ಕಿನ್ನಾಳ ಜನಮನ ರಂಜಿಸಿದ ಸಂಗೀತ ಸಂಭ್ರಮ
Kinna's crowd-pleasing musical extravaganza
ಕಿನ್ನಾಳ ಜನಮನ ರಂಜಿಸಿದ ಸಂಗೀತ ಸಂಭ್ರಮ
ಕೊಪ್ಪಳ 14: ತಾಲೂಕಿನ ಕಿನ್ನಾಳ ಗ್ರಾಮದ ಬನಶಂಕರಿ ದೇವಿ ಜಾತ್ರಾ ಮಹೋತ್ಸವದ ಅಂಗವಾಗಿ ಅಭಿನವ ಸಂಗೀತ ಕಲಾ ಹಾಗೂ ಸಾಂಸ್ಕೃತಿಕ ಶಿಕ್ಷಣ ಸಂಸ್ಥೆಯು ಹಮ್ಮಿಕೊಂಡಿದ್ದ ಸಂಗೀತ ಸಂಭ್ರಮ ಕಾರ್ಯಕ್ರಮ ಜನಮನ ಸೆಳೆಯಿತು. ಸಿದ್ದೇಶ್ವರ ಮಹಾಸ್ವಾಮಿಗಳು ಸಂಸ್ಥಾನ ಮಠ ಮೈನಳ್ಳಿ ರವರು ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿಕೊಂಡು ಹಾರ್ಮೋನಿಯಂ ನುಡಿಸುವುದರ ಮೂಲಕ ಉದ್ಘಾಟನೆ ಮಾಡಿದರು.
ಗ್ರಾಮದ ಹಿರಿಯರಾದ ಕಾಳಪ್ಪ ಮಾಸ್ತರ ಪತ್ತಾರ್ ರವರು ಕಾರ್ಯಕ್ರಮಕ್ಕೆ ನಾಂದಿ ಹಾಡು ಹಾಡಿ ಚಾಲನೆ ನೀಡಿದರು ದೇವಾಂಗ ಮಠದ ಶಂಕರಾನಂದ ಸ್ವಾಮಿಗಳು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ವೇತಾ ರಾಘವೇಂದ್ರ ಡಂಬಳ್ ರವರು ಅಧ್ಯಕ್ಷತೆ ವಹಿಸಿಕೊಂಡಿದ್ದರು. ಅನಿಲ್ ಕುಮಾರ ಬೋರಟ್ಟಿ ಬಸವರಾಜ್ ಚೀಲವಾಡಗಿ, ವಿರೇಶ್ ತಾವರಗೇರಿ ದೇವಪ್ಪ ಹಳ್ಳಿಕೇರಿ ಹಲವಾರು ಯುವ ಮುಖಂಡರು ಹಿರಿಯರು ಪಾಲ್ಗೊಂಡಿದ್ದರು.
ಸಂಗೀತ ಸಂಭ್ರಮ ಪ್ರಾರಂಭದಲ್ಲಿ ಮಾರುತಿ ಬಿನ್ನಾಳ ರವರಿಂದ ಶಾಸ್ತಿಯ ಸಂಗೀತ ನಾಗರಾಜ್ ಶಾವಿ ರವರ ಬಾನ್ಸುರಿ ವಾದನ ಜನರ ಮನ ಸೆಳೆಯಿತು ಸಂಗು ಹಿರೇಮಠ್ ಪೂರ್ಣಿಮಾ ತಾವರಗೇರಿ ಯವರು ಸುಗಮ ಸಂಗೀತ ಮತ್ತು ಜಾನಪದ ಸಂಗೀತ ಮತ್ತು ಮಂಗಳೂರಿನಿಂದ ಆಗಮಿಸಿದ ವಿಜಯಲಕ್ಸ್ಮಿ ಯವರ ಭರತ ನಾಟ್ಯ ಅತ್ಯಂತ ಯಶಸ್ವಿಯಾದವು ನಂತರ ವಿವಿಧ ಮನೋರಂಜನೆ ಕಾರ್ಯಕ್ರಮಗಳು ಜರುಗಿದವು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 