ಕರ್ನಾಟಕ ರಾಜ್ಯೋತ್ಸವ : ಸಾಧಕರ ಸನ್ಮಾನ ಕಾರ್ಯಕ್ರಮಕ್ಕೆ ಚಾಲನೆ

ಕರ್ನಾಟಕ ರಾಜ್ಯೋತ್ಸವ : ಸಾಧಕರ ಸನ್ಮಾನ ಕಾರ್ಯಕ್ರಮಕ್ಕೆ ಚಾಲನೆ  Karnataka Rajyotsava: Commencement of felicitation program for achievers


ಧಾರವಾಡ 04: ಮನುಷ್ಯನ ಸಾಧನೆಗೆ ಬರೀ ಹಣ ಹಾಗೂ ಸಂಪತ್ತು ಮುಖ್ಯವಲ್ಲ. ಬದಲಾಗಿ ಶ್ರದ್ಧೆ, ಬದ್ದತೆ ಸಕಾರಾತ್ಮಕತೆ, ಆತ್ಮ ವಿಶ್ವಾಸ ಹಾಗೂ ಸವಾಲು ಎದುರಿಸುವ ಸಾಮರ್ಥ್ಯ ಕೂಡಾ ಬಹಳ ಮುಖ್ಯ ಎಂದು ಧಾರವಾಡದ ನಿಡವಣಿ ಪ.ಪೂ ಕಾಲೇಜಿನ ವ್ಯವಸ್ಥಾಪಕ ನಿರ್ದೇಶಕಿ ಪ್ರಭಾವತಿ ನಿಡವಣಿ ಅಭಿಪ್ರಾಯ ಪಟ್ಟರು. ದಿ: 03-11-2025 ರಂದು ಕರ್ನಾಟಕ ವಿದ್ಯಾವರ್ಧಕ ಸಂಘವು 70ನೇ ರಾಜ್ಯೋತ್ಸವದ ಅಂಗವಾಗಿ ನಾಡಹಬ್ಬ-2025 ನಿಮಿತ್ತ ಆಯೋಜಿಸಲ್ಪಟ್ಟ ಸಾಧಕರ ಸನ್ಮಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. 

ಇಂದಿನ ಸಾಧಕರಾದ ಧಾರವಾಡದ “ಪಕ್ಷಿ ಮಿತ್ರ” ಎಂದು ಕರೆಯಲ್ಪಡುವ ಪ್ರಕಾಶಗೌಡರ ಪಕ್ಷಿ ಲೋಕದ ಅದ್ಭುತ ರಹಸ್ಯಗಳ ಬಗ್ಗೆ ಅದ್ಭುತವಾದ ಅಧ್ಯಯನ ಮಾಡಿ ಸಾಧನೆ ಮಾಡಿದ್ದು, ಇಂದು ಸಂಘವು ಅವರನ್ನು ಸನ್ಮಾನಿಸುತ್ತಿರುವುದು ಅಭಿನಂದನೀಯ. ಪ್ರಾಣಿ, ಪಕ್ಷಿ ಹಾಗೂ ಮನುಷ್ಯಜೀವಿ ವೈವಿದ್ಯತೆಯ ಒಂದು ಭಾಗ.ಜೀವಿ ವೈವಿಧ್ಯತೆಗೆ ದಕ್ಕೆ ಬಂದರೆ ಪರಿಸರದಲ್ಲಿ ಅಸಮತೋಲನ ಉಂಟಾಗುತ್ತದೆ. ಅರಣ್ಯ ನಾಶವಾದರೆ ಅಪರೂಪದ ಪಕ್ಷಿ ಸಂಕುಲ ವಿನಾಶವಾಗುತ್ತವೆ. ಅಭಿವೃದ್ದಿ ಹೆಸರಿನಲ್ಲಿ ಪರಿಸರ ನಾಶ ಸಲ್ಲದು.ಇರುವುದೊಂದೇ ಭೂಮಿ ಎಲ್ಲರೂ ಅದರ ಸಂರಕ್ಷಣೆಗೆ ಬದ್ಧರಾಗಬೇಕು, ಉಳಿಸಬೇಕು ಹಸನಾಗಿರಬೇಕು ಎಂದು ಹೇಳಿದರು.

ಪಕ್ಷಿ ಹಾಗೂ ಪರಿಸರತಜ್ಞ ಪ್ರಕಾಶಗೌಡರ ‘ಸಾಧಕರ ಸನ್ಮಾನ’ ಸ್ವೀಕರಿಸಿ ಮಾತನಾಡಿ, ಪಕ್ಷಿ ಸಂಕುಲದಲ್ಲಿ ಹಾರ್ನಬಿಲ್ ಪಕ್ಷಿಯಜೀವನ ಶೈಲಿಯೇ ಅತ್ಯಂತ ರೋಮಾಂಚನ ಕಾರಿಯಾದುದು. ಗಂಡು-ಹೆಣ್ಣು ಹಾರ್ನಬಿಲ್ ಪಕ್ಷಿಗಳು ಒಟ್ಟೊಟ್ಟಾಗಿಯೇ ತಿರುಗಾಡುತ್ತವೆ. ಅವುಗಳ ಜೈವಿಕ ಸಂಸಾರದವು ಸೃಷ್ಟಿಯಲ್ಲಿಯೇ ಅದ್ಭುತವಾಗಿದೆ. ಗೂಡುಕಟ್ಟುವುದು, ಮರಿ ಸಂರಕ್ಷಣೆ, ಆಹಾರ ಸಂಗ್ರಹಣೆ, ರಕ್ಷಣೆ ವಿಷಯದಲ್ಲಿ ಮನುಷ್ಯನಿಗಿಂತಲೂ ವಿಭಿನ್ನವಾದ ರೀತಿಯಲ್ಲಿ ಇರುತ್ತದೆ. ಗುಬ್ಬಚ್ಚಿಯಂತಹ ಕೆಲ ಪಕ್ಷಿ ಸಂಕುಲವು ಮಾನವನ ಹೀನ ಕೃತ್ಯದಿಂದ ಕಣ್ಮರೆಯಾಗಿದೆ. ಅದೊಂದು ಅದ್ಬುತ ಪಕ್ಷಿ ಎಂದು ಹೇಳಿ, ಸಂಘವು ನನ್ನ ಸಾಧನೆಗೆ ನಿರಂತರ ವೇದಿಕೆ ಕಲ್ಪಿಸುತ್ತಾ ಪ್ರೋತ್ಸಾಹಿಸುತ್ತಾ ಬಂದಿದೆ ಎಂದು ಸ್ಮರಿಸಿದರು. 

ಪ್ರಾರಂಭದಲ್ಲಿ ಧಾರವಾಡದ ಬಸವರಾಜ ವಂದಲಿ ಅವರಿಂದ ಸಂಗೀತ ಕಾರ್ಯಕ್ರಮ ಜರುಗಿತು. ಹಾರ್ಮೊನಿಯಮ್ ಸಾಥರಾಮುಕೊಡೆಕಲ್ ತಬಲಾ ಸಾಥ್, ಪ್ರಸಾದ ಮಡಿವಾಳರ ತಾನ್‌ಪುರ ಸಾಥ ಶ್ರೀಕಾಂತ ಮತ್ತು ಹರ್ಷಾ ನೀಡಿದರು. ನಂತರ ಧಾರವಾಡದ ಕಲ್ಪತರು ಮಹಿಳಾ ಮಂಡಳದ ಸದಸ್ಯರಿಂದ ಜಾನಪದ ಹಾಡಿನ ಸಂಭ್ರಮ ಹಾಗೂ ‘ಅಕ್ಷರಅಭ್ಯಾಸ’ ಎಂಬ ಕಿರುನಾಟಕಜರುಗಿತು. ವೇದಿಕೆಯಲ್ಲಿ ಸತೀಶತುರಮರಿ, ಬಸವರಾಜ ವಂದಲಿ, ಆರತಿ ಪಾಟೀಲ ಇದ್ದರು.ಶಂಕರ ಕುಂಬಿ ಸ್ವಾಗತಿಸಿ, ನಿರ್ವಹಿಸಿದರು, ಶಂಕರ ಹಲಗತ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವೀರಣ್ಣಒಡ್ಡೀನ ಸನ್ಮಾನ ಪತ್ರ ವಾಚಿಸಿದರು. ಕಾರ್ಯಕ್ರಮದಲ್ಲಿ ಶಿವಾನಂದ ಭಾವಿಕಟ್ಟಿ, ಡಾ.ಶೈಲಜಾತ.ಅಮರಶೆಟ್ಟಿ, ಅಶೋಕ ಕೋರಿ, ಕಿರಣ ಸಿದ್ಧಾಪೂರ, ಚಂದ್ರಶೇಖರ ಅಮ್ಮಿನಗಡ, ಶಂಕರ ಬೆಟಗೇರಿ ಹಾಗೂ ಅನೇಕರು ಇದ್ದರು.