ಕುಮಾರೇಶ್ವರ ಆಸ್ಪತ್ರೆಗೆ ಅತ್ಯಾಧುನಿಕ ಡಯಾಲಿಸಿಸ್ ಯಂತ್ರಗಳ ದೇಣಿಗೆ ಕೊಟಕ್ ಮಹೀಂದ್ರಾ ಬ್ಯಾಂಕ್‌ನ ಸಹಕಾರ

ಕುಮಾರೇಶ್ವರ ಆಸ್ಪತ್ರೆಗೆ ಅತ್ಯಾಧುನಿಕ ಡಯಾಲಿಸಿಸ್ ಯಂತ್ರಗಳ ದೇಣಿಗೆ ಕೊಟಕ್ ಮಹೀಂದ್ರಾ ಬ್ಯಾಂಕ್‌ನ ಸಹಕಾರ 

ಬಾಗಲಕೋಟೆ 06: ನಗರದ ಬಿ.ವಿ.ವಿ.ಸಂಘದ ಹಾನಗಲ್ಲ ಕುಮಾರೇಶ್ವರ ಆಸ್ಪತ್ರೆಗೆ ಕೊಟಕ್ ಮಹೀಂದ್ರಾ ಬ್ಯಾಂಕ್‌ನ ಬಾಗಲಕೋಟೆ ಶಾಖೆಯಿಂದ ‘ಫ್ರೆಸೆನಿಯಸ್ ಹೆಮೊಡಯಾಲಿಸಿಸ್‌’ ಎನ್ನುವ 4008 ಎಸ್ ಮಾಡೆಲ್‌ನ ಎರಡು ಅತ್ಯಾಧುನಿಕ ಡಯಾಲಿಸಿಸ್ ಯಂತ್ರಗಳನ್ನು ದೇಣಿಗೆಯಾಗಿ ನೀಡಲಾಯಿತು. ಮೂತ್ರಪಿಂಡ ವೈಫಲ್ಯದಿಂದ ಬಳಲುತ್ತಿರುವ ರೋಗಿಗಳ ಚಿಕಿತ್ಸೆಯಲ್ಲಿ ಈ ಯಂತ್ರಗಳು ಪರಿಣಾಮಕಾರಿಯಾಗಿ ಬಳಕೆಯಾಗುತ್ತವೆ. ಕೊಟಕ್ ಮಹೀಂದ್ರಾ ಬ್ಯಾಂಕಿನ ರಿಜಿನಲ್ ಹೆಡ್ ಕಾರ್ತಿಕ್‌.ಸಿ, ಏರಿಯಾ ಮ್ಯಾನೇಜರ್ ಲಕ್ಷಿ-್ಮಕಾಂತ ಖೋಡೆ, ವಿಭಾಗೀಯ ಮ್ಯಾನೇಜರ್ ರವೀಂದ್ರ ಪಂಡಿತ, ರಿಜಿನಲ್ ಮಾರ್ಕೇಟಿಂಗ್ ಮ್ಯಾನೇಜರ್ ರಂಗನಾಥ ರಾಂಪೂರೆ ಮತ್ತು ಬಾಗಲಕೋಟ ಶಾಖಾ ಮ್ಯಾನೇಜರ್ ಪ್ರದೀಪ ಖಟಾವಕರ್ ಕುಮಾರೇಶ್ವರ ಆಸ್ಪತ್ರೆಗೆ ಭೇಟಿ ನೀಡಿ ಈ ಅತ್ಯಾಧುನಿಕ ಯಂತ್ರಗಳನ್ನು ಬಿ.ವಿ.ವಿ.ಸಂಘದ ಕಾರ್ಯಾಧ್ಯಕ್ಷರಾದ ಡಾ.ವೀರಣ್ಣ ಚರಂತಿಮಠ ಅವರಿಗೆ ಹಸ್ತಾಂತರಿಸಿದರು.   

ಯಂತ್ರಗಳನ್ನು ಸ್ವೀಕರಿಸಿ ಮಾತನಾಡಿದ ಡಾ.ವೀರಣ್ಣ ಚರಂತಿಮಠ  ‘ಆರೋಗ್ಯಕರ ಸಮಾಜ ನಿರ್ಮಾಣಕ್ಕಾಗಿ ಆಸ್ಪತ್ರೆಗಳು ಮಾತ್ರವಲ್ಲದೆ ಸಂಘ ಸಂಸ್ಥೆಗಳು ಕೂಡ ಪ್ರಯತ್ನಿಸುತ್ತಿವೆ. ಇದೊಂದು ಸಾಮಾಜಿಕ ಜವಾಬ್ದಾರಿಯಾಗಿ ಮಾರ​‍್ಪಟಟಿದೆ. ಈ ದಿಸೆಯಲ್ಲಿ ಕೊಟಕ್ ಮಹೀಂದ್ರಾ ಬ್ಯಾಂಕ್ ವತಿಯಿಂದ ಈ ಹಿಂದೆಯೂ ಕುಮಾರೇಶ್ವರ ಆಸ್ಪತ್ರೆಗೆ ವೈದ್ಯಕೀಯ ಉಪಕರಣಗಳನ್ನು ದೇಣಿಗೆಯಾಗಿ ನೀಡಲಾಗಿದೆ.  ಈಗ ದೇಣಿಗೆ ನೀಡಿರುವ ಡಯಾಲಿಸಿಸ್ ಯಂತ್ರಗಳನ್ನು ಮೂತ್ರಪಿಂಡ ವೈಫಲ್ಯದಿಂದ ಬಳಲುತ್ತಿರುವ ರೋಗಿಗಳ ಚಿಕಿತ್ಸೆಯಲ್ಲಿ ಬಳಸಲಾಗುವುದು. ಬ್ಯಾಂಕ್‌ನ ವ್ಯವಸ್ಥಾಪಕರ ಈ ಸಮಾಜಮುಖಿ ನಡೆ ಅಭಿನಂದನಾರ್ಹವಾಗಿದೆ. ಅವರ ಸಹಕಾರವನ್ನು ನಾವು ಕೃತಜ್ಞತೆಯಿಂದ ಸ್ಮರಿಸುತ್ತೇವೆ ಎಂದು ನುಡಿದರು. 

ವೈದ್ಯಕೀಯ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಅಶೋಕ ಎಮ್‌.ಸಜ್ಜನ (ಬೇವೂರ), ಬಿ.ವಿ.ವಿ.ಸಂಘದ ಗೌರವಾನ್ವಿತ ಸದಸ್ಯರು, ಮೆಡಿಕಲ್ ಕಾಲೇಜಿನ ಪ್ರಾಚಾರ್ಯೆ ಡಾ.ಭುವನೇಶ್ವರಿ ಯಳಮಲಿ, ವೈದ್ಯಕೀಯ ಅಧೀಕ್ಷಕ ಡಾ.ಕೋರಾ, ನೆಫ್ರಾಲಜಿ ವಿಭಾಗದ ತಜ್ಞವೈದ್ಯರಾದ ಡಾ.ಚಿರಾಗ, ಡಾ.ಕಿರಣ ಬಿಜಾಪೂರ ಮತ್ತು ಮೆಡಿಕಲ್ ಕಾಲೇಜ್ ಹಾಗೂ ಕೊಟಕ್ ಮಹೀಂದ್ರಾ ಬ್ಯಾಂಕಿನ ಸಿಬ್ಬಂದಿ ಉಪಸ್ಥಿತರಿದ್ದರು.  

*** 

ಫೋಟೋ: ಕೊಟಕ್ ಮಹೀಂದ್ರಾ ಬ್ಯಾಂಕ್‌ನಿಂದ ಕುಮಾರೇಶ್ವರ ಆಸ್ಪತ್ರೆಗೆ ಡಯಾಲಿಸಿಸ್ ಯಂತ್ರಗಳ ಹಸ್ತಾಂತರ.