ಕಾಶಿ ಜಗದ್ಗುರು ಸಂಸ್ಕಾರಯುತ ಸಮಾಜ ಕಟ್ಟಲು ಶ್ರಮಿಸುತ್ತಿದ್ದಾರೆ : ಡಾ.ನೀಲಕಂಠ ಶ್ರೀಗಳು
Kashi Jagadguru is working hard to build a cultured society: Dr. Neelkanth Sri
ಶಿಗ್ಗಾವಿ 28 : ಹಣೆಯಮೇಲೆ ವಿಭೂತಿ, ದೇಹದ ಮೇಲೆ ಇಷ್ಠಲಿಂಗ ಧರಿಸಿ, ದುರ್ಗುಣಗಳನ್ನು ತ್ಯೇಜಿಸಿ, ಅಷ್ಠಾವರಣವನ್ನು ಮೈಗೂಡಿಸಿಕೊಂಡು ನಡೆಯುವಾತನ ಜೀವನ ಪಾವನವಾಗಲಿದೆ ಎಂದು ಗುಳೇದಗುಡ್ಡದ ಡಾ.ನೀಲಕಂಠ ಶಿವಾಚಾರ್ಯರು ನುಡಿದರು.
ತಾಲೂಕಿನ ಬಿಸನಳ್ಳಿ ಗ್ರಾಮದ ಜ.ಪಂ.ವೇ.ಆ.ಸಂ.ಸಂ.ಯೋಗ ಮತ್ತು ಜ್ಯೋತಿಷ್ಯ ಪಾಠಶಾಲೆಯ ಆವರಣದಲ್ಲಿ ನಡೆದ 2ನೇದಿನದ ಧರ್ಮಸಭೆಯನ್ನುದ್ದೇಸಿಸಿ ಮಾತನಾಡಿದ ಅವರು ಕಾಶಿ ಡಾ.ಚಂದ್ರಶೇಖರ ಭಗವತ್ಫಾದರು ಸನಾತನ ಭಾರತೀಯ ಸಂಸ್ಕೃತಿ ಸಂಸ್ಕಾರಗಳನ್ನು ಉಳಿಸುವ ನಿಟ್ಟಿನಲ್ಲಿ, ಬಿಸನಳ್ಳಿ ಗ್ರಾಮದಲ್ಲಿ ವೇದ, ಆಗಮ, ಸಂಸ್ಕೃತ, ಸಂಗೀತ, ಯೋಗ, ಜ್ಯೋತಿಷ್ಯ ಪಾಠಶಾಲೆಯನ್ನು ತೆರೆದು, ವಟುಗಳಿಗೆ ಒಳ್ಳೆಯ ಸಂಸ್ಕಾರವನ್ನು ನೀಡಿ, ಅವರಿಂದ ಸಂಸ್ಕಾರಯುತ ಸಮಾಜಕಟ್ಟಲು ಶ್ರಮಿಸುತ್ತಿದ್ದಾರೆ. ಜನ್ಮ ನೀಡಿದ ಆ ದೇವರ ಪೂಜೆಗಾಗಿ ಸಮಯವನ್ನು ಮಿಸಲಿರಿಸಿದಾಗ ಮಾನವನ ಜನ್ಮ ಸಾರ್ಥಕವಾಗಲಿದೆ ಎಂದು ಹೇಳಿದರು.
ಹಿರೇಮಣಕಟ್ಟಿ ವಿಶ್ವಾರಾಧ್ಯ ಶಿವಾಚಾರ್ಯರು ಮಾತನಾಡಿ, ವೀರಶೈವರಿಗೆ ಆಚಾರವೇ ಆಭರಣಗಳಾಗಿದ್ದು, ವ್ಯಕ್ತಿ ನಿಷ್ಠೆಗಿಂತ ತತ್ವ ನಿಷ್ಠೆಗೆ, ಚರಿತ್ರೆಗಿಂತ ಚಾರಿತ್ರ್ಯಕ್ಕೆ, ಧರ್ಮಕ್ಕೀಂತ ಆಚರಣೆಗೆ, ಮಹತ್ವ ನೀಡುತ್ತಾ ಬಂದಿದೆ. ರುದ್ರನ ನೇತ್ರದಿಂದ ಉದಯಿಸಿದ ರುದ್ರಾಕ್ಷಿ ವೀರಶೈವರಿಗೆ ಆಭರಣವಾಗಿದೆ ಎಂದು ಹೇಳಿದರು.
ನಿವೃತ್ತ ಶಿಕ್ಷಕ ಸಿ.ವಿ.ಮತ್ತಿಗಟ್ಟಿ ಮಾತನಾಡಿದರು, ಸಭೆಯಲ್ಲಿ ವಿಶ್ವಮಾತಾ ರುದ್ರಾಣಿ ಬಳಗದವರಿಂದ ಸಿದ್ಧಾಂತ ಶಿಖಾಮಣಿ ಪಾರಾಯಣ ನಡೆಯಿತು. ಶಿಗ್ಗಾವಿಯ ರಾಜ್ ಆರ್ಟ್ಸ ಅಕಾಡೆಮಿ ಯವರಿಂದ ಕಾಂತಾರ ರೂಪಕ ಪ್ರದರ್ಶನಗೋಂಡು ಜನಮನ ಸೂರಗೊಂಡಿತು.
ಹಿರೇಬೆಂಡಿಗೇರಿಶ್ರೀ ವಿಶ್ವೇಶ್ವರ ಶಿವಾಚಾರ್ಯರು ಸಮ್ಮುಖವಹಿಸಿದ್ದರು. ಬೂಧಾಖಲೆ ಸಹಾಯಕ ದೇವಯ್ಯ ಎಂ.ಕೆ, ಮುರಗೇಶ ಆಜೂರ, ಸಿದ್ದಲಿಂಗೇಶ ಹಿರೇಮಠ, ರೇಣುಕಾರಾಧ್ಯ ಪುರಾಣಮಠ, ನಾಗರಾಜ ಹೊಸಮನಿ, ಗದಿಗಯ್ಯ ಹಿರೇಮಠ, ಗುರುಶಾಂತಪ್ಪ ನರೇಗಲ್, ಗಂಗಾಧರ ಬಡ್ಡಿ, ಗದಿಗೇಪ್ಪ ಮಾ.ಪ.ಶೆಟ್ಟರ, ಸಾಗರ ಕುರವತ್ತಿಮಠ, ಮಲ್ಲಿಕಾರ್ಜುನ ಎಳಮಲ್ಲಿಮಠ ಸೇರಿದಂತೆ ಇತರರು ಇದ್ದರು. ವಿನಾಯಕ ಮುದಿಗೌಡ್ರ ಸ್ವಾಗತಿಸಿದರು. ಗಂಗುಬಾಯಿ ದೇಸಾಯಿ ಹಾಗು ಪ್ರೀಯಾಂಕ ಶೆಟ್ಟರ ನಿರೂಪಿಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 