ಕರುನಾಡು ಗಾಂಧಿ ಸನ್ನಿಧಿಯಲ್ಲಿ ಸನ್ಮಾನಮಂಜಪ್ಪ ಹರ್ಡೇಕರ ಕಾಯಕ ಬದುಕು ಪರಿಶುದ್ಧ
Karunadu Gandhi pays tribute to Manjappa Hardekar Kayak's life is pure
ಆಲಮಟ್ಟಿ, 29 : ಕರ್ನಾಟಕ ಗಾಂಧಿ ಖ್ಯಾತಿಯ ಮಂಜಪ್ಪ ಹರ್ಡೇಕರ ಅವರ ಜೀವನ ಚರಿತ್ರೆಯ ಯಶೋಗಾಥೆ ಬದುಕನ್ನು ಜೀವಂತ ಪಳಿಕೆಯಲ್ಲಿರಿಸಲು ಗದುಗಿನ ಲಿಂ,ತೋಂಟದ ಡಾ.ಸಿದ್ದಲಿಂಗ ಮಹಾಸ್ವಾಮಿಗಳು ಶ್ರಮಿಸಿದ್ದಾರೆ ಎಂದು ಗದಗ ತೋಂಟದಾರ್ಯ ವಿದ್ಯಾಪೀಠ ಸಂಸ್ಥೆ ಕಾರ್ಯದರ್ಶಿ, ಶಿಕ್ಷಣ ತಜ್ಞರಾದ ಪ್ರೊಫೆಸರ್ ಶಿವಾನಂದ ಪಟ್ಟಣಶೆಟ್ಟರ ಹೇಳಿದರು. ಇಲ್ಲಿನ ಮಂಜಪ್ಪ ಹರ್ಡೇಕರ ಸ್ಮಾರಕ ಭವನದಲ್ಲಿ ಎಸ್.ವ್ಹಿ.ವ್ಹಿ ಸಂಸ್ಥೆ ಶಾಲಾ, ಕಾಲೇಜುಗಳಿಂದ ನೀಡಿದ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಮಂಜಪ್ಪನವರು ಕರ್ನಾಟಕದ ಗಾಂಧಿವೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅವರ ಸರಳ ಮಾದರಿ ಜೀವನಕ್ಕೆ ತೋಂಟದ ಸಿದ್ದಲಿಂಗ ಪೂಜ್ಯರು ಬೆರಗಾಗಿದ್ದರು. ಅವರ ಬಹುಮುಖ ಪ್ರತಿಭೆ ಚರಿತೆಗೆ ಮೆಚ್ಚಿದ್ದರು. ವಿಶೇಷ ಕಾಳಜಿ ಹೊಂದಿದ್ದರು. ಅಪ್ರತಿಮ ಸಮಾಜ ಸೇವಕ ಮಂಜಪ್ಪ ಅಪ್ಪಟ ದೇಶಪ್ರೇಮಿಯಾಗಿ, ಬಸವ ಚಿಂತನೆಗಳ ಸಾಕಾರಮೂರ್ತಿಯಾಗಿ ಗೈದ ಕಾಯಕಗಳು ಇತಿಹಾಸದ ಪುಟಗಳಲ್ಲಿ ದಾಖಲಾಗಿವೆ ಎಂದರು.
ಸಾಹಿತ್ಯ ಲೋಕಕ್ಕೆ ವಿಶೇಷ ಕೊಡುಗೆ ನೀಡಿರುವ ಮಂಜಪ್ಪನವರು ಆಲಮಟ್ಟಿಯಲ್ಲಿ ವಿದ್ಯಾಲಯ ಸ್ಥಾಪಿಸಿ ಜೀವನ ಶಿಕ್ಷಣಕ್ಕೆ ಹೊಸಭಾಷ್ಪ ಬರೆದು ಪ್ರಜ್ಞೆ ಮೆರೆದಿದ್ದಾರೆ. ನಾಡು, ನುಡಿ ಕಾಳಜಿಯಿಂದ ಅವಿರತ ಸಮಾಜಮುಖಿ ಪರ ಕಾಯಕಗೈದು ಶ್ರಮಿಸಿದ್ದಾರೆ. ಇಂಥ ಪುಣ್ಯ ಶರಣರು ಲಿಂಗೈಕ್ಯರಾದರೂ ಅವರು ಜೀವಿತಾವಧಿಯಲ್ಲಿ ಸಾಮಾಜಿಕ ವ್ಯವಸ್ಥೆ ಸುಧಾರಣೆಗೆ ಪ್ರಾಮುಖ್ಯತೆ ನೀಡಿ ಮಾಡಿರುವ ಸತ್ಕಾರ್ಯಗಳು ಇನ್ನೂ ಜೀವಂತಿಕೆಯಾಗಿವೆ. ಮಂಜಪ್ಪನವರ ಸಮಾಧಿ ಆಲಮಟ್ಟಿ ಹಿನ್ನೀರಿನಲ್ಲಿ ಮುಳುಗಿ ನಶಿಸುತ್ತಿರುವಾಗ ತೋಂಟದ ಸಿದ್ದಲಿಂಗ ಪೂಜ್ಯರು ತೋರಿದ ಕಾಳಜಿಯಿಂದ ಜನಮನದಲ್ಲಿ ಮಂಜಪ್ಪ ಶರಣರು ಇಂದು ಉಳಿದಿದ್ದಾರೆ. ಕೃಷ್ಣಾ ನದಿಯ ಹಿನ್ನೀರಿನಲ್ಲಿ ಮುಳುಗಿದ್ದ ಮಂಜಪ್ಪನವರ ಸಮಾಧಿ ಸ್ಥಳಾಂತರ ಕಾರ್ಯ ಅಂದು ತೋಂಟದ ಸಿದ್ದಲಿಂಗ ಪೂಜ್ಯರ ನೇತೃತ್ವದಲ್ಲಿ ಐತಿಹಾಸಿಕ ರೂಪದಲ್ಲಿ ನಡೆಯಿತು.
ಆ ಸನ್ನಿವೇಶ ಅವಿಸ್ಮರಣೀಯವಾಗಿದೆ. ಕೃಷ್ಣೆ ಒಡಲಿನಿಂದ ಮಂಜಪ್ಪನವರ ಸಮಾಧಿ ಹೊರತೆಗೆದು ಪುನರ್ ಈ ಸ್ಥಳದಲ್ಲಿ ಸ್ಥಾಪಿಸಿ ಭವ್ಯ ಸ್ಮಾರಕ ಭವನ ನಿರ್ಮಿಸಲಾಗಿದೆ. ಸ್ಮಾರಕದಲ್ಲಿ ಮಂಜಪ್ಪನವರ ಕಂಚಿನ ಪುತ್ಥಳಿ ದರ್ಶನ ಭಕ್ತರು, ಅಭಿಮಾನಿಗಳು ಪಡೆಯುವ ಸೌಭಾಗ್ಯ ಇದೆ. ಇದಕ್ಕೆಲ್ಲ ತೋಂಟದ ಸಿದ್ದಲಿಂಗ ಶ್ರೀಗಳೇ ಕಾರಣರು. ಪೂಜ್ಯರ ಪ್ರೇರಕ ಶಕ್ತಿಯಿಂದ ಮಂಜಪ್ಪನವರು ಆಜರಾಮರಾಗಿದ್ದಾರೆ ಎಂದರು.
ಕುಷ್ಟಗಿ ಮಾಜಿ ಶಾಸಕ ಕೆ.ಶರಣಪ್ಪ, ಜಗದ್ಗುರು ತೋಂಟದಾರ್ಯ ಮಠದ ವ್ಯವಸ್ಥಾಪಕ ಎಂ.ಎಸ್.ಅಂಗಡಿ, ತೋಂಟದಾರ್ಯ ಇಂಜನಿಯರಿಂಗ್ ಕಾಲೇಜಿನ ಪ್ರೊಫೆಸರ್ ಶ್ರೀಕಾಂತ ಶೆಟ್ಟರ ಅವರನ್ನು ಸಂಸ್ಥೆಯ ಪರವಾಗಿ ಸನ್ಮಾನಿಸಿ ಗೌರವಿಸಲಾಯಿತು. ಪ್ರಭುಸ್ವಾಮಿ ಹೇಮಗಿರಿಮಠ, ಜಿ.ಎಂ.ಕೋಟ್ಯಾಳ, ಎಸ್.ಆಯ್.ಗಿಡ್ಡಪ್ಪಗೋಳ, ಎನ್.ಎಸ್.ಬಿರಾದಾರ, ಆರ್.ಎಂ.ರಾಠೋಡ, ಎಚ್.ಎನ್.ಕೆಲೂರ, ಪಿ.ವಾಯ್.ಧನಶೆಟ್ಟಿ, ಎಂ.ಎಸ್.ಸಜ್ಜನ, ಟಿ.ಬಿ.ಕರದಾನಿ, ಯು.ಎ.ಹಿರೇಮಠ, ಎಂ.ಎಚ್.ಬಳಬಟ್ಟಿ, ಶಾಂತೂ ತಡಸಿ, ಸಚೀನ ಹೆಬ್ಬಾಳ, ಸಿದ್ದು ಪಟ್ಟಣಶೆಟ್ಟಿ, ಜಿ.ಆರ್.ಜಾಧವ ಇತರರಿದ್ದರು.ಪೋಟೋ : ಆಲಮಟ್ಟಿಯಲ್ಲಿನ ಕರ್ನಾಟಕ ಗಾಂಧಿ ಮಂಜಪ್ಪ ಹರ್ಡೇಕರ ಸ್ಮಾರಕ ಭವನಕ್ಕೆ ಭೇಟಿ ನೀಡಿ ಮಂಜಪ್ಪನವರ ಕಂಚಿನ ಪುತ್ಥಳಿ ದರ್ಶನ ಪಡೆದು ಹೂಮಾಲೆ ಹಾಕಿ ಗೌರವ ಸಲ್ಲಿಸಿದ ಕುಷ್ಟಗಿ ಮಾಜಿ ಶಾಸಕ ಕೆ.ಶರಣಪ್ಪ, ಗದುಗಿನ ಜೆಟಿವಿಪಿ ಕಾರ್ಯದರ್ಶಿ ಪ್ರೊ ಶಿವಾನಂದ ಪಟ್ಟಣಶೆಟ್ಟರ, ತೋಂಟದಾರ್ಯ ಮಠದ ವ್ಯವಸ್ಥಾಪಕ ಎಂ.ಎಸ್.ಅಂಗಡಿ ಅವರನ್ನು ಎಸ್.ವ್ಹಿ.ವ್ಹಿ ಸಂಸ್ಥೆ ಶಾಲಾ, ಕಾಲೇಜು ವತಿಯಿಂದ ಸನ್ಮಾನಿಸಲಾಯಿತು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 