ತಾಲೂಕಿನ ಕಾತೂರು, ಪಾಳ ಮಳಗಿ ಗ್ರಾಮದಲ್ಲಿ ಮತ್ತೆ ಹೆಡೆ ಎತ್ತಿದ ಮಟ್ಕಾ ದಂಧೆ!
Kattur, Pala Malgi village of the taluk, the matka racket raised its head again!
ತಾಲೂಕಿನ ಕಾತೂರು, ಪಾಳ ಮಳಗಿ ಗ್ರಾಮದಲ್ಲಿ ಮತ್ತೆ ಹೆಡೆ ಎತ್ತಿದ ಮಟ್ಕಾ ದಂಧೆ!
ಮುಂಡಗೋಡ 31 : ತಾಲೂಕಿನ ಕೆಲ ಗ್ರಾಮಗಳಲ್ಲಿ ಓಸಿ ದಂಧೆ ಯಾವುದೇ ಹಿಡಿತವಿಲ್ಲದೇ ರಾಜಾರೋಷವಾಗಿ ಸಾಗುತ್ತಿದ್ದು ಕುಟುಂಬಗಳ ಚಿಂತೆಗೆ ಕಾರಣವಾಗಿದೆ. ತಾಲೂಕಿನ ಕಾತೂರು, ಪಾಳಾದಲ್ಲಿ ಗೂಡಂಗಡಿ ಗೆ ಬೆಳ್ಳಂಬೆಳಗ್ಗೆ ಓಸಿ ನಂಬರ್ ಬರೆಸಲು ಜನ ಬರುತ್ತಾರೆ. ಕಳೆದ ಕೆಲ ತಿಂಗಳಿಂದ ಮಟ್ಕಾ ಮುಚ್ಚಿ ಹೋಗಿದೆ ಎಂದು ಗುಲ್ಲೆಬ್ಬಿಸಲಾಗಿತ್ತು, ಅದಾಗಿ ಕೆಲವೇ ದಿನದಲ್ಲಿ ಅಲ್ಲಲ್ಲಿ ನಾಯಿಕೊಡೆಯಂತೆ ಹೆಡೆ ಬಿಚ್ಚುತ್ತಿದ್ಧಾರೆ ಬುಕ್ಕಿಗಳು.. ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳು ಓಸಿ, ಮಟ್ಕಾ ದಂಧೆ ಮಾಡುವವರಿಗೂ ಹಾಗೂ ಆಡುವವರಿಗೂ ಇಬ್ಬರಿಗೂ ಕೂಡ ಗಡಿಪಾರು ಆದೇಶವನ್ನು ಮಾಡಿದರೂ ಯಾವುದೇ ಕ್ರಮವನ್ನು ಪೋಲಿಸರು ಕ್ರಮ ಕೈಗೊಳ್ಳದೇ ಇರುವುದು ನಿಜಕ್ಕೂ ವಿಪರ್ಯಾಸವಾಗಿದೆ. ತೆರೆಮರೆಯಲ್ಲಿ ಲಕ್ಷಾಂತರ ರೂಪಾಯಿ ವಹಿವಾಟು ಮಾಡುತ್ತಿರುವ ಬುಕ್ಕಿಗಳ ಬಗ್ಗೆ ತಾಲೂಕಿನ ಅಧಿಕಾರಿ ವರ್ಗ ಕ್ರಮ ಕೈಗೊಳ್ಳಬೇಕಿದೆ. ಈಗಾಗಲೇ ಕಾತೂರು, ಪಾಳಾ, ಓಣಿಕೇರಿಯಲ್ಲಿ "ಹೊಸ ಅಡ್ಡಾ"ಗಳು ತೆರೆದುಕೊಂಡಿದ್ದು ತಾಲೂಕಿನ ಸುತ್ತ ಹರಡುವ ಸೂಚನೆ ದಟ್ಟವಾಗಿದೆ!
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ
ಇಂಗ್ಲೆಂಡ್ನ ಮಹರ್ಷಿ ಶ್ರೀ ವಾಲ್ಮೀಕಿ ಆಶ್ರಮಕ್ಕೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ 