ಕೊಪ್ಪಳ : ಸಂಘದ ಶ್ರೇಯೋಭಿವೃದ್ಧಿಗೆ ಬೆಂಬಲಿಸಿ: ಎ.ವ್ಹಿ.ಕಣವಿ ಹೇಳಿಕೆ
ಲೋಕದರ್ಶನ ವರದಿ
ಕೊಪ್ಪಳ 31: ಕೊಪ್ಪಳ ಜಿಲ್ಲಾ ನ್ಯಾಯವಾದಿಗಳ ಸಂಘದ ಚುನಾವಣೆಯು ಏಪ್ರೀಲ್ 3ರಂದು ಜರುಗಲಿರುವ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಸ್ಪಧರ್ಿಸಿರುವ ಹನುಮೇಶ ಮುರಡಿ ನೇತೃತ್ವದ ಪದಾಧಿಕಾರಿಗಳು ವಿವಿಧ ಸ್ಥಾನಕ್ಕೆ ಸ್ಪಧರ್ಿಸಿದ್ದು ಸಂಘದ ಶ್ರೇಯೋಭಿವೃದ್ಧಿಗೆ ಸದರಿ ತಂಡಕ್ಕೆ ಬೆಂಬಲಿಸಿ ಆಯ್ಕೆಗೊಳಿಸುವಂತೆ ಮತದಾರ ನ್ಯಾಯವಾದಿಗಳಿಗೆ ಹಿರಿಯ ನ್ಯಾಯವಾದಿ ಹಾಗೂ ಜಿಲ್ಲಾ ನ್ಯಾಯವಾದಿಗಳ ಸಂಘದ ಮಾಜಿ ಅಧ್ಯಕ್ಷ ಎ.ವ್ಹಿ.ಕಣವಿ ಮನವಿ ಮಾಡಿಕೊಂಡಿದ್ದಾರೆ.
ತಂಡದ ಪರವಾಗಿ ತಾಲೂಕಿನ ಅಳವಂಡಿ, ಹ್ಯಾಟಿ ಮುಂಡರಗಿ, ಹಿರೇಸಿಂದೋಗಿ, ಚಿಕ್ಕ ಸಿಂದೋಗಿ ಗ್ರಾಮ ಸೇರಿದಂತೆ ವಿವಿಧೆಡೆ ಬಿರುಸಿನ ಪ್ರಚಾರ ಕೈಗೊಂಡ ಅವರು ನಂತರ ಮಾತನಾಡಿ ಉಪಾಧ್ಯಕ್ಷ ಸ್ಥಾನಕ್ಕೆ ಹಮ್ಮಿಗಿ ಗವಿಸಿದ್ದಪ್ಪ ಚನ್ನಪ್ಪ, ಕಾರ್ಯದಶರ್ಿ ಸ್ಥಾನಕ್ಕೆ ಬಿ.ವಿ.ಸಜ್ಜನ್, ಜಂಟಿ ಕಾರ್ಯದಶರ್ಿ ಸ್ಥಾನಕ್ಕೆ ಎಸ್.ಬಿ.ಪಾಟೀಲ್ ಹಾಗೂ ಖಜಾಂಚಿ ಸ್ಥಾನಕ್ಕೆ ಸುಭಾಷ್ ಬಂಡಿ ಸ್ಪಧರ್ೆ ಮಾಡಿದ್ದು ಇವರೆಲ್ಲನ್ನು ಬೆಂಬಲಿಸುವಂತೆ ಮನವಿ ಮಾಡಿದರು.
ಪ್ರಾಮಾಣಿಕ ಮತ್ತು ಪಾರದರ್ಶಕ ಆಡಳಿತ, ಹೆಚ್ಚುವರಿ ಜಿಲ್ಲಾ ನ್ಯಾಯಾಲಯ ಸೇರಿದಂತೆ ಕೌಟಂಬಿಕ, ವಾಣಿಜ್ಯ, ಕಾಮರ್ಿಕ, ಜಿಲ್ಲಾ ನ್ಯಾಯಾಲಯಗಳ ನಿಮರ್ಾಣ, ಸಂಘದ ಸದಸ್ಯರಿಗೆ ದ್ವಿಚಕ್ರ ಮತ್ತು ನಾಲ್ಕು ಚಕ್ರ ವಾಹನ, ಡ್ರೈವಿಂಗ್ ಲೈಸೆನ್ಸ್ ಕೊಡಿಸುವುದು, ಭವಿಷ್ಯತ್ತಿನ ಯೋಜನೆ ರೂಪಿಸಿ ಕೋ-ಆಪರೇಟಿವ್ ಸೊಸೈಟಿ ಪ್ರಾರಂಭಿಸುವುದು,ವಕೀಲರ ಭವನ, ಕಾಲೋನಿ, ಸಮುದಾಯ ಭವನ, ಸ್ವತಂತ್ರ ಕಟ್ಟಡ,ಸೇರಿದಂತೆ ಯುವ ವಕೀಲರಿಗೆ ತರಬೇತಿ ಶಿಬಿರ, ಅಪತ್ಕಾಲದಲ್ಲಿ ತುತರ್ು ನಿಧಿ ಸ್ಥಾಪನೆ, ಜಿಲ್ಲೆಯಲ್ಲಿ ವಕೀಲರ ರಾಜ್ಯ ಸಮ್ಮೇಳನ, ಕ್ರೀಡೆ-ಸಾಂಸ್ಕೃತಿಕ ಚಟುವಟಿಕೆ ಅಲ್ಲದೇ ಮಹಿಳಾ ವಕೀಲರಿಗೆ ಸೌಕರ್ಯ, ಸಂಘದ ಶ್ರೇಯೋಭಿವೃದ್ಧಿಗೆ ಠೇವಣಿ ಸಂಗ್ರಹಣೆ ಸರಕಾರ ನೀಡುವ ಗೌರವ ಧನ ದೊರಕಿಸಲು ಪ್ರಾಮಾಣಿಕ ಪ್ರಯತ್ನ ಮಾಡಲು ಸದರಿ ತಂಡ ಚುನಾವಣಾ ಪ್ರಣಾಳಿಕೆ ತಂಡ ಘೋಷಿಸಿದ್ದು ಸದರಿ ಯೋಜನೆಗಳನ್ನು ಸಹಕಾರಗೊಳಿಸಲು ಬೆಂಬಲಿಸುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಹಿರಿಯ ನ್ಯಾಯವಾದಿಗಳಾದ ಅಸೀಫ್ಅಲಿ, ಆರ್.ಬಿ.ಪಾನಗಂಟಿ, ವ್ಹಿ.ಎಂ.ಭೂಸನೂರಮಠ, ಸಂಧ್ಯಾ ಮಾದಿನೂರು, ಪಿ.ಎಲ್.ಇನಾಮತಿ, ಪಿ.ಆರ್.ಹೊಸಳ್ಳಿ, ಡಿ.ಜಿ.ಬಾಗಲಕೋಟೆ, ಆರ್.ವಿ.ಮಠದ್, ವಿ.ಎಸ್.ಕಟ್ಟಿ, ಎಸ್.ಎಚ್.ಚವಡಿ, ಎಸ್.ಎನ್.ಮುತ್ತಿಗಿ, ಆರ್.ಬಿ.ಅಳವಂಡಿ, ಆರ್.ಬಿ.ಗಣಾವರಿ, ಲೋಹಿತ್ ದೇಸಾಯಿ, ಎಸ್.ಎಚ್.ಇಂಗಳದಾಳ, ಎ.ಎಸ್.ಮಾಲೀಪಾಟೀಲ್, ವಿರೂಪಾಕ್ಷಪ್ಪ ಬಾಳಗೊಂಡರು,ರವಿ ಹೊಟ್ಟಿ, ಡಿ.ಎಂ.ಪೂಜಾರ್, ವೆಂಕಟೇಶ ಮಾಲಗಿತ್ತಿ, ಎಸ್.ಎಚ್.ಶಿವಪೂರು, ಜಿ.ಎಫ್.ಹಮ್ಮಿಗಿ, ಆರ್.ಎಂ.ಕಿಲ್ಲೆದಾರ, ಇಸ್ಮಾಯಿಲ್ ಗೇಟಿನ್, ಪ್ರಕಾಶ ಆನಂದಹಳ್ಳಿ, ರವಿ ಶೀಗನಹಳ್ಳಿ, ಕೊಟ್ರೇಶ ಪೊಚಗುಂಡಿ, ಶಶಿಕಾಂತ ಕಲಾಲ್,ವಿ.ಎ.ಮಾಳೆಕೊಪ್ಪ, ಎನ್.ಎಂ,ಸಿದ್ದಾಂತಿ,ಎಸ್.ಎಂ.ದೇಸಾಯಿ, ಸೇರಿದಂತೆ ಅನೇಕ ಹಿರಿಯ-ಕಿರಿಯ ಮತ್ತು ಮಹಿಳಾ ನ್ಯಾಯವಾದಿಗಳು ಉಪಸ್ಥಿತರಿದ್ದರು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮಹಾರಾಷ್ಟ್ರದಲ್ಲಿ ಭೂಕುಸಿತದಿಂದ ರೈಲು ಸಂಚಾರಕ್ಕೆ ಅಡ್ಡಿ; ಎಸ್ಸಿಆರ್ 25 ರೈಲುಗಳ ಮಾರ್ಗ ಬದಲಾವಣೆ
ಖಾನಾಪೂರ ಶಾಸಕ ಹಲಗೇಕರ ಅಡ್ಡ ಮತದಾನ ಮಾಡಿದರಾ?, ಅಂಜಲಿ ನಿಂಬಾಳಕರ್ ಮಾತಿನ ಮರ್ಮವೇನು
ಲಕ್ಷ್ಮಣ್ ಉಟೇಕರ್ ಅವರ ಮುಂಬರುವ ಚಿತ್ರದಲ್ಲಿ ಹೃತಿಕ್ ರೋಷನ್ ಅಭಿನಯಿಸುವ ಸಾಧ್ಯತೆ
ಚಂದ್ರಪುರ ಅರಣ್ಯದಲ್ಲಿ ಕಾಡುಪ್ರಾಣಿ ದಾಳಿಗೆ ಯುವಕ ಬಲಿ
ಅಧಿಕಾರ ದರ್ಪ : ಖಾನಾಪುರ ತಹಸೀಲ್ದಾರ್ ವಿರುದ್ಧ ಶಿಸ್ತುಕ್ರಮಕ್ಕೆ ಪಿಡಿಒಗಳಿಂದ ಡಿಸಿ, ಚು. ಆಯೋಗಕ್ಕೆ ದೂರು
ಗಗನಯಾನ ಮಿಷನ್ಗಾಗಿ ಮಹತ್ವದ ಪ್ಯಾರಾಶೂಟ್ ಏರ್ಡ್ರಾಪ್ ಪರೀಕ್ಷೆಯನ್ನು ಇಸ್ರೋ ಯಶಸ್ವಿಯಾಗಿ ನಡೆಸಿತು 