ಕರ್ನಾಟಕ ರಾಜ್ಯ ವಕೀಲರ ಪರಿಷತ್ತು ಚುನಾವಣೆ :*ಆಸಿಫ್ ಅಲಿ ಗೆ ಬೆಂಬಲಿಸಲು ಹಲವರ ಮನವಿ
Karnataka State Bar Council Elections: Many appeal to support Asif Ali
ಕೊಪ್ಪಳ 09: ಕರ್ನಾಟಕ ರಾಜ್ಯ ವಕೀಲರ ಪರಿಷತ್ತು ಚುನಾವಣೆ 2026 ರಾಜ್ಯ ಸಮಿತಿಯ ಸದಸ್ಯ ಸ್ಥಾನಕ್ಕೆ ಸ್ಪರ್ಧಿಸಿದ ಕೊಪ್ಪಳದ ಹಿರಿಯ ನ್ಯಾಯವಾದಿ ಎಸ್ ಆಸೀಫ್ ಅಲಿ ರವರು ರಾಜ್ಯಾದ್ಯಂತ ವ್ಯಾಪಕ ಪ್ರಚಾರ ನಡೆಸಿದ್ದು ಅವರಿಗೆ ಮತದಾರ ನ್ಯಾಯವಾದಿಗಳಿಂದ ವ್ಯಾಪಕ ಬೆಂಬಲ ವ್ಯಕ್ತ ವಾಗುತ್ತಿದೆ ಎಂದು ಹೇಳಲಾಗಿದೆ, ಅವರು ರಾಜ್ಯದ್ಯಂತ ಮತಯಾಚನೆ ಮಾಡಿ ಸ್ಪರ್ಧಿಸಿರುವ ತಮಗೆ ಬೆಂಬಲಿಸುವಂತೆ ಮತದಾರರ ನ್ಯಾಯವಾದಿ ಗಳಲ್ಲಿ ಅವರು ಮನವಿ ಮಾಡಿಕೊಂಡಿದ್ದಾರೆ, ರಾಜ್ಯದ ವಿವಿಧ ಜಿಲ್ಲಾ ತಾಲೂಕ ಕೇಂದ್ರಗಳಿಗೆ ಭೇಟಿ ನೀಡಿದ ಅವರು ಆಲ್ಲಿನ ಜಿಲ್ಲಾ ಮತ್ತು ತಾಲೂಕ ವಕೀಲರ ಸಭಾಭವನದಲ್ಲಿ ಪ್ರಚಾರ ಸಭೆ ನಡೆಸಿ ಮನವಿ ಮಾಡಿಕೊಂಡರು, ಇದೆ ಮಾರ್ಚ್ 11 ರಂದು ನಡೆಯಲಿರುವ ಚುನಾವಣೆಯಲ್ಲಿ ಕೊಪ್ಪಳದ ಹಿರಿಯ ನ್ಯಾಯವಾದಿ ಎಸ್ ಆಸಿಫ್ ಅಲಿ ಅವರಿಗೆ ಮೊದಲನೆಯ ಪ್ರಾಶಸ್ತ್ಯದ ಮತವನ್ನು ನೀಡುವುದರ ಜೊತೆಗೆ ಹೆಚ್ಚಿನ ಮತಗಳನ್ನು ನೀಡಿ ಬೆಂಬಲಿಸಬೇಕು.
ಹಲವರು ವ್ಯಾಪಕ ಪ್ರಚಾರ ನಡೆಸಿ ಮನವಿ ಮಾಡಿಕೊಂಡಿದ್ದಾರೆ, ವಕೀಲರ ಪರಿಷತ್ತಿನ ಸರ್ವತೋಮುಖ ಅಭಿವೃದ್ಧಿಗಾಗಿ ಮತ್ತು ನ್ಯಾಯಾದಿಗಳ ಸಂಘಟನೆ ಬಲಿಷ್ಠ ಗೊಳಿಸುವುದರ ಜೊತೆಗೆ ಕಕ್ಷಿದಾರ ಸಾರ್ವಜನಿಕರಿಗೆ ಇನ್ನೂ ಉತ್ತಮ ರೀತಿಯಲ್ಲಿ ನ್ಯಾಯ ಒದಗಿಸಿ ಕೊಡುವ ಕೆಲಸ ಎಲ್ಲರೂ ಸೇರಿ ಮಾಡಲು ಮತ್ತು ನಮ್ಮ ಸಂಘಟನೆ ಬೆಳೆಸಲು ಮತ್ತೊಮ್ಮೆ ಅವರಿಗೆ ಅವಕಾಶ ನೀಡಬೇಕು, ನ್ಯಾಯವಾದಿಗಳ ನ್ಯಾಯ ಸಮ್ಮತವಾದಂತ ಎಲ್ಲಾ ಬೇಕು ಬೇಡಿಕೆಗಳ ಈಡೇರಿಕೆಗಾಗಿ ಪ್ರಮಾಣಿಕವಾಗಿ ಶ್ರಮಿಸಲು ಅವರಿಗೆ ಅವಕಾಶ ನೀಡಬೇಕು ಈ ಹಿಂದೆಯೂ ಸಹ ಅವರು ಸಂಘದ ಸರ್ವತೋಮುಖ ಅಭಿವೃದ್ಧಿಗಾಗಿ ಹೆಚ್ಚಿನ ಒತ್ತುಕೊಟ್ಟು ಶ್ರಮಿಸಿದ್ದಾರೆ ಒಳ್ಳೆಯ ಅನುಭವ ಹೊಂದಿರುವ ಆಸಿಫ್ ಅಲಿಯವರೆಗೆ ಮತ್ತೊಮ್ಮೆ ಆಯ್ಕೆ ಮಾಡಿಕೊಳ್ಳುವುದು ಅವಶ್ಯಕತೆವಾಗಿದೆ ಎಂದು ಹಲವು ಜನ ವಕೀಲರು ಹಾಗೂ ವಿವಿಧ ಸಂಘಟನೆಗಳು ಆಸಿಫ್ ಅಲಿಯವರ ಪರ ವ್ಯಾಪಕ ಪ್ರಚಾರ ಮಾಡಿ ಅವರಿಗೆ ಬೆಂಬಲಿಸುವಂತೆ ಮನವಿ ಮಾಡಿಕೊಂಡಿದ್ದಾರೆ,
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 