ಕೊಪ್ಪಳದಲ್ಲೇ ್ರ್ರಥಮ ಬಾರಿಗೆ ಗಾಳಿಪಟ ಸ್ಪರ್ಧೆ
Kite competition for the first time in Koppal
ಕೊಪ್ಪಳದಲ್ಲೇ ್ರ್ರಥಮ ಬಾರಿಗೆ ಗಾಳಿಪಟ ಸ್ಪರ್ಧೆ
ಕೊಪ್ಪಳ 16: ಕೊಪ್ಪಳದಲ್ಲೇ ್ರ್ರಥಮ ಬಾರಿಗೆ ಗಾಳಿಪಟ ಸ್ಪರ್ಧೆ ವಿಶ್ವ ಹೃದಯ ದಿನಾಚರಣೆಯ ಅಂಗವಾಗಿ ಕೆ.ಎಸ್. ಆಸ್ಪತ್ರೆ ವತಿಯಿಂದ ಅಕ್ಟೋಬರ್ 18ರಂದು ಜಿಲ್ಲಾ ಮೈದಾನದಲ್ಲಿ ಗಾಳಿಪಟ ಸ್ಪರ್ಧೆ ಹಾಗೂ ಗಾಳಿಪಟ ಪ್ರದರ್ಶನ ಕಾರ್ಯಕ್ರಮವನ್ನು ಭವ್ಯವಾಗಿ ಹಮ್ಮಿಕೊಳ್ಳಲಾಗಿದೆ.ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಡಾ. ರಾಮ್ ಎಲ್. ಅರಸಿದ್ದಿ(ಪೊಲೀಸ್ ವರಿಷ್ಠಾಧಿಕಾರಿ (ಎಸ್.ಪಿ.) ಕೊಪ್ಪಳ ಜಿಲ್ಲೆ, ಡಾ. ಬಸವರಾಜ ಎಸ್. ಕ್ಯಾವಟರ್ (ಮುಖ್ಯಸ್ಥರು, ಕೆ ಎಸ್ ಆಸ್ಪತ್ರೆ ಕೊಪ್ಪಳ), ಡಾ. ಲಿಂಗರಾಜು ಟಿ. (ಜಿಲ್ಲಾ ಆರೋಗ್ಯಾಧಿಕಾರಿ), ಡಾ. ಕೆ.ಜಿ. ಕುಲಕರ್ಣಿ (ಹಿರಿಯ ಕುಟುಂಬ ವೈದ್ಯರು), ಡಾ. ಧನ್ ರೆಡ್ಡಿ (ನಿವೃತ್ತ ಜಿಲ್ಲಾ ಆರೋಗ್ಯಾಧಿಕಾರಿ), ಡಾ. ರುದ್ರೇಶ್ (ಕಾರ್ಡಿಯಾಲಜಿಸ್ಟ್) ಹಾಗೂ ಡಾ. ಗಗನ (ಇಂಟೆನ್ಸಿವಿಸ್ಟ್) ಉಪಸ್ಥಿತರಿರಲಿದ್ದಾರೆ.ಈ ಸಂದರ್ಭದಲ್ಲಿ ಹೃದಯದ ಆರೋಗ್ಯ ಜಾಗೃತಿ ಕುರಿತು ಉಪನ್ಯಾಸ ಕುರಿತು ಪ್ರಾಯೋಗಿಕ ಪ್ರದರ್ಶನ ನೀಡಲಿದ್ದಾರೆ.ಕಾರ್ಯಕ್ರಮದ ಭಾಗವಾಗಿ ಮೂರು ವಿಭಾಗಗಳಲ್ಲಿ ಗಾಳಿಪಟ ಸ್ಪರ್ಧೆ ನಡೆಯಲಿದ್ದು, ಜೊತೆಗೆ ಟೀಮ್ ಮಂಗಳೂರು ವತಿಯಿಂದ ಅಂತರಾಷ್ಟ್ರೀಯ ಖ್ಯಾತಿಯ ಗಾಳಿಪಟ ಪ್ರದರ್ಶನವೂ ನಡೆಯಲಿದೆ. ಅಂತರಾಷ್ಟ್ರೀಯ ಗಾಳಿಪಟ ಹಾರಾಟಗಾರ ಶ್ರೀ ಸಂದೇಶ್ ಕಡ್ಡಿ ಮತ್ತು ಅವರ ತಂಡದ ವಿಶಿಷ್ಟ ಪ್ರದರ್ಶನ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಲಿದೆ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 