ಅಧ್ಯಕ್ಷ ಅಮ್ಜದ್ ಪಟೇಲ್ ಗೆ ಬಿಗ್ ಬೋನಸ್ ಕೊಪ್ಪಳ ನಗರಸಭೆ
Koppal Municipal Council Big Bonus for President Amjad Patel
ಕೊಪ್ಪಳ 27: ಕೊಪ್ಪಳ ನಗರಸಭೆಯ ಅಧ್ಯಕ್ಷ ಉಪಾಧ್ಯಕ್ಷ ಹಾಗೂ ಸದಸ್ಯರ ಅಧಿಕಾರ ಅವಧಿ ಇನ್ನು ಸುಮಾರು ಐದು ತಿಂಗಳ ಕಾಲ ಮುಂದುವರಿಯುತ್ತಿದೆ ಎಂದು ಧಾರವಾಡ ಹೈಕೋರ್ಟ್ ಪೀಠ ಮಹತ್ವದ ಆದೇಶ ಜಾರಿಗೊಳಿಸಿದೆ ಇದರಿಂದ ಹಾಲಿ ಅಧ್ಯಕ್ಷ ಅಮ್ಜದ್ ಪಟೇಲ್ ರವರಿಗೆ ಬಿಗ್ ಬೋನಸ್ ಸಿಕ್ಕಿದಂತಾಗಿದೆ, ಅಧ್ಯಕ್ಷ ಸ್ಥಾನಕ್ಕೆ ನಿಗದಿಯಾಗಿದ್ದ ಅವಧಿ ಇನ್ನು ಪೂರ್ಣಗೊಂಡಿಲ್ಲ ನನಗೆ ನ್ಯಾಯ ಬೇಕು ಎಂದು ಕೋರ್ಟ್ ಮೊರೆ ಹೋಗಿದ್ದ ಅಮ್ಜದ್ ಪಟೇಲ್ ರವರಿಗೆ ನ್ಯಾಯ ಸಿಕ್ಕಿದೆ ಅಲ್ಲದೆ ಉಪಾಧ್ಯಕ್ಷರು ಸೇರಿದಂತೆ ಎಲ್ಲಾ ಸದಸ್ಯರ ಅವಧಿ ಮುಕ್ತಾಯಗೊಳ್ಳಲು ಬರುವ 2026 ರ ಏಪ್ರಿಲ್ ತಿಂಗಳ 27ರವರೆಗೆ ಇರುತ್ತದೆ ಎಂದು ಸೂಚಿಸಿದ ಹೈ ಕೋರ್ಟ್ ಅಲ್ಲಿಯವರೆಗೆ ಯಾವುದೇ ಕಾರಣಕ್ಕೂ ಸರ್ಕಾರ ಆಡಳಿತ ಅಧಿಕಾರಿಗಳ ನೇಮಕ ಮಾಡುವಂತಿಲ್ಲ ಎಂದು ಹೈಕೋರ್ಟ್ ಸೂಚನೆ ಜಾರಿಗೊಳಿಸಿದೆ,
ನ್ಯಾಯ ಸಮ್ಮತವಾಗಿ ಸಿಗಬಹುದಾದ ಅವಧಿ ನಮಗೆ ಸಿಕ್ಕಿದೆ ಸಿಕ್ಕಿರುವ ಅವಕಾಶ ಸದುಪಯೋಗ ಪಡೆದುಕೊಂಡು ನಗರದಲ್ಲಿ ಕೈಗೊಳ್ಳಲು ನಿರ್ಣಯಿಸಿರುವ ಎಲ್ಲಾ ಅಭಿವೃದ್ಧಿಪರ ಕೆಲಸ ಕಾರ್ಯಗಳನ್ನು ಆದಷ್ಟು ಬೇಗ ಪೂರ್ಣ ಗೊಳಿಸುವೆ ಹಾಗೂ ಜನವರಿ ತಿಂಗಳಲ್ಲಿ ನಡೆಯಲಿರುವ ಇಲ್ಲಿನ ಐತಿಹಾಸಿಕ ಪ್ರಸಿದ್ಧ ಶ್ರೀ ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವ ಸಂದರ್ಭ ದಲ್ಲಿ ಮತ್ತೊಮ್ಮೆ ನಗರಸಭೆಯಿಂದ ಸೇವೆ ಸಲ್ಲಿಸಲು ಅವಕಾಶ ಸಿಕ್ಕಿರುವುದು ಇದು ನನಗೆ ತುಂಬಾ ಸಂತಸ ಉಂಟು ಮಾಡಿದೆ, ಜಾತ್ರಾ ಸಂದರ್ಭದಲ್ಲಿ ಬರುವ ಲಕ್ಷಾಂತರ ಭಕ್ತಾದಿಗಳಿಗೆ ಸಕಲ ವ್ಯವಸ್ಥೆ ಮಾಡಿ ಶ್ರೀ ಗವಿಸಿದ್ದೇಶ್ವರ ಸ್ವಾಮೀಜಿಗಳವರ ಕೃಪ ಆಶೀರ್ವಾದ ಪಡೆಯಲು ಸಿಕ್ಕಿರುವ ಅವಕಾಶ ವನ್ನು ಸದುಪಯೋಗ ಮಾಡಿಕೊಂಡು ಸರ್ವ ಸದಸ್ಯರ ಸಹಕಾರ ದೊಂದಿಗೆ ಉತ್ತಮ ಕೆಲಸ ಮಾಡುವುದಾಗಿ ಕೊಪ್ಪಳ ನಗರಸಭೆಯ ಅಧ್ಯಕ್ಷ ಅಮ್ಜದ್ ಪಟೇಲ್ ತಿಳಿಸಿದ್ದಾರೆ.
ಮುಂಬರುವ 2026ರ ಏಪ್ರಿಲ್ 27 ರವರೆಗೆ ಕೆಲಸ ಮಾಡಲು ಅವಕಾಶ ಸಿಕ್ಕಿದ್ದು ಉಳಿದಿರುವ ಅತ್ಯಂತ ಕಡಿಮೆ ಅವದಿಯಲ್ಲಿ ಕೊಪ್ಪಳ ನಗರಕ್ಕೆ ನಾನು ರೂಪಿಸಿರುವ ಯೋಜನೆಗಳನ್ನು ಸಾಕಾರಗೊಳಿಸುತ್ತೇನೆ. ಜನರು ನನ್ನ ಮೇಲೆ ಇಟ್ಟಿರುವ ವಿಶ್ವಾಸ ಮತ್ತು ನೀರಿಕ್ಷೆ ನಾನು ಜನರಿಗೆ ನೀಡಿದ ಭರವಸೆ ಈಡೇರಿಸಲು ಪ್ರಮಾಣಿಕ ಪ್ರಯತ್ನ ಮಾಡಿ ಸೇವೆ ಮಾಡುತ್ತೇನೆ ಕೊಪ್ಪಳ ನಗರಸಭೆಯ ಸರ್ವ ಸದಸ್ಯರ ಸಹಕಾರದೊಂದಿಗೆ ಅಧಿಕಾರಿಗಳೊಂದಿಗೆ ನಗರದ ಜನತೆಗೆ ಉತ್ತಮ ಆಡಳಿತ ಮತ್ತು ಸೇವೆ ನೀಡಲು ಸದಾ ಸಿದ್ದ ವಾಗಿದ್ದೇನೆ, ಸದರಿ ಅವಧಿಯಲ್ಲಿ ಉತ್ತಮ ಸೇವೆ ನಿರ್ವಹಿಸಲು ಕೊಪ್ಪಳ ನಗರದ ಸಮಸ್ತ ಸಾರ್ವಜನಿಕರ ಸಹಕಾರ ಕೂಡ ಅಗತ್ಯವಾಗಿದೆ ಎಂದು ಕೊಪ್ಪಳ ನಗರಸಭೆಯ ಅಧ್ಯಕ್ಷ ಅಮ್ಜದ್ ಪಟೇಲ್ ಜನರಲ್ಲಿ ಮನವಿ ಮಾಡಿ ಕೊಂಡಿದ್ದಾರೆ,
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 