ಜ.1 ರಿಂದ ಖೈರವಾಡಿ ಲಕ್ಷ್ಮೀದೇವಿ ಜಾತ್ರೆ
Khairawadi Lakshmi Devi Fair from January 1st
ರಾಯಬಾಗ 25: ರೈಲ್ವೆ ಸ್ಟೇಷನದ (ಖೈರವಾಡಿ) ಲಕ್ಷ್ಮೀದೇವಿ ಜಾತ್ರಾ ಮಹೋತ್ಸವವು ಜ.1 ರಿಂದ 4 ರವರೆಗೆ ವಿಜೃಂಭಣೆಯಿಂದ ಜರುಗಲಿದೆ. ಜ.1 ರಂದು ಬೆಳ್ಳಿಗ್ಗೆ 7.15 ಕ್ಕೆ ಲಕ್ಷ್ಮೀದೇವಿಗೆ ಮಹಾಭಿಷೇಕ ನಂತರ ಮಹಾಪೂಜೆ, 10 ಗಂಟೆಗೆ ಉಡಿ ತುಂಬುವುದು ಮತ್ತು ಮಹಾನೈವೇದ್ಯ, ಮಧ್ಯಾಹ್ನ ಭಕ್ತಾದಿಗಳಿಗೆ ಮಹಾಪ್ರಸಾದ, ರಾತ್ರಿ ದೇವಿಯ ಉತ್ಸವ ಮೂರ್ತಿ ಭವ್ಯ ಮೆರವಣಿಗೆ ನಡೆಯಲಿದೆ. ಜ.2 ರಂದು ಮಧ್ಯಾಹ್ನ 3 ಗಂಟೆಗೆ ಸಾಯಕಲ್ ಶರ್ಯತ್ತು, ನಂತರ ಕುದುರೆ ಶರ್ಯತ್ತು ನಡೆಯಲಿವೆ. ಸಾಯಂಕಾಲ 6 ಗಂಟೆಗೆ ಅಲಖನೂರ ಮಲ್ಲಿಕಾರ್ಜುನ ಪ್ರಾಸಾದಿಕ ನಾಟ್ಯ ಸಂಘದಿಂದ ಸಾಮಾಜಿಕ ನಾಟಕ ಪ್ರದರ್ಶನ. ಜ.3 ರಂದು ಮುಂ.10 ಗಂಟೆಗೆ ದನಗಳ ಭವ್ಯ ಪ್ರದರ್ಶನ, ಮಧ್ಯಾಹ್ನ 3 ಗಂಟೆಗೆ ಜಂಗಿ ನಿಕಾಲಿ ಕುಸ್ತಿ ನಡೆಯಲಿದೆ. ಜ.4 ರಂದು ಮುಂ.10 ಗಂಟೆಗೆ ಜೋಡು ಎತ್ತಿನ ಗಾಡಿ ಶರ್ಯತ್ತು ನಡೆಯಲಿದೆ ಎಂದು ಶ್ರೀ ಲಕ್ಷ್ಮೀದೇವಿ ಟ್ರಸ್ಟ ಕಮಿಟಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ 