ಪರಿಸರ ಹಿತ ರಕ್ಷಣಾ ವೇದಿಕೆಯ ಹೋರಾಟಕ್ಕೆ ಕೊಪ್ಪಳ ಲಯನ್ಸ್ ಕ್ಲಬ್ ಬೆಂಬಲ
Koppal Lions Club supports the struggle of the Environmental Protection Forum
ಕೊಪ್ಪಳ 6: ನಗರದಲ್ಲಿ ಪರಿಸರ ಹಿತ ರಕ್ಷಣಾ ವೇದಿಕೆ, ಕೊಪ್ಪಳದ ಆಶ್ರಯದಲ್ಲಿ ಹೊಸ ಬಲ್ಡೋಟಾ ಕಂಪನಿಯ ಸ್ಥಾಪನೆ ಹಾಗೂ ಕಿರ್ಲೋಸ್ಕರ್, ಎಕ್ಸ ಇಂಡಿಯಾ, ಕಲ್ಯಾಣಿ ಮತ್ತು ಇತರ ಕೈಗಾರಿಕೆಗಳ ವಿಸ್ತರಣೆಯ ವಿರುದ್ಧವಾಗಿ ನಡೆಯುತ್ತಿರುವ ಮಹತ್ವದ ನಾಗರಿಕ ಹೋರಾಟ 37ನೇ ದಿನವೂ ಮುನ್ನಡೆಯುತ್ತಿದೆ. ನಗರ ಪಾಲಿಕೆ ಕಚೇರಿ ಎದುರು ನಡೆಯುತ್ತಿರುವ ಈ ಸ್ಥಾಯಿ ಪ್ರತಿಭಟನೆಯಲ್ಲಿ ಇಂದು ಲಯನ್ಸ್ ಕ್ಲಬ್ ಆಫ್ ಕೊಪ್ಪಳ ಹಾಗೂ ಲಯನ್ಸ್ ಸ್ವಾಮಿ ವಿವೇಕಾನಂದ ಆಂಗ್ಲ ಮಾಧ್ಯಮ ಪ್ರಾಥಮಿಕ ಮತ್ತು ಪ್ರೌಢ ಶಾಲೆ, ಹಾಗು ಲಯನ್ಸ್ ಸ್ವಾಮಿ ವಿವೇಕಾನಂದ ಸಿ.ಬಿ.ಎಸ್.ಇ. ಶಾಲೆಯ ಪ್ರಾಚಾರ್ಯರು, ಶಿಕ್ಷಕರು ಮತ್ತು ಸಿಬ್ಬಂದಿ ವರ್ಗದವರು ಪಾಲ್ಗೊಂಡರು.
ಪರಿಸರ ಮಾಲಿನ್ಯ ಹೆಚ್ಚಳ, ನೀರು-ಮಣ್ಣು-ಗಾಳಿಯ ಗುಣಮಟ್ಟ ಕುಸಿತ, ಹಾಗೂ ಸಾರ್ವಜನಿಕ ಆರೋಗ್ಯದ ಮೇಲಾದ ದುಷ್ಪರಿಣಾಮಕ್ಕೆ ಕಾರಣವಾಗುವಂತಹ ಕೈಗಾರಿಕೆಗಳ ಅತಿವಿಸ್ತರಣೆಗೆ ತಡೆಗಟ್ಟುವ ಸಲುವಾಗಿ ಈ ಹೋರಾಟವನ್ನು ಕೈಗೊಳ್ಳಲಾಗಿದೆ ಎಂದು ಭಾಗವಹಿಸಿದವರು ತಿಳಿಸಿದರು. ಕೈಗಾರಿಕಾ ವಿಸ್ತರಣೆ ಸಂಬಂಧ ಸ್ಥಳೀಯರು ಹಲವು ವರ್ಷಗಳಿಂದ ವ್ಯಕ್ತಪಡಿಸುತ್ತಿರುವ ಆತಂಕಗಳು ಸರ್ಕಾರದ ಗಮನಕ್ಕೆ ಬರಬೇಕಾದ ಅಗತ್ಯವಿದೆ ಎಂದೂ ಅವರು ಅಭಿಪ್ರಾಯಪಟ್ಟರು.
ಇಂದು ನಡೆದ ಪ್ರತಿಭಟನೆಯಲ್ಲಿ ಲಯನ್ಸ್ ಕ್ಲಬ್ ಅಧ್ಯಕ್ಷ ಲಯನ್ ಪರಮೇಶ ಕೊಪ್ಪಳ, ಲಯನ್ ಬಸವರಾಜ ಬಳ್ಳೋಳ್ಳಿ, ಲಯನ್ ಶ್ರೀನಿವಾಸ ಗುಪ್ತಾ, ಲಯನ್ ಮನೋಹರ ದಾದ್ಮಿ, ಲಯನ್ ಸುರೇಶ ಸಂಚೇಟಿ, ಲಯನ್ ಗವಿಸಿದ್ದಪ್ಪ ಮುದುಗಲ್, ಲಯನ್ ವೆಂಕಟೇಶ ಶಾನಬಾಗ, ಲಯನ್ ಶರಣು ಅಗಡಿ, ಲಯನ್ ವಿರೇಶ ಹತ್ತಿ, ಲಯನ್ ಪಂಪಣ್ಣ ವಾರದ, ಲಯನ್ ಶ್ರೀಶೈಲಪ್ಪ ಶಿವಶೆಟ್ಟರ, ಲಯನ್ ಗುರುರಾಜ ಹಲಗೇರಿ, ಲಯನ್ ಸುಜಾತಾ ಹಲಗೇರಿ, ಲಯನ್ ಅಪರ್ಣಾ ಬಳ್ಳೋಳ್ಳಿ, ಲಯನ್ ಜ್ಯೋತಿ ಅಗಡಿ ಸೇರಿದಂತೆ ಅನೇಕ ಸದಸ್ಯರು ಭಾಗವಹಿಸಿದರು.
ಲಯನ್ಸ್ ಶಾಲೆಗಳ ಆಡಳಿತ ಮಂಡಳಿಯ ಅಧ್ಯಕ್ಷರಾದ ಲಯನ್ ಬಸವರಾಜ ಬಳ್ಳೋಳ್ಳಿಯವರು ಮಾತನಾಡಿ ಇನ್ನೋಬ್ಬರನ್ನು ದೂಷಿಸದೇ ಸ್ವ-ಇಚ್ಛೆಯಿಂದ ಪರಿಸರ ಹಿತಕ್ಕೆ ಹೋರಾಡುವುದು, ಪ್ರತಿಭಟನೆಯಲ್ಲಿ ಭಾಗವಹಿಸುವುದು ನಮ್ಮ ಕರ್ತವ್ಯ. ಈ ಹೋರಾಟಕ್ಕೆ ನಮ್ಮ ಬೆಂಬಲ ಸದಾ ಇರುತ್ತದೆ ಎಂದು ಘೋಷಿಸಿದರು. ಶಾಲಾ ಪ್ರಾಚಾರ್ಯರಾದ ವೈ. ಪದ್ಮಜಾ ಶಿಕ್ಷಕರು ಮತ್ತು ಸಿಬ್ಬಂದಿ ವರ್ಗದ ಸಕ್ರಿಯ ಪಾಲ್ಗೊಳ್ಳುವಿಕೆ ಹೋರಾಟಕ್ಕೆ ಮತ್ತಷ್ಟು ಬಲ ನೀಡಿತು. ಪರಿಸರ ಸಂರಕ್ಷಣೆ ಎಲ್ಲರ ಜವಾಬ್ದಾರಿ ಎಂದು ಅವರು ತಿಳಿಸಿ, ಕೈಗಾರಿಕಾ ಅಭಿವೃದ್ಧಿ ಜನಜೀವನಕ್ಕೆ ಧಕ್ಕೆಯಾಗದಂತೆ ಸಮತೋಲನ ಕಾಯ್ದುಕೊಳ್ಳುವ ಅಗತ್ಯವಿದೆ ಎಂದು ತಿಳಿಸಿದರು.
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ 