ಗೋವಾ ಕನ್ನಡಿಗರ ಸಮ್ಮೇಳನದಲ್ಲಿ ಕೊಪ್ಪಳದ ಅಮೀರ್ ಹಮ್ಜಾ ನದಾಫ್ ಗೆ ಕರುನಾಡ ಪದ್ಮಶ್ರೀ ಪ್ರಶಸ್ತಿ ಪ್ರಧಾನ
Karunada Padma Shri Award to Amir Hamza Nadaf of Koppal at Goa Kannadigar Sammelan
ಕೊಪ್ಪಳ 10: ಪಕ್ಕದ ಗೋವಾ ರಾಜ್ಯದ ಬಿಚೋಲಿಯಂ ನಗರದ ಹೀರಾ ಬಾಯಿ ಮೆಮೋರಿಯಲ್ ಹಾಲ್ ನಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಸಹ ರವಿವಾರದಂದು ಜರುಗಿದ 16ನೇ ಗೋವಾ ಕನ್ನಡಿಗರ ಸಂಸ್ಕೃತಿಕ ಸಮ್ಮೇಳನದಲ್ಲಿ ಕೊಡ ಮಾಡಿದ 2025 26ನೇ ಸಾಲಿನ ಪ್ರತಿಷ್ಠಿತ ಕರುನಾಡ ಪದ್ಮಶ್ರೀ ಪ್ರಶಸ್ತಿಯನ್ನು ಉತ್ತಮ ಸಮಾಜ ಸೇವೆಗಾಗಿ ಕೊಪ್ಪಳದ ಹಿರಿಯ ನಿವಾಸಿ ನಿವೃತ್ತ ವೃತ್ತಿ ಶಿಕ್ಷಕ, ಸಮಾಜಸೇವಕ ಅಮೀರ್ ಹಮ್ಜಾ ,ಎ,ನದಾಫ್ ರವರಿಗೆ ಪ್ರಶಸ್ತಿ ಪ್ರಧಾನ ಮಾಡಿ ಸನ್ಮಾನಿಸಿದರು, ಸಮ್ಮೇಳನದ ಆರಂಭದಲ್ಲಿ ಕುಂಭಮೇಳದ ಭವ್ಯ ಮೆರವಣಿಗೆಯ ಉದ್ಘಾಟನೆಯನ್ನು ಗೋವಾ ರಾಜ್ಯದ ಮುಖ್ಯಮಂತ್ರಿ ಪ್ರಮೋದ್ ಸಾವಂತ್ಕರ್ ನೆರವೇರಿಸಿದರು ,ಸಮ್ಮೇಳನದಲ್ಲಿ ಗೋವಾ ಸರ್ಕಾರದ ಸಚಿವರು ಸೇರಿದಂತೆ ಬಿಚೋಲಿಯಂ ಮತ್ತು ಮಾಯಂ ಕ್ಷೇತ್ರಗಳ ಶಾಸಕರುಗಳು ಅಲ್ಲದೆ ಸಮ್ಮೇಳನದ ಅಧ್ಯಕ್ಷ ಸಂಗನಬಸಪ್ಪ ಬಿರಾದರ್ ಅಧ್ಯಕ್ಷತೆ ವಹಿಸಿದ್ದರು.
ವಿವಿಧ ಸ್ವಾಮೀಜಿಗಳು ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು, ಕರ್ಮಭೂಮಿ ಕನ್ನಡ ಸಂಘ ಬಿಚೋಲಿಯಂ ನ ಅಧ್ಯಕ್ಷ ಹನುಮಂತ ರೆಡ್ಡಿ ಶಿರೂರ್ ಕರ್ನಾಟಕ ಜಾಗೃತಿಕ ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ ಹಾಗೂ ಕಾರ್ಯಕ್ರಮ ಸಂಘಟಕ ಮಹೇಶ್ ಬಾಬು ಸುರುವೇ ಸೇರಿದಂತೆ ಕೊಪ್ಪಳದ ಹಿರಿಯ ಪತ್ರಕರ್ತ ಎಂ ಸಾಧಿಕ್ ಅಲಿ, ಸಮಾಜ ಸೇವಕರಾದ ಖಾಸಿಂ ಅಲಿ ಲೇಬ ಗೇರಿ, ರಾಜಾ ಹುಸೇನ್ ಲಂಬು , ಎಂಡಿ ಯೂಸುಫ್ ಖಾನ್ ಮತ್ತು ಪ್ರಭು, ಅನೇಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರುಅಭಿನಂದನೆಗಳು : ಅಮೀರ್ ಹಮ್ಜಾ ನದಾಫ್ ಅವರಿಗೆ ಪ್ರಶಸ್ತಿ ಲಭಿಸಿರುವುದಕ್ಕೆ ನಗರದ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಶಿಕ್ಷಕರು ಸೇರಿದಂತೆ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಹರ್ಷ ವ್ಯಕ್ತಪಡಿಸಿ ಅಭಿನಂದಿಸಿದ್ದಾರೆ,
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 