ಕವಿರತ್ನ ಕಾಳಿದಾಸ ಕನ್ನಡ ಮಾಧ್ಯಮ ಪ್ರೌಢಶಾಲೆ ವಾರ್ಷಿಕ ಸ್ನೇಹ ಸಮ್ಮೇಳನ
Kaviratna Kalidasa Kannada Medium High School Annual Friendship Conference
ರಾಯಬಾಗ 12 : ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳಲ್ಲಿ ಜ್ಞಾನದ ದೀಪ ಹಚ್ಚುವ ಜ್ಞಾನ ದೇಗುಲಗಳಾಗಬೇಕು ಎಂದು ಹಾರೂಗೇರಿಯ ಸಿದ್ದೇಶ್ವರ ಪದವಿ ಪೂರ್ವ ಮಹಾವಿದ್ಯಾಲಯದ ಪ್ರಾಚಾರ್ಯ ಹಾಗೂ ಸಾಹಿತಿ ಟಿ ಎಸ್ ವಂಟಗೂಡಿ ಹೇಳಿದರು. ಗುರುವಾರ ತಾಲೂಕಿನ ಹಿಡಕಲ ಗ್ರಾಮದ ಕವಿರತ್ನ ಕಾಳಿದಾಸ ಕನ್ನಡ ಮಾಧ್ಯಮ ಪ್ರಾಥಮಿಕ ಶಾಲೆ ಹಾಗೂ ಬೀರೇಶ್ವರ ಪ್ರೌಢಶಾಲೆ ವಾರ್ಷಿಕ ಸ್ನೇಹ ಸಮ್ಮೇಳನ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಶ್ರಮಪಟ್ಟು ಕಾಯಕ ಮಾಡಿದರೆ ನಾಯಕರಾಗಲು ಸಾಧ್ಯ. ಕತ್ತಲಲ್ಲಿ ಬೆಳಕು ಎಷ್ಟು ಮುಖ್ಯವೋ ಜೀವನಕ್ಕೆ ಶಿಕ್ಷಣ ಕೂಡ ಅಷ್ಟೇ ಮುಖ್ಯ ಎಂದರು.
ಅಧ್ಯಕ್ಷತೆಯನ್ನು ಸಂಸ್ಥೆ ಅಧ್ಯಕ್ಷೆ ರೇಖಾ ಬೀಳಗಿ ವಹಿಸಿದ್ದರು. ಕಾರ್ಯಕ್ರಮದಲ್ಲಿ ಬಿ.ಎಮ್. ಮೆಣಸಿ, ಪಾಂಡುರಂಗ ಮೆಕ್ಕಳಕಿ, ರಾಘು ಸಿಂಪಿ, ಸವಿತಾ ಗಲಗಲಿ, ಸಿದ್ದಪ್ಪ ಅಲಕನೂರ, ಲಕ್ಷ್ಮೀ ಹೋಳ್ಕರ, ಸಂಜೀವ ಕಲಾಲ, ರೇವಪ್ಪ ಜೋಡಟ್ಟಿ, ಸುನಂದಾ ಬೀಳಗಿ, ಜ್ಞಾನದೇವ ಸಾಂಬರೆ, ಎಮ್. ಐ. ಪಾಟೀಲ, ಬೀರಸಿದ್ಧ ಬಿಳಗಿ, ಬಸವರಾಜ ಕಾಮಾನಿ, ಸಿದ್ದಪ್ಪ ಹೊಸಟ್ಟಿ ಹಾಗೂ ಶಿಕ್ಷಕ ಮತ್ತು ವಿದ್ಯಾರ್ಥಿಗಳು ಇದ್ದರು. ಪ್ರಧಾನ ಗುರುಗಳಾದ ಬೀರ್ಪ ತಡಸಲೂರ ಸ್ವಾಗತಿಸಿದರು, ಚುಟುಕು ಸಾಹಿತಿ ಡಿ. ಎಮ್. ಕೋಳಿ ನಿರೂಪಿಸಿದರು, ದೈಹಿಕ ಶಿಕ್ಷಕ ಎಮ್. ವಿ. ಆಂಟಿನ ವಂದಿಸಿದರು.ಫೋಟೊ: 12 ಫೋಟೊ ಶೀರ್ಷಿಕೆ: ರಾಯಬಾಗ: ತಾಲೂಕಿನ ಹಿಡಕಲ ಗ್ರಾಮದ ಕವಿರತ್ನ ಕಾಳಿದಾಸ ಕನ್ನಡ ಮಾಧ್ಯಮ ಪ್ರಾಥಮಿಕ ಶಾಲೆ ಹಾಗೂ ಬೀರೇಶ್ವರ ಪ್ರೌಢಶಾಲೆ ವಾರ್ಷಿಕ ಸ್ನೇಹ ಸಮ್ಮೇಳನ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡುತ್ತಿರುವ ಸಾಹಿತಿ ಟಿ ಎಸ್ ವಂಟಗೂಡಿ.
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ
ವಿಮೆ ಹಣಕ್ಕಾಗಿ ಪತಿ ಹತ್ಯೆ: ಪತ್ನಿ, ಎಫ್ಎಸ್ಎಲ್ ಅಧಿಕಾರಿ ಸೇರಿ 9 ಜನ ಬಂಧನ : ಎಸ್ ಪಿ ರಾಮರಾಜನ್
ಹಿಂಡಲಗಾ ಜೈಲಿನಿಂದ ಶಿವಾನಂದ ನಿಲಣ್ಣವರ ಬಿಡುಗಡೆ : ಎಲ್ಲದಕ್ಕು ಓಂ ನಮಃ ಶಿವಾಯ ಎಂದು ಪ್ರತಿಕ್ರಿಯೆ
ಕಲುಸಿತ ಆಹಾರ ಸೇವನೆ: 30 ವಿಧ್ಯಾರ್ಥಿಗಳು ಆಸ್ಪತ್ರೆಗೆ ಅಲೇದಾಟ, ಅಧಿಕಾರಿಗಳ ವಿರುದ್ಧ ತಡರಾತ್ರಿ ಪ್ರತಿಭಟನೆ
ಬಹುಕೋಟಿ ವಂಚನೆ ಪ್ರಕರಣ : ಶಿವಾನಂದ ನೀಲಣ್ಣವರಗೆ ಮಧ್ಯಂತರ ಜಾಮೀನು ಮಂಜೂರು 