ಕರ್ನಾಟಕ ಕಲಾ ಕಾಲೇಜಿನ ಪ್ರವಾಸೋದ್ಯಮ
Karnataka Arts College Tourism
ಧಾರವಾಡ 10: ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯವು ್ರ್ರಥಮ ಬಾರಿಗೆ ಯುರೋಪಿಯನ್ ಒಕ್ಕೂಟದ ಎರಾಸ್ಮಸ್ (ಇಖಂಖಒಗಖ) ಸಂಶೋಧನಾ ನಿಧಿಯನ್ನು ಪಡೆದಕೊಂಡಿದೆ ಎಂದು ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎ.ಎಂ.ಖಾನ್ ಹೇಳಿದರು.ಅವರು ಕರ್ನಾಟಕ ಕಲಾ ಕಾಲೇಜಿನ ಪ್ರವಾಸೋದ್ಯಮ ಅಧ್ಯಯನ ವಿಭಾಗವು ಆಯೋಜಿಸಿದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.ಎರಾಸ್ಮಸ್ ಸಂಶೋಧನಾ ನಿಧಿಯಿಂದ ಪ್ರವಾಸೋದ್ಯಮ ಸಂಬಂಧಿತ ಸಂಶೋಧನೆ ಕೈಗೊಳ್ಳಲು ಹೆಚ್ಚು ಅನುಕೂಲವಾಗಲಿದೆ ಎಂದರು.ಮೊದಲ ಬಾರಿಗೆ ಇಂತಹ ಸಂಶೋಧನಾ ನಿಧಿ ಪಡೆದಿರುವುದು ವಿಶೇಷವಾಗಿದ್ದು, ಕರ್ನಾಟಕ ವಿಶ್ವವಿದ್ಯಾಲಯದ ಪ್ರತಿಷ್ಠೆಯನ್ನು ಹೆಚ್ಚಿಸಿದೆ ಎಂದರು. ಇದು ಯುರೋಪಿನ ಅತ್ಯಂತ ಪ್ರತಿಷ್ಟಿತ ಸಂಸ್ಥೆಯಾಗಿದ್ದು, ಕರ್ನಾಟಕ ಕಲಾ ಮಹಾವಿದ್ಯಾಲಯದ ಪ್ರವಾಸೋದ್ಯಮ ಅಧ್ಯಯನ ವಿಭಾಗಕ್ಕೆ ಈ ಸಂಶೋಧನಾ ಸಹಾಯ ದೊರೆತಿದೆ. ವಿಭಾಗವು ಸುಮಾರು ರೂ. 48 ಲಕ್ಷಕ್ಕೂ (48 ಸಾವಿರ ಯುರೋಸ್) ಅಧಿಕ ಧನಸಹಾಯ ಪಡೆಯಲಿದ್ದು, ಪ್ರವಾಸೋದ್ಯಮ ವಿಭಾಗವು ‘ಹೈಯರ್ ಎಜುಕೇಶನ್ ಅಂಡ್ ಸಸ್ಟೆನೇಬಲ್ ಗ್ರೋಥ್ ಥ್ರೊ ರಿಲಿಜಿಯಸ್ ಟೂರಿಸಂ’ (ಸೆಕ್ರೆಡ್ ಟ್ರಾವೆಲ್ ಫಾರ್ ಗ್ರೋಥ್) ಎಂಬ ವಿಷಯದ ಮೇಲೆ ಸಂಶೋಧನಾ ಕಾರ್ಯವನ್ನು ಕೈಗೊಳ್ಳಲಿದೆ ಎಂದು ವಿವರಿಸಿದರು.
ಪ್ರವಾಸೋದ್ಯಮ ವಿಭಾಗದ ಮುಖ್ಯಸ್ಥ ಡಾ. ಜಗದೀಶ ಕಿವುಡನವರ ಅವರು ಪ್ರೊಜೆಕ್ಟ್ ಆಫಿಸರ್ ಆಗಿ ಈ ಸಂಶೋಧನಾ ಯೋಜನೆಯ ನೇತೃತ್ವವನ್ನು ವಹಿಸಿಕೊಳ್ಳಲಿದ್ದು ಈ ಸಂಶೋಧನಾ ತಂಡದಲ್ಲಿ ಆರು ಜನರ ಶಿಕ್ಷಕರ ತಂಡವು ಈ ಕಾರ್ಯವನ್ನು ನಿರ್ವಹಿಸಲಿದೆ ಎಂದ ಅವರು ವಿಭಾಗದ ಪಠ್ಯಕ್ರಮ, ಸಂಶೋಧನಾ ಕ್ರಮ, ಧಾರ್ಮಿಕ ಪ್ರವಾಸೋದ್ಯಮದ ಇತೀಚಿನ ಬೆಳವಣಿಗೆಯ ವರದಿ ತಯಾರಿಕೆ, ಪ್ರವಾಸೋದ್ಯಮ ವಿಭಾಗದಲ್ಲಿ ಶೈಕ್ಷಣಿಕವಾಗಿ ಮೂಲಭೂತ ಸೌಕರ್ಯಗಳನ್ನು ಹೆಚ್ಚಿಸುವ ನಿಟ್ಟಿನಲ್ಲಿ ಈ ನಿಧಿಯು ಸಹಕಾರಿಯಾಗಲಿದೆ ಎಂದು ಕುಲಪತಿಯವರು ಪತ್ರಿಕಾ ಘೋಷ್ಠಿಯಲ್ಲಿ ತಿಳಿಸಿದರು.ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ ಮತ್ತು ಬನಾರಸ್ ಹಿಂದೂ ವಿಶ್ವವಿದ್ಯಾಲಯಗಳು ಮಾತ್ರ ದೇಶದಲ್ಲಿಯೇ ಇಂತಹ ಶ್ರೇಯಸ್ಸಿಗೆ ಭಾಜನವಾಗಿದ್ದು ಹೆಮ್ಮೆ ಎನಿಸಿದೆ. ಯುರೋಪಿನ ಇತರ 14 ದೇಶಗಳ ವಿಶ್ವವಿದ್ಯಾಲಯಗಳು ಯುರೋಪಿಯನ್ ಒಕ್ಕೂಟದ ಇಂತಹ ಸಂಶೋಧನೆಯಲ್ಲಿ ಭಾಗಿಯಾಗಲಿವೆ. ಯುರೋಪಿಯನ್ ಒಕ್ಕೂಟವು ಅಲ್ಬೇನಿಯಾದ ತಿರಾನಾ ನಗರದ ಲೊಗೋಸ್ ವಿಶ್ವವಿದ್ಯಾಲಯಕ್ಕೆ ಪ್ರೊಜೆಕ್ಟ್ನ ಜವಾಬ್ದಾರಿಯನ್ನು ನೀಡಿದೆ. ಲೊಗೋಸ್ ಮತ್ತು ಕರ್ನಾಟಕ ವಿವಿಯ ಪ್ರವಾಸೋದ್ಯಮ ವಿಭಾಗಗಳು ಜಂಟಿಯಾಗಿ ಹಲವು ಶೈಕ್ಷಣಿಕ ಯೋಜನೆಗಳನ್ನು ಆಯೋಜಿಸಲಿವೆ ಎಂದರು.ಯುರೋಪಿಯನ್ ಒಕ್ಕೂಟದ ಸಭೆಗೆ ಅಲ್ಬೇನಿಯಾಕ್ಕೆ ಡಾ. ಜಗದೀಶ ಅವರು ತೆರಳಲಿದ್ದಾರೆ.
ಈ ನಿಟ್ಟಿನಲ್ಲಿ ಇದು ಆರಂಭ ಮಾತ್ರ, ಇನ್ನು ಮುಂದೆ ಇಂತಹ ಹಲವು ಸಂಶೋಧನಾ ಯೋಜನೆಗಳು ನಮ್ಮ ಸಂಸ್ಥೆಗೆ ದೊರೆಯುವ ವಿಶ್ವಾಸವಿದೆ, ಆ ನಿಟ್ಟಿನಲ್ಲಿ ಕವಿವಿಯು ಸಂಶೋಧನೆಗೆ ಹೆಚ್ಚು ಒತ್ತು ನೀಡುವುದು ಅವಶ್ಯಕವಾಗಿದೆ ಎಂದ ಅವರು ಈ ಸಂದರ್ಭದಲ್ಲಿ ಪ್ರವಾಸೋದ್ಯಮ ವಿಭಾಗ ಮತ್ತು ಪ್ರೊ. ಜಗದೀಶ ಅವರನ್ನು ಅಭಿನಂದಿಸಿದರು.ಪತ್ರಿಕಾ ಘೋಷ್ಠಿಯಲ್ಲಿ ಕರ್ನಾಟಕ ಕಲಾ ಕಾಲೇಜಿನ ಪ್ರಾಚಾರ್ಯರಾದ ಡಾ. ಐ.ಸಿ. ಮುಳಗುಂದ, ಪ್ರವಾಸೋದ್ಯಮ ವಿಭಾಗದ ಮುಖ್ಯಸ್ಥರಾದ ಡಾಜಗದೀಶ್ ಕಿವುಡನವರ, ಪ್ರೊ.ಎಸ್.ರಾಜಶೇಖರ, ಡಾ.ಸಂಜಯಕುಮಾರ ಮಾಲಗತ್ರಿ, ಡಾ.ಮುಕುಂದ ಲಮಾಣಿ, ಡಾ.ಪ್ರಭಾಕರ ಕಾಂಬಳೆ ಇದ್ದರು
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 