ರಾಜ್ಯಮಟ್ಟದ ಭಾರ ಎತ್ತುವ ಸ್ಪರ್ಧೆಯಲ್ಲಿ ಕಿರಣ್ ಗುಂಗೆರ್‌ಗೆ ದ್ವಿತೀಯ ಸ್ಥಾನ
Kiran Gunger wins second place in state-level weightlifting competition
ರಾಜ್ಯಮಟ್ಟದ ಭಾರ ಎತ್ತುವ ಸ್ಪರ್ಧೆಯಲ್ಲಿ ಕಿರಣ್ ಗುಂಗೆರ್‌ಗೆ ದ್ವಿತೀಯ ಸ್ಥಾನ
ರಾಣೇಬೆನ್ನೂರ 14: ಕರ್ನಾಟಕ ರಾಜ್ಯ ಪವರ್ ಲಿಫ್ಟಿಂಗ್ ಅಸೋಸಿಯೇಷನ್ ಚಾಂಪಿಯನ್ಶಿಪ್ -25, ಭಾರ ಎತ್ತುವ ಸ್ಪರ್ಧೆ ಇತ್ತೀಚೆಗೆ ಆಯೋಜಿಸಿತ್ತು. ಬೆಂಗಳೂರಿನ ರಾಮಮೂರ್ತಿ ನಗರದ ದಿನೇಶ್ ನಾಟ್ಯಾಲಯ ರಂಗಮಂದಿರದಲ್ಲಿ ಸ್ಪರ್ಧೆ ನಡೆಯಿತು. ಸ್ಪರ್ಧಾತ್ಮಕವಾಗಿ ಜರುಗಿದ ಈ ಪವರ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಜೂನಿಯರ್- 74 ಕೆಜಿ ವಿಭಾಗದಲ್ಲಿ ಕಿರಣ್ ಗುಂಗೇರ ದ್ವಿತೀಯ ಸ್ಥಾನ ಪಡೆದು, ರಾಜ್ಯಮಟ್ಟದಲ್ಲಿ ತನ್ನ ಸಾಧನೆ ಮೆರೆದಿದ್ದಾನೆ. ಹಾವೇರಿ ಜಿಲ್ಲೆಯ ರಾಣೇಬೆನ್ನೂರ ತಾಲೂಕಿನ ಕಲಾವಿದರ ತವರೂರು ಖ್ಯಾತಿಯ ಆರೇಮಲ್ಲಾಪುರ ಗ್ರಾಮದ ಪ್ರತಿಭಾವಂತ ಕಿರಣ್ ಹಾಲೇಶ ಗುಂಗೇರ್, ಸದ್ಯ ಮಂಗಳೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬಿಕಾಂ, ತೃತೀಯ ವರ್ಷದಲ್ಲಿ ತನ್ನ ಶೈಕ್ಷಣಿಕ ಅಧ್ಯಯನ ಪೂರೈಸುತ್ತಿದ್ದಾನೆ. ಕ್ರೀಡಾ ಸಾಧಕ ಕಿರಣ ಗುಂಗೇರ್ ಈತನಿಗೆ, ಜಿಲ್ಲೆಯು ಸೇರಿದಂತೆ ನಾಡಿನ ಅನೇಕ, ಕ್ರೀಡಾ ಚಟುವಟಿಕೆಗಳ ಸಂಘ, ಸಂಸ್ಥೆಗಳು ಹಾರ್ದಿಕವಾಗಿ ಅಭಿನಂದಿಸಿ ಶುಭ ಹಾರೈಸಿದ್ದಾರೆ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 