ಕೊಪ್ಪಳ: ಹಿರಿಯರ ಮಾರ್ಗದರ್ಶನದಲ್ಲಿ ಜವಾಬ್ದಾರಿ ನಿಭಾಯಿಸುವೆ: ನ್ಯಾಯವಾದಿಗಳ ಸಂಘದ ನೂತನ ಅಧ್ಯಕ್ಷ ಹನುಮೇಶ
ಲೋಕದರ್ಶನ ವರದಿ
ಕೊಪ್ಪಳ 04: ಹಿರಿಯ ನ್ಯಾಯವಾದಿಗಳ ಮಾರ್ಗದರ್ಶನ ಮತ್ತು ಕಿರಿಯ ಸಹದ್ಯೋಗಿ ನ್ಯಾಯವಾದಿಗಳ ಸಹಕಾರದೊಂದಿಗೆ ಸಂಘದ ಸವರ್ೋತ್ತೋಮುಖ ಅಭಿವೃದ್ಧಿಗಾಗಿ ಪ್ರಾಮಾಣಿಕ ಪ್ರಯತ್ನ ಮಾಡಲು ಸಂಘದ ಸರ್ವ ಸದಸ್ಯರು ನನಗೆ ನೀಡಿರುವ ನಿಭಾಯಿಸುವುದಾಗಿ ಜಿಲ್ಲಾ ನ್ಯಾಯವಾದಿಗಳ ಸಂಘದ ನೂತನ ಅಧ್ಯಕ್ಷ ಹನುಮೇಶ ಮುರಡಿ ಹೇಳಿದರು.
ಅವರು ಸಂಘದ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಬಳಿಕ ಸದಸ್ಯರಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ನೇತೃತ್ವದ ತಂಡದಲ್ಲಿ ಜಯ ಸಾಧಿಸಿದ ಪದಾಧಿಕಾರಿಗಳಾದ ಉಪಾಧ್ಯಕ್ಷ ಸ್ಥಾನಕ್ಕೆ ಹಮ್ಮಿಗಿ ಗವಿಸಿದ್ದಪ್ಪ ಚನ್ನಪ್ಪ, ಕಾರ್ಯದಶರ್ಿ ಸ್ಥಾನಕ್ಕೆ ಬಿ.ವಿ.ಸಜ್ಜನ್, ಜಂಟಿ ಕಾರ್ಯದಶರ್ಿ ಸ್ಥಾನಕ್ಕೆ ಎಸ್.ಬಿ.ಪಾಟೀಲ್ ಹಾಗೂ ಖಜಾಂಚಿ ಸ್ಥಾನಕ್ಕೆ ಸುಭಾಷ್ ಬಂಡಿ ಸ್ಪಧರ್ೆ ಮಾಡಿ ಜಯ ಸಾಧಿಸಿದ್ದು ಅವರೆಲ್ಲರ ಸಹಯೋಗದಲ್ಲಿ ಸಂಘದ ಸವರ್ಾಂಗೀಣ ಅಭಿವೃದ್ದಿಗಾಗಿ ಪಣ ತೊಟ್ಟು ಶ್ರಮಿಸಿಸುವುದಾಗಿ ಘೊಷಿಸಿದ ಅವರು ಪ್ರಾಮಾಣಿಕ ಮತ್ತು ಪಾರದರ್ಶಕ ಆಡಳಿತ ನಡೆಸಿ ಪ್ರಣಾಳಿಕೆಯಂತೆ ಹೆಚ್ಚುವರಿ ಜಿಲ್ಲಾ ನ್ಯಾಯಾಲಯ ಸೇರಿದಂತೆ ಕೌಟಂಬಿಕ, ವಾಣಿಜ್ಯ, ಕಾಮರ್ಿಕ, ಜಿಲ್ಲಾ ನ್ಯಾಯಾಲಯಗಳ ನಿಮರ್ಾಣ, ಸಂಘದ ಸದಸ್ಯರಿಗೆ ದ್ವಿಚಕ್ರ ಮತ್ತು ನಾಲ್ಕು ಚಕ್ರ ವಾಹನ, ಡ್ರೈವಿಂಗ್ ಲೈಸೆನ್ಸ್ ಕೊಡಿಸುವುದು, ಭವಿಷ್ಯತ್ತಿನ ಯೋಜನೆ ರೂಪಿಸಿ ಕೋ-ಆಪರೇಟಿವ್ ಸೊಸೈಟಿ ಪ್ರಾರಂಭಿಸುವುದು,ವಕೀಲರ ಭವನ, ಕಾಲೋನಿ, ಸಮುದಾಯ ಭವನ, ಸ್ವತಂತ್ರ ಕಟ್ಟಡ,ಸೇರಿದಂತೆ ಯುವ ವಕೀಲರಿಗೆ ತರಬೇತಿ ಶಿಭಿರ, ಅಪತ್ಕಾಲದಲ್ಲಿ ತುತರ್ು ನಿಧಿ ಸ್ಥಾಪನೆ, ಜಿಲ್ಲೆಯಲ್ಲಿ ವಕೀಲರ ರಾಜ್ಯ ಸಮ್ಮೇಳನ, ಕ್ರೀಡೆ-ಸಾಂಸ್ಕೃತಿಕ ಚಟುವಟಿಕೆ ಅಲ್ಲದೇ ಮಹಿಳಾ ವಕೀಲರಿಗೆ ಸೌಕರ್ಯ, ಸಂಘದ ಶ್ರೇಯೋಭಿವೃದ್ಧಿಗೆ ಠೇವಣಿ ಸಂಗ್ರಹಣೆ ಸರಕಾರ ನೀಡುವ ಗೌರವ ಧನ ದೊರಕಿಸಲು ಪ್ರಾಮಾಣಿಕ ಪ್ರಯತ್ನ ಮಾಡಿ ಬೇಕು-ಬೇಡಿಕೆಗಳ ಈಡೇರಿಕೆಗಾಗಿ ಶ್ರಮಿಸುತ್ತೇನೆ ಎಂದು ನೂತನ ಅಧ್ಯಕ್ಷ ಹನುಮೇಶ ಮುರಡಿ ಹೇಳಿದರು.
ಈ ಸಂದರ್ಭದಲ್ಲಿ ಮಾಜಿ ಅಧ್ಯಕ್ಷರಾದ ಎ.ವ್ಹಿ.ಕಣವಿ, ದೊಡ್ಡಬಸಪ್ಪ ಕಂಪ್ಲಿ ಸೇರಿದಂತೆ ಹಿರಿಯ ನ್ಯಾಯವಾದಿಗಳಾದ ಅಸೀಫ್ಅಲಿ, ಆರ್. ಬಿ.ಪಾನಗಂಟಿ, ವ್ಹಿ.ಎಂ. ಭೂಸನೂರಮಠ, ಸಂಧ್ಯಾ ಮಾದಿನೂರು, ಪಿ.ಎಲ್. ಇನಾಮತಿ, ಪಿ.ಆರ್.ಹೊಸಳ್ಳಿ, ಎಸ್.ಎನ್. ಮುತ್ತಿಗಿ, ಆರ್.ಬಿ.ಅಳವಂಡಿ, ಡಿ.ಜಿ. ಬಾಗಲಕೋಟೆ, ಆರ್.ವಿ.ಮಠದ್, ವಿ.ಎಸ್.ಕಟ್ಟಿ, ಎಸ್.ಎಚ್.ಚವಡಿ, ಆರ್.ವಿ.ಗಣಾವರಿ, ಲೋಹಿತ್ ದೇಸಾಯಿ, ಎಸ್.ಎಚ್.ಇಂಗಳದಾಳ, ಎ.ಎಸ್. ಮಾಲೀಪಾಟೀಲ್, ವಿರೂಪಾಕ್ಷಪ್ಪ ಬಾಳಗೊಂಡರು, ಡಿ.ಎಂ. ಪೂಜಾರ್, ವೆಂಕಟೇಶ ಮಾಲಗಿತ್ತಿ, ಎಸ್.ಎಚ್.ಶಿ ವಪೂರು, ಜಿ.ಎಫ್. ಹಮ್ಮಿಗಿ, ಆರ್.ಎಂ.ಕಿಲ್ಲೆದಾರ, ಇಸ್ಮಾಯಿಲ್ ಗೇಟಿನ್, ಪ್ರಕಾಶ ಆನಂದಹಳ್ಳಿ, ರವಿ ಶೀಗನಹಳ್ಳಿ, ಕೊಟ್ರೇಶ ಪೊಚಗುಂಡಿ, ಶಶಿಕಾಂತ ಕಲಾಲ್,ವಿ.ಎ. ಮಾಳೆಕೊಪ್ಪ, ಎನ್.ಎಂ, ಸಿದ್ದಾಂತಿ,ಎಸ್.ಎಂ.ದೇಸಾಯಿ, ಸೇರಿದಂತೆ ಅನೇಕ ಹಿರಿಯ-ಕಿರಿಯ ಮತ್ತು ಮಹಿಳಾ ನ್ಯಾಯವಾದಿಗಳು ಉಪಸ್ಥಿತರಿದ್ದರು.
ದಕ್ಷಿಣ ಭಾರತದ ಕೋಗಿಲೆ ಎಸ್. ಜಾನಕಿ ನಿಧನ; 88ನೇ ವಯಸ್ಸಿನಲ್ಲಿ ಕೊನೆಯುಸಿರು
ಮಹಾರಾಷ್ಟ್ರದಲ್ಲಿ ಭೂಕುಸಿತದಿಂದ ರೈಲು ಸಂಚಾರಕ್ಕೆ ಅಡ್ಡಿ; ಎಸ್ಸಿಆರ್ 25 ರೈಲುಗಳ ಮಾರ್ಗ ಬದಲಾವಣೆ
ಖಾನಾಪೂರ ಶಾಸಕ ಹಲಗೇಕರ ಅಡ್ಡ ಮತದಾನ ಮಾಡಿದರಾ?, ಅಂಜಲಿ ನಿಂಬಾಳಕರ್ ಮಾತಿನ ಮರ್ಮವೇನು
ಲಕ್ಷ್ಮಣ್ ಉಟೇಕರ್ ಅವರ ಮುಂಬರುವ ಚಿತ್ರದಲ್ಲಿ ಹೃತಿಕ್ ರೋಷನ್ ಅಭಿನಯಿಸುವ ಸಾಧ್ಯತೆ
ಚಂದ್ರಪುರ ಅರಣ್ಯದಲ್ಲಿ ಕಾಡುಪ್ರಾಣಿ ದಾಳಿಗೆ ಯುವಕ ಬಲಿ
ಅಧಿಕಾರ ದರ್ಪ : ಖಾನಾಪುರ ತಹಸೀಲ್ದಾರ್ ವಿರುದ್ಧ ಶಿಸ್ತುಕ್ರಮಕ್ಕೆ ಪಿಡಿಒಗಳಿಂದ ಡಿಸಿ, ಚು. ಆಯೋಗಕ್ಕೆ ದೂರು 