ಕೊಪ್ಪಳ : ಕ್ರೀಡಾಕೂಟದಲ್ಲಿ ಯಮನೂರಪ್ಪ, ರೇಣುಕಾ, ಗಣನೀಯ ಸಾಧನೆ
ಲೋಕದರ್ಶನ ವರದಿ
ಕೊಪ್ಪಳ 16: ದಿ. 14ರಂದು ನೇಪಾಳದಲ್ಲಿ ನಡೆದ ಅಂತರಾಷ್ಟ್ರೀಯ ಮಟ್ಟದ 25ವರ್ಷದ ಒಳಗಿನ ಪುರುಷರ ಕಬಡ್ಡಿ ವಿಭಾಗದಲ್ಲಿ ಕರ್ನಾಟಕ ತಂಡವು ವಿಜಯಶಾಲಿಯಾಗಿದ್ದು, ಅದರಲ್ಲಿ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಉಡಮಕಲ್ಲ ಗ್ರಾಮದ ಯುವಕ ಯಮನೂರಪ್ಪ ತಂದೆ ದಿಲೀಪ್ ಭಜಂತ್ರಿ ಇವರು ಭಾಗವಹಿಸಿ ಬ್ಯಾಂಪಿಯನ್ನರಾಗಿ ಬಂಗಾರದ ಪದಕವನ್ನು ಪಡೆದಿದ್ದಾರೆ. ಮತ್ತು ಅದೇ ರೀತಿಯಾದ ರಾಯಚೂರ ಜಿಲ್ಲೆಯ ಹಟ್ಟಿ ಗ್ರಾಮದ ಕುಮಾರಿ ರೇಣುಕಾ ಭಜಂತ್ರಿ ಈಕೆಯು 5000 ಮೀ ರನ್ನಿಂಗ್ ರೇಸ್ನಲ್ಲಿ ಭಾಗವಹಿಸಿ ಚಾಂಪಿಯನ್ನರಾಗಿ ಬಂಗಾರದ ಪದಕ ಗೆದ್ದಿದ್ದಾಳೆ. ಇವರು ಅತ್ಯಂತ ಕಡುಬಡವನಾಗಿದ್ದು, ಜೀವನದಲ್ಲಿ ಏನಾದರು ಸಾಧಿಸಬೇಕೆಂದು ಛಲದಿಂದ ಗುರಿಹೊಂದಿ, ಕರ್ನಾಟಕ ಕಬಡ್ಡಿ ಪಂದ್ಯಾವಳಿಯಲ್ಲಿ ಸ್ಥಾನಗಿಟ್ಟಿಸಿಕೊಂಡು ನಮ್ಮ ಜಿಲ್ಲೆಗೆ ಹೆಮ್ಮೆ ತಂದಿದ್ದಾನೆ. ಇವರನ್ನು ನಮ್ಮ ಕೊಪ್ಪಳ ಜಿಲ್ಲೆಯ ಕೊರಮ ಯುವಸೇನೆ ಜಿಲ್ಲಾಧ್ಯಕ್ಷರಾದ ಡಿ.ಕೆ.ಭಜಂತ್ರಿ, ಕಾರ್ಯದಶರ್ಿಯಾದ ಪರಶುರಾಮ ಉಡಮಕಲ್, ಅಂಬಣ್ಣ ಭಜಂತ್ರಿ, ಇಂದ್ರೇಶ್ ಉಡಮಕಲ್, ರಮೇಶ ಭಜಂತ್ರಿ, ಮಂಜುನಾಥ ಮುಸಲಾಪೂರ, ರವಿ ಭಜಂತ್ರಿ, ರಾಘವೇಂದ್ರ ಕುಷ್ಟಗಿ, ಮುತ್ತಣ್ಣ ನವಲಿ, ಹುಲಗಪ್ಪ ವನಬಳ್ಳಾರಿ, ಪರಶುರಾಮ ಇರಕಲ್ಲಗಡಾ ಮತ್ತು ಸಮಾಜದ ಗುರು-ಹಿರಿಯರು, ತಾಯಂದಿರು, ಸಮಾಜದ ಯುವಕರು ಸಮಾಜದ ವತಿಯಿಂದ ಹೃದಯಪೂರ್ವಕ ಅಭಿನಂದನೆ ಸಲ್ಲಿಸಿದ್ದಾರೆ.
ಮಹಾರಾಷ್ಟ್ರದಲ್ಲಿ ಭೂಕುಸಿತದಿಂದ ರೈಲು ಸಂಚಾರಕ್ಕೆ ಅಡ್ಡಿ; ಎಸ್ಸಿಆರ್ 25 ರೈಲುಗಳ ಮಾರ್ಗ ಬದಲಾವಣೆ
ಖಾನಾಪೂರ ಶಾಸಕ ಹಲಗೇಕರ ಅಡ್ಡ ಮತದಾನ ಮಾಡಿದರಾ?, ಅಂಜಲಿ ನಿಂಬಾಳಕರ್ ಮಾತಿನ ಮರ್ಮವೇನು
ಲಕ್ಷ್ಮಣ್ ಉಟೇಕರ್ ಅವರ ಮುಂಬರುವ ಚಿತ್ರದಲ್ಲಿ ಹೃತಿಕ್ ರೋಷನ್ ಅಭಿನಯಿಸುವ ಸಾಧ್ಯತೆ
ಚಂದ್ರಪುರ ಅರಣ್ಯದಲ್ಲಿ ಕಾಡುಪ್ರಾಣಿ ದಾಳಿಗೆ ಯುವಕ ಬಲಿ
ಅಧಿಕಾರ ದರ್ಪ : ಖಾನಾಪುರ ತಹಸೀಲ್ದಾರ್ ವಿರುದ್ಧ ಶಿಸ್ತುಕ್ರಮಕ್ಕೆ ಪಿಡಿಒಗಳಿಂದ ಡಿಸಿ, ಚು. ಆಯೋಗಕ್ಕೆ ದೂರು
ಗಗನಯಾನ ಮಿಷನ್ಗಾಗಿ ಮಹತ್ವದ ಪ್ಯಾರಾಶೂಟ್ ಏರ್ಡ್ರಾಪ್ ಪರೀಕ್ಷೆಯನ್ನು ಇಸ್ರೋ ಯಶಸ್ವಿಯಾಗಿ ನಡೆಸಿತು 