ಬೆಳಗಾವಿ 24: ಸ್ವಾತಂತ್ರ್ಯದ
ಬೆಳ್ಳಿಚುಕ್ಕಿ ನಾಡಾದ ಕಿತ್ತೂರಿನಲ್ಲಿ ಮೂರು ದಿನಗಳ ಚನ್ನಮ್ಮನ
ಕಿತ್ತೂರು ಉತ್ಸವವು ಮಂಗಳವಾರ(ಅ.23) ಸಡಗರ-ಸಂಭ್ರಮದಿಂದ ಆರಂಭಗೊಂಡಿತು.
ಕೋಟೆ ಆವರಣದಲ್ಲಿ ನಿಮರ್ಿಸಲಾಗಿದ್ದ
ಭವ್ಯ ವೇದಿಕೆಯಲ್ಲಿ ವೀರ ರಾಣಿ ಕಿತ್ತೂರು
ಚನ್ನಮ್ಮನ ಸಾಹಸಗಾಥೆ, ಧೈರ್ಯ-ಶೌರ್ಯ ಹಾಗೂ ಸ್ವಾಭಿಮಾನದ ಕಿಚ್ಚು
ಅನುರಣನಗೊಂಡಿತು. ನಾಡಿನ ಭವ್ಯ ಸಾಂಸ್ಕೃತಿಕ ಸೊಬಗು
ಅನಾವರಣಗೊಂಡಿತು.
ವೇದಿಕೆಯ ಮುಂಭಾಗದಲ್ಲಿ ಸಾಲಾಗಿ ಜೋಡಿಸಿಟ್ಟಿದ್ದ ಹಣತೆಗಳನ್ನು ಬೆಳಗುವ ಮೂಲಕ ವಿಧಾನ ಪರಿಷತ್ತಿನ
ಸಭಾಪತಿ ಬಸವರಾಜ ಹೊರಟ್ಟಿ ಕಿತ್ತೂರು ಉತ್ಸವಕ್ಕೆ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು,
179 ವರ್ಷಗಳ ಹಿಂದೆಯೇ ಅಂದರೆ ಝಾನ್ಸಿ ರಾಣಿಗಿಂತ ಮೊದಲೇ ಆಂಗ್ಲರ ವಿರುದ್ಧ ಹೋರಾಡಿದ ವೀರ ಮಹಿಳೆ ಕಿತ್ತೂರು
ಚನ್ನಮ್ಮನ ಇತಿಹಾಸವನ್ನು ಇಡೀ ದೇಶಕ್ಕೆ ಸಾರಲು
ದೇಶದಾದ್ಯಂತ ಕಿತ್ತೂರು ರಾಣಿ ಚನ್ನಮ್ಮನ ಉತ್ಸವ
ನಡೆಯಬೇಕಿದೆ ಎಂದು ಹೇಳಿದರು.
ರಾಜ್ಯದ ಸಂಸದರು ಕೇಂದ್ರ ಸಕರ್ಾರದ ಮೇಲೆ ಒತ್ತಡ ತಂದು
ದೇಶದ ಉದ್ದಗಲಕ್ಕೂ ಚನ್ನಮ್ಮನ ಉತ್ಸವ ನಡೆಸಬೇಕು ಎಂದು ಮನವಿ ಮಾಡಿಕೊಂಡರು
ಚನ್ನಮ್ಮನ
ಹೆಸರಿಡಿ:
ಈ ಭಾಗದಲ್ಲಿ ಜನಿಸುವ
ಹೆಣ್ಣುಮಕ್ಕಳಿಗೆ ಚನ್ನಮ್ಮನ ಹೆಸರು ಇಡುವ ಮೂಲಕ ಚನ್ನಮ್ಮನ
ಶೌರ್ಯ-ಸ್ವಾಭಿಮಾನವನ್ನು ಅಜರಾಮರ ಆಗಿಸಲು ಮುಂದಾಗಬೇಕು ಎಂದು ಬಸವರಾಜ ಹೊರಟ್ಟಿ
ಕರೆ ನೀಡಿದರು.
ಸ್ವಾತಂತ್ರ್ಯ ಕ್ಕಾಗಿ ಹೋರಾಡಿದ ಚನ್ನಮ್ಮನ ಹೆಸರಿನಲ್ಲಿ ನಡೆಯುವ ಉತ್ಸವಕ್ಕೆ ಯಾವುದೇ ಕಾರಣಕ್ಕೂ ಹಣದ ಕೊರತೆ ಆಗದಂತೆ
ಸಕರ್ಾರ ನೀಡಿಕೊಳ್ಳಬೇಕು.
ಚನ್ನಮ್ಮನ ಕುರಿತು ಏನೇ ಕಾರ್ಯಕ್ರಮ ಹಮ್ಮಿಕೊಂಡರೂ
ಅದಕ್ಕೆ ಎಲ್ಲ ರೀತಿಯ ಸಹಕಾರ
ಒದಗಿಸುವುದಾಗಿ ಅವರು ಭರವಸೆ ನೀಡಿದರು.
ಸ್ತ್ರೀ ಶಕ್ತಿಯ ಪ್ರತೀಕವಾಗಿ ಭಾರತ ಮಾತೆಯನ್ನು ಬ್ರಿಟೀಷರ
ಬಂಧನದಿಂದ ಮುಕ್ತಗೊಳಿಸಲು ಹೋರಾಡಿದ ವೀರಮಹಿಳೆಯ ಜೀವನ ಮತ್ತು ಸಾಧನೆ
ನಮಗೆಲ್ಲ ಆದರ್ಶವಾಗಬೇಕು ಎಂದು ಬಸವರಾಜ ಹೊರಟ್ಟಿ
ಹೇಳಿದರು.
ಇದೇ ವೇಳೆ ಮಾತನಾಡಿದ
ವಿಧಾನ ಪರಿಷತ್ತಿನ ವಿರೋಧಪಕ್ಷದ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ ಅವರು, ಕಿತ್ತೂರು ಉತ್ಸವ ಐತಿಹಾಸಿಕ ಉತ್ಸವವಾಗಬೇಕು ಎಂದು ಆಶಯ ವ್ಯಕ್ತಪಡಿಸಿದರು.
ಇದು ಮೂರು ದಿನಗಳ
ಉತ್ಸವವಾಗದೇ ಸಮಗ್ರ ಕನರ್ಾಟಕದ ಇತಿಹಾಸ ಸಾರುವ ಉತ್ಸವವಾಗಲಿ. ಕಿತ್ತೂರು ಅಭಿವೃದ್ಧಿ ವಿಷಯ ಬಂದಾಗ ನಾವು
ಪಕ್ಷಾತೀತವಾಗಿ ಒಂದಾಗಿರುತ್ತೇವೆ. ಈ ನಾಡಿನ ಸಮಗ್ರ
ಅಭಿವೃದ್ಧಿಗೆ ನಾವು ಬದ್ಧ ಎಂದು
ಹೇಳಿದರು.
ಉ.ಕ. ಅಭಿವೃದ್ಧಿ
ಮತ್ತು ಈ ಭಾಗದ ನೀರಿನ
ಬಳಕೆಗೆ ಎಲ್ಲರೂ ಒಗ್ಗಟ್ಟಾಗಿ ಪಕ್ಷಾತೀತ ಹೋರಾಟ ನಡೆಸೋಣ ಎಂದರು.
ಸಂಸದ ಸುರೇಶ್ ಅಂಗಡಿ
ಮಾತನಾಡಿ, ರಾಜ್ಯ ಸಕರ್ಾರವು ಬೆಳಗಾವಿ ವಿಮಾನ ನಿಲ್ದಾಣಕ್ಕೆ ರಾಣಿ ಚನ್ನಮ್ಮ ಹೆಸರಿಡಲು
ಕ್ರಮಕೈಗೊಂಡು ಕೇಂದ್ರಕ್ಕೆ ಪ್ರಸ್ತಾಪವನ್ನು ಕಳಿಸಿದರೆ ಚನ್ನಮ್ಮ ಹೆಸರಿಡಲು ಕೇಂದ್ರ ಸಕರ್ಾರ ಮುಂದಾಗಲಿದೆ ಎಂದರು.
ಮುಂದಿನ ವರ್ಷದಿಂದ ವಿದ್ಯಾಥರ್ಿಗಳು ಹಾಗೂ ಯುವ ಸಮುದಾಯ
ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತಾಗಬೇಕು.
ಶಾಶ್ವತ
ಸಭಾಭವನ ನಿಮರ್ಾಣವಾಗಲಿ:
ಸಂಸದ ಪ್ರಕಾಶ್ ಹುಕ್ಕೇರಿ
ಅವರು ಮಾತನಾಡಿ, ದಸರಾ ಉತ್ಸವಕ್ಕೆ ಅನುದಾನ
ನೀಡುವ ಮಾದರಿಯಲ್ಲಿ ಬಜೆಟ್ ನಲ್ಲಿ ಕಿತ್ತೂರು ಉತ್ಸವಕ್ಕೆ ಹಣ ಮೀಸಲಿರಿಸಬೇಕು ಎಂದು
ಒತ್ತಾಯಿಸಿದರು.
ಚನ್ನಮ್ಮನ ಹೆಸರಿನಲ್ಲಿ 2ರಿಂದ 5 ಕೋಟಿ ವೆಚ್ಚದಲ್ಲಿ ಶಾಶ್ವತ
ಸಮುದಾಯ ಭವನ ನಿಮರ್ಿಸುವ ಅಗತ್ಯವಿದೆ.
ಈ ನಿಟ್ಟಿನಲ್ಲಿ ಪ್ರಸಕ್ತ
ವರ್ಷವೇ ಐದು ಕೋಟಿ ರೂಪಾಯಿ
ಒದಗಿಸಬೇಕು. ಸಂಸದರ ಅನುದಾನದಲ್ಲಿ 25 ಲಕ್ಷ ನೀಡಲು ಸಿದ್ಧ
ಎಂದು ಘೋಷಿಸಿದರು.
ನಂತರ ಮಾತನಾಡಿದ ಶಾಸಕ
ಆನಂದ ಮಾಮನಿ, ರಾಣಿ ಚನ್ನಮ್ಮ ಉತ್ಸವವು
ಪ್ರತಿವರ್ಷ ಅರ್ಥಪೂರ್ಣವಾಗಿ ನಡೆಸಬೇಕಿದೆ ಎಂದರು.
300 ಕೋಟಿ
ಅನುದಾನ ಕೋರಿಕೆ:
ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಮಹಾಂತೇಶ ದೊಡ್ಡಗೌಡರ
ಅವರು, ಚನ್ನಮ್ಮನ ಕಿತ್ತೂರು ಹೆಸರಿನ ವಿಧಾನಸಭಾ ಕ್ಷೇತ್ರದಿಂದ ಆಯ್ಕೆಗೊಂಡ ತಾವು ಭಾಗ್ಯವಂತ ಎಂದು
ಹೇಳಿದರು.
ಆಂಗ್ಲರ ವಿರುದ್ಧ ಸೆಣಸಾಟ ನಡೆಸಿ ಇಡೀ ಜಗತ್ತಿಗೆ ಶೌರ್ಯವನ್ನು
ಪ್ರದಶರ್ಿಸಿದ ಚನ್ನಮ್ಮ ನಮಗೆಲ್ಲ ಆದರ್ಶಪ್ರಾಯ ಎಂದರು.
ಈ ಬಾರಿ ಅತೀ
ಹೆಚ್ಚು ಅಂದರೆ 1.05 ಕೋಟಿ ರೂಪಾಯಿ ಅನುದಾನ
ಒದಗಿಸುವ ಮೂಲಕ ಅದ್ದೂರಿ ಉತ್ಸವಕ್ಕೆ
ನೆರವಾದ ಮುಖ್ಯಮಂತ್ರಿಗಳು ಹಾಗೂ ರಾಜ್ಯ ಸಕರ್ಾರಕ್ಕೆ
ಕೃತಜ್ಞತೆ ಸಲ್ಲಿಸಿದರು.
ಕಿತ್ತೂರು ಅಭಿವೃದ್ದಿ ಪ್ರಾಧಿಕಾರದ ಮೂಲಕ ರಾಕ್ ಗಾರ್ಡನ್,
ಬೋಟಿಂಗ್ ವ್ಯವಸ್ಥೆ ಹಾಗೂ ಲಾಲ್ ಬಾಗ್
ಮಾದರಿಯ ಉದ್ಯಾನ, ರಸ್ತೆ ನಿಮರ್ಾಣ, ವಿಶೇಷ ವಿದ್ಯುತ್ ಅಲಂಕಾರಕ್ಕೆ ಉದ್ದೇಶಿಸಲಾಗಿದೆ. ಇದಕ್ಕೆ ಸಕರ್ಾರದ ವತಿಯಿಂದ 300 ಕೋಟಿ ಅನುದಾನ ನೀಡಲು
ಒತ್ತಾಯಿಸಿದರು.
ಸಾನಿಧ್ಯ ವಹಿಸಿದ್ದ ಕಿತ್ತೂರಿನ ರಾಜಗುರು ಸಂಸ್ಥಾನ ಕಲ್ಮಠದ ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ ಆಶೀರ್ವಚನ ನೀಡಿದರು.
ಸಕರ್ಾರದ ಮುಖ್ಯ ಸಚೇತಕರಾದ ಗಣೇಶ್ ಹುಕ್ಕೇರಿ, ಶಾಸಕರಾದ ಮಹಾದೇವಪ್ಪ ಯಾದವಾಡ, ಆನಂದ ಮಾಮನಿ, ಅನಿಲ್
ಬೆನಕೆ,
ವಿಧಾನ ಪರಿಷತ್ ಸದಸ್ಯರಾದ ಅರು ಶಹಾಪುರ, ಹಣಮಂತ
ನಿರಾಣಿ, ಜಿಲ್ಲಾ
ಪಂಚಾಯತ ಅಧ್ಯಕ್ಷೆ ಆಶಾ ಐಹೊಳೆ, ಬೈಲಹೊಂಗಲ
ತಾಲ್ಲೂಕು ಪಂಚಾಯತ ಅಧ್ಯಕ್ಷೆ ಶೈಲಾ ಸಿದ್ರಾಮಣಿ, ಕಿತ್ತೂರು
ಪಟ್ಟಣ ಪಂಚಾಯತ ಅಧ್ಯಕ್ಣ ಮಹಮ್ಮದ್ ಹನೀಫ್ ಸುತಗಟ್ಟಿ, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿವರ್ಾಹಕ ಅಧಿಕಾರಿ ರಾಮಚಂದ್ರನ್, ಪೊಲೀಸ್ ವರಿಷ್ಠಾಧಿಕಾರಿ ಸುಧೀರಕುಮಾರ್ ರೆಡ್ಡಿ, ಬೈಲಹೊಂಗಲ ಉಪ ವಿಭಾಗಾಧಿಕಾರಿ ಶಿವಾನಂದ
ಭಜಂತ್ರಿ ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಜಿಲ್ಲಾಧಿಕಾರಿ
ಡಾ.ಎಸ್.ಬಿ.ಬೊಮ್ಮನಹಳ್ಳಿ
ಸ್ವಾಗತಿಸಿದರು. ಶಕುಂತಲಾ ವೀರಬಸಪ್ಪ ಗಡಗಿ ಶಾಲೆಯ ಮಕ್ಕಳು
ನಾಡಗೀತೆ ಹಾಗೂ ರೈತಗೀತೆ ಪ್ರಸ್ತುತಪಡಿಸಿದರು.
ಎಸ್ಸೆಸ್ಸೆಲ್ಸಿ
ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಯರ್ಾಂಕ್ ಗಳಿಸಿದ ಬೆಳಗಾವಿ ಜಿಲ್ಲೆಯ ಮೊಹ್ಮದ್ ಕೈಫ್ ಎಚ್. ಮುಲ್ಲಾ
ಅವರನ್ನು ಗಣ್ಯರು ಸನ್ಮಾನಿಸಿದರು.
ಸಾಂಸ್ಕೃತಿಕ
ರಂಗು:
ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಪ್ರವಾಸೋದ್ಯಮ ಇಲಾಖೆಯ
ಆಶ್ರಯದಲ್ಲಿ ಆಯೋಜಿಸಲಾಗಿದ್ದ ಮೂರು ದಿನಗಳ ಚನ್ನಮ್ಮನ
ಕಿತ್ತೂರು ಉತ್ಸವದ ಮೊದಲ ದಿನ ವಿವಿಧ
ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ಉತ್ಸವದ ಮುಖ್ಯ ವೇದಿಕೆಯಲ್ಲಿ ಸಂಜೆ 4 ಗಂಟೆಯಿಂದಲೇ ವಿವಿಧ ಬಗೆಯ ಸಾಂಸ್ಕೃತಿಕ ಕಾರ್ಯಕ್ರಮಗಳು
ನಡೆದವು.
ನಿಚ್ಚಣಿಕೆಯ ಮಲ್ಲಿಕಾಜರ್ುನ ನಿಚ್ಚಣಿಕೆ ಅವರು ಭಜನೆ; ಯಾದಗಿರಿಯ
ಬಸವರಾಜ ಬಂಟನೂರ ಸುಗಮ ಸಂಗೀತ; ತಿಗಡೊಳ್ಳಿಯ
ಅಂಧ ಕಲಾವಿದರಾದ ಬಸವರಾಜ ತಿಮ್ಮಾಪುರ ತತ್ವಗಾಯನ; ಬೆಳಗಾವಿಯ ರಾಜೇಂದ್ರ ಭಂಡಾರಿ ತಂಡ ಜಾದೂ ಪ್ರದರ್ಶನ
ನೀಡಿದರು. ಮೂಡಲಗಿಯ ಇಸ್ಮಾಯಿಲ್ ಪೀರಜಾದೆ ಜಾನಪದಗೀತೆಗಳನ್ನು ಹಾಡಿ ಜನರನ್ನು ರಂಜಿಸಿದರು.