ಸಂವಿಧಾನದ ಅರಿವು ಎಲ್ಲರಿಗೂ ಅವಶ್ಯಕ-ತಹಶೀಲ್ದಾರ ನಾಯ್ಕ
Knowledge of the Constitution is essential for everyone - Tahsildar Naik
ಹಾವೇರಿ 26 : ಭಾರತದ ಸಂವಿಧಾನದ ಬಗ್ಗೆ ಭಾರತೀಯ ನಾಗರಿಕರೆಲ್ಲರೂ ಅರಿತುಕೊಳ್ಳುವುದು ಅವಶ್ಯಕವಾಗಿದೆ ಎಂದು ಬ್ಯಾಡಗಿ ತಹಸೀಲ್ದಾರ ಚಂದ್ರಶೇಖರ ನಾಯ್ಕ ಹೇಳಿದರು. ಬ್ಯಾಡಗಿ ಪಟ್ಟಣದ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ಬುಧವಾರ ಕೇಂದ್ರ ಸಂವಹನ ಇಲಾಖೆ, ಭಾರತ ಸರ್ಕಾರ ಧಾರವಾಡ ವಾರ್ತಾ ಮತ್ತು ಪ್ರಸಾರ ಸಚಿವಾಲಯ ಹಾಗೂ ತಾಲೂಕು ಕಾನೂನು ಸೇವೆಗಳ ಸಮಿತಿ ಮತ್ತು ಬ್ಯಾಡಗಿ ಶಿಕ್ಷಣ ಸಂಸ್ಥೆ ವರ್ತಕರ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ಜರುಗಿದ ಸಂವಿಧಾನ ದಿನಾಚರಣೆ-2025 ಕಾರ್ಯಕ್ರಮ ಉದ್ಘಾಟಿಸಿ, ಭಾರತದ ಸಂವಿಧಾನದ ಪೂರ್ವ ಪೀಠಿಕೆ ವಾಚಿಸಿ ಅವರು ಮಾತನಾಡಿದರು.
ಭಾರತದ ಸಂವಿಧಾನ ಅತ್ಯಂತ ಶ್ರೇಷ್ಠವಾದ ಸಂವಿಧಾನವಾಗಿದೆ ಹಾಗೂ ವಿಶ್ವದ ಅತ್ಯಂತ ದೊಡ್ಡದಾದ ಸಂವಿಧಾನವಾಗಿದೆ. ಇದು ಭಾರತದ ಪ್ರತಿಯೊಬ್ಬ ಪ್ರಜೆಯ ಕರ್ತವ್ಯಗಳು ಮತ್ತು ಹಕ್ಕುಗಳನ್ನು ನೀಡುವುದರ ಜೊತೆಗೆ ಪ್ರತಿಯೊಬ್ಬರು ಸಮಾನರು ಎಂದು ನಮಗೆ ತಿಳಿಸಿಕೊಡುತ್ತದೆ ಎಂದರು.ಭಾರತ ಸ್ವಾತಂತ್ರ್ಯಗೊಂಡ ನಂತರ ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್ ಅವರ ನೇತೃತ್ವದ ಕರಡು ಸಮಿತಿ ವಿವಿಧ ದೇಶಗಳ ಸಂವಿಧಾನವನ್ನು ಅಧ್ಯಯನ ಮಾಡಿ, ವಿಶ್ವದ ಶ್ರೇಷ್ಠ ಸಂವಿಧಾನ, ಪ್ರತಿಯೊಬ್ಬರು ಒಪ್ಪುವ ರೀತಿಯಲ್ಲಿ ರಚಿಸಿ, ಭಾರತಕ್ಕೆ ಒಂದು ಶ್ರೇಷ್ಠವಾದ ಸಮಾಜವನ್ನು ಸಮಾನವಾಗಿ ಕಾಣುವ ಸಂವಿಧಾನವನ್ನು ನೀಡಿದ್ದಾರೆ. ಸಂವಿಧಾನದ ಬಗ್ಗೆ ನಾವೆಲ್ಲರೂ ಓದಿಕೊಂಡು ಅದರಂತೆ ನಡೆದು ರಾಷ್ಟ್ರದ ಅಭಿವೃದ್ಧಿಗೆ ಕೈಜೋಡಿಸಬೇಕು ಎಂದು ಹೇಳಿದರು.
ಎನ್. ಎಸ್. ಎಸ್ ಕಾರ್ಯಕ್ರಮ ಅಧಿಕಾರಿಗಳಾದ ಪ್ರಭುಲಿಂಗ ದೊಡ್ಡಮನಿ, ಸುರೇಶ ಕುಮಾರ ಪಾಂಗಿ ಇತರರು ಉಪಸ್ಥಿತರಿದ್ದರು.ವಿದ್ಯಾರ್ಥಿಗಳಾದ ಸುಷ್ಮಾ ತಹಸೀಲ್ದಾರ್ ಸ್ವಾಗತಿಸಿದರು, ಮಂಜುಳಾ ಸರವಂದ ಕಾರ್ಯಕ್ರಮ ನಿರೂಪಿಸಿದರು.
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ 