ದುರಸ್ಥಿ, ನುರಿತ ಈಜುಗಾರರ ಹುಡುಕಾಟ : ಕಳೆದ ಸೋಮವಾರದಿಂದ ಸತತ 5 ದಿನಗಳವರೆಗೆ ಗೇಟ್ ನಂ.22 ರಲ್ಲಿ ಪ್ಲೇಟ್‌ಗಳು ಮುರಿದ ಪರಿಣಾಮ ನೀರಿನ ಅವಘಡಕ್ಕೆ ಅಧಿಕಾರಿಗಳಿಗೆ ದಿಕ್ಕೇ ತೋಚದಂತಾಗಿದೆ. ಪ್ಲೇಟ್‌ಗಳ ಅಳವಡಿಕೆ ಪೂರ್ಣ ಪ್ರಮಾಣದಲ್ಲಿ ಆಗಿಲ್ಲವಾದರೂ ತಾತ್ಕಾಲಿಕವಾಗಿ ನೀರಿನ ಹರಿವಿನ ಪ್ರಮಾಣದಲ್ಲಿ ತಗ್ಗಿಸಲಾಗಿದ್ದು, ದುರಸ್ಥಿ ಕಾರ್ಯ ಪೂರ್ಣವಾಗದಿದ್ದಕ್ಕೆ ಸುಮಾರು 400 ಕ್ಯುಸೆಕ್‌ನಷ್ಟು ನೀರು ಹರಿಯುತ್ತಿದೆ. 

ನೀರಿನ ಒತ್ತಡ ಹಾಗೇ ಇದ್ದು, ಶತಾಯ-ಗತಾಯ ಯತ್ನದಿಂದ ಗೇಟ್ ದುರಸ್ಥಿಯಾಗಿದ್ದರೂ ಸಂಪೂರ್ಣ ಯಶಸ್ವಿಯಾಗಿಲ್ಲ. ಹೀಗಾಗಿ ಮತ್ತಷ್ಟು ಕೆಲಸ ಬಾಕಿಯಿದ್ದು, ಅನುಭವಿ ಈಜು ತಜ್ಞರ ಹುಡುಕಾಟದಲ್ಲಿ ಅಧಿಕಾರಿಗಳಿದ್ದಾರೆ. ಇಂದು ಶನಿವಾರ ಬಹುತೇಕ ಕಾರ್ಯ ಪೂರ್ಣಗೊಳ್ಳುವ ಭರವಸೆಯಿದ್ದರೂ ಜಲಾಶಯದಿಂದ ನೀರಿಬನ ಹೊರಹರಿವಿನ ಪ್ರಮಾಣ ಸಂಪೂರ್ಣ ನಿಲ್ಲುವಂತಾಗಲು 21-22 ವರ್ಷಗಳಷ್ಟು ಹಳೆಯ ಎಲ್ಲಾ 22 ಗೇಟ್‌ಗಳನ್ನು ತೆಗೆದು ನೂತನ ಗೇಟ್‌ಗಳನ್ನು ಅಳವಡಿಸುವುದೊಂದೇ ಪರಿಹಾರ ಎನ್ನಲಾಗುತ್ತಿದೆ. ಕೇವಲ ಒಂದೇ ಗೇಟ್ ಮೂಲಕ 5 ದಿನಗಳವರೆಗೆ ಹಿಪ್ಪರಗಿ ಬ್ಯಾರೇಜ್‌ನಲ್ಲಿ ಶೇಖರಣೆಯಾದ ನೀರಿನ ಪ್ರಮಾಣದಲ್ಲಿ ಶೇ.50 ರಷ್ಟು ಪೋಲಾಗಿರುವದು ಕಂಡು ಬಂದಿದೆ. ಇನ್ನೂ ವಿಳಂಬವಾದರೆ ನದಿ ಪಾತ್ರ ಸಂಪೂರ್ಣ ಖಾಲಿಯಾದರೂ ಆಶ್ಚರ್ಯಪಡಬೇಕಿಲ್ಲ. 

         ಒಟ್ಟಾರೆ ಪೂರ್ಣ ಸಾಮರ್ಥ್ಯದ ಹಿಪ್ಪರಗಿ ಬ್ಯಾರೇಜ್‌ನಲ್ಲಿ ಒಟ್ಟು 6 ಟಿಎಂಸಿ ನೀರು ಶೇಖರಣೆಯಾಗಿತ್ತು. ಇದೀಗ ಅವಘಡದಿಂದಾಗಿ 3 ಟಿಎಂಸಿಯಷ್ಟು ನೀರು ಖಾಲಿಯಾಗಿದ್ದು, ಕೇವಲ 3 ಟಿಎಂಸಿಯಷ್ಟು ಮಾತ್ರ ಸಂಗ್ರಹವಿದೆ. ಅಧೀಕ್ಷಕ ಭೆಟ್ಟಿ : ಇಲ್ಲಿಯವರೆಗೆ ಕಣ್ಮುಚ್ಚಿದಂತಿದ್ದ ಕನೀನಿ ಅಧಿಕಾರಿಗಳು ಜಲಾಶಯಕ್ಕೆ ಭೇಟಿ ನೀಡದೇ ದಿವ್ಯ ನಿರ್ಲಕ್ಷ್ಯ ತೋರಿದ್ದರು. ಆದರೆ ಶುಕ್ರವಾರ ಸಂಜೆ ಕನಿನಿ ಇಲಾಖೆಯ ಅಥಣಿ ವಿಭಾಗದ ಅಧೀಕ್ಷಕ ಅಭಿಯಂತರ ಬಿ.ಎ. ನಾಗರಾಜ ಭೆಟ್ಟಿ ನೀಡಿ ದುರಸ್ಥಿ ಕಾರ್ಯದ ಬಗ್ಗೆ ಅವಲೋಕಿಸಿ ಮುಂದಿನ ಕ್ರಮ ಕೈಗೊಳ್ಳುವ ಮೂಲಕ ಶನಿವಾರದಂದು ಪೂರ್ಣ ಪ್ರಮಾಣದ ಕಾರ್ಯ ಮುಕ್ತಾಯಗೊಳಿಸುವುದೆಂದು ತಿಳಿಸಿದ್ದಾರೆ.