ಕಾಯಕ ನಿಷ್ಠೆಯ ಅರಿವು ಮೂಡಿಸಿದ ಕಾಯಕಯೋಗಿ ಶಿವಶರಣ ನುಲಿ ಚಂದಯ್ಯ.
Kayak yogi Shivsharan Nuli Chandaya, who raised awareness about Kayak loyalty.
ಕಾಯಕ ನಿಷ್ಠೆಯ ಅರಿವು ಮೂಡಿಸಿದ ಕಾಯಕಯೋಗಿ ಶಿವಶರಣ ನುಲಿ ಚಂದಯ್ಯ.
ವಿಜಯನಗರ(ಹೊಸಪೇಟೆ) 10: ಕಾಯಕ ಮತ್ತು ದಾಸೋಹದ ಮಹತ್ವವನ್ನು ವಚನಗಳ ಮೂಲಕ ಅರಿವು ಮೂಡಿಸಿದ ಕಾಯಕಯೋಗಿ ಶಿವಶರಣ ನುಲಿ ಚಂದಯ್ಯ ಸ್ಮರಣೀಯರು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಸಿದ್ದಲಿಂಗೇಶ್ ರಂಗಣ್ಣನವರ್ ಹೇಳಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಕಾಯಕಯೋಗಿ ನುಲಿಯ ಚಂದಯ್ಯ ಜಯಂತಿ ಕಾರ್ಯಕ್ರಮವನ್ನು ನುಲಿಯ ಚಂದಯ್ಯರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಶನಿವಾರ ಉದ್ಘಾಟಿಸಲಾಯಿತು,
12ನೇ ಶತಮಾನದಲ್ಲಿ ಬಸವೇಶ್ವರರ ಸಮಕಾಲೀನರಾಗಿದ್ದ ಶಿವಶರಣ ನುಲಿ ಚಂದಯ್ಯನವರು ತಮ್ಮ ಎಲ್ಲಾ ವಚನಗಳಲ್ಲಿ ಚಂದೇಶ್ವರ ಲಿಂಗ ಎನ್ನುವ ಅಂಕಿತದಲ್ಲಿ ರಚಿಸಿರುವ ಸುಮಾರು 49 ವಚನಗಳು ಲಭ್ಯವಾಗಿವೆ. ನಿಜ ಭಕ್ತಿಯ ಬಗ್ಗೆ, ಕಾಯಕ ಶುದ್ಧಿ, ಅಪ್ರಮಾಣಿಕತೆ, ಆಡಂಬರದ ಭಕ್ತಿ, ನಡೆ ನುಡಿಯಲ್ಲಿನ ವ್ಯತ್ಯಾಸದ ಬಗ್ಗೆ ತಮ್ಮ ವಚನಗಳಲ್ಲಿ ಕಟುವಾಗಿ ಟೀಕಿಸಿದ್ದಾರೆ. ಸಹವಚನಕಾರರು ನುಲಿ ಚಂದಯ್ಯರ ಬಗ್ಗೆ ವಚನಗಳನ್ನು ಕಟ್ಟಿರುವುದು ವಿಶೇಷವಾಗಿದೆ. ಮುಂದಿನ ಜನಪದ ಸಮುದಾಯಗಳು ಚಂದಯ್ಯರ ಬಗ್ಗೆ ಜನಪದ ಹಾಡುಗಳ ಮೂಲಕ ಆವರ ಸ್ಮರಣೆಯನ್ನು ನಿರಂತರವಾಗಿ ಸಮಾಜಕ್ಕೆ ನೀಡುವಂತೆ ಮಾಡಿದ್ದಾರೆ. ಇಂತಹ ಮಹನೀಯರ ತತ್ವಾದರ್ಶಗಳನ್ನು ಇಂದಿನ ಯುವಪೀಳಿಗೆ ಅನುಸರಿಸುವ ಮೂಲಕ ಅವರ ಜಯಂತಿ ಆಚರಣೆಯನ್ನು ಅರ್ಥಪೂರ್ಣಗೊಳಿಸಬೇಕಿದೆ ಎಂದರು.
ಈ ವೇಳೆ ಸಮುದಾಯದ ಮುಖಂಡರು, ಜಿಲ್ಲಾಧಿಕಾರಿಗಳ ಸಿಬ್ಬಂದಿಗಳು ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 