ಕರ್ಮಯೋಗಿ ಜನಸೇವಾ ಕಾರ್ಯಕ್ರಮ ಉದ್ಘಾಟನೆ

ಕರ್ಮಯೋಗಿ ಜನಸೇವಾ ಕಾರ್ಯಕ್ರಮ ಉದ್ಘಾಟನೆ  Karmayogi Janaseva program inaugurated

ಕರ್ಮಯೋಗಿ ಜನಸೇವಾ ಕಾರ್ಯಕ್ರಮ ಉದ್ಘಾಟನೆ  

ಬೆಳಗಾವಿ 05: ಪಿಎಂ ಶ್ರೀ ಕೇಂದ್ರಿಯ ವಿದ್ಯಾಲಯ ಸಂಖ್ಯೆ 2 ಬೆಳಗಾವಿ ಕ್ಯಾಂಟ್ ನಲ್ಲಿ ಭಾರತ ಸರ್ಕಾರದ ಮಹತ್ವಾಕಾಂಕ್ಷೆಯ ಕರ್ಮಯೋಗಿ ಜನಸೇವಾ ಕಾರ್ಯಕ್ರಮಕ್ಕೆ ದಿ. 5ರಂದು ಪ್ರಾಂಶುಪಾಲ ಮಹೇಂದ್ರ ಕಾಲ್ರಾ ಅವರು ಚಾಲನೆ ನೀಡಿದರು.  

ಸರಕಾರಿ ಅಧಿಕಾರಿಗಳನ್ನು ಹೆಚ್ಚು ಪರಿಣಾಮಕಾರಿಯಾಗಿಸಲು, ನಾಗರಿಕ-ಕೇಂದ್ರೀತ ಮತ್ತು ಹೊಣೆಗಾರರಾಗಿಸುವುದು ಈ ಮಿಷನ್ ಕರ್ಮಯೋಗಿ ಕಾರ್ಯಕ್ರಮದ ಉದ್ದೇಶವಾಗಿದೆ. ಪಾಲ್ಗೊಂಡ ಅಧ್ಯಾಪಕರನ್ನು ಸ್ವಾಗತಿಸಿ ತರಬೇತಿಯ ಮಹತ್ವದ ಕುರಿತು ಕಾಲ್ರಾ ಅವರು ಮಾತನಾಡಿದರು.  

ಕಾರ್ಯಕ್ರಮದ ಸೂಚಕ ಮತ್ತು ಮುಖ್ಯ ತರಬೇತುದಾರ ಪ್ರಾಂಶುಪಾಲ ಸಂದೀಪ್ ಆಚಾರ್ಯ ಅವರು ಮಿಷನ್ ಕರ್ಮಯೋಗಿಯ ಮೂಲತತ್ವಗಳಾದ ಸೇವಾ ಮನೋಭಾವ, ನಾಗರಿಕ ಹೊಣೆಗಾರಿಕೆ ಮತ್ತು ಸಕಾರಾತ್ಮಕ ಆಡಳಿತ ಕುರಿತಂತೆ ಪರಿಣಿತ ಅಭ್ಯಾಸಗಳನ್ನು ನಡೆಸಿದರು. ಈ ತರಬೇತಿಯ ಮೂಲಕ ಶಿಕ್ಷಕರು ಮತ್ತು ಸರ್ಕಾರಿ ನೌಕರರು ತಮ್ಮ ಕೆಲಸಗಳು ಹೇಗೆ ಸಮಾಜ ಹಾಗೂ ವಿದ್ಯಾರ್ಥಿಗಳ ಮೇಲೆ ಪರಿಣಾಮ ಬೀರುತ್ತದೆ ಎಂಬ ಅರಿವನ್ನು ಪಡೆದರು. ಇದು ಸಾರ್ವಜನಿಕ ಸೇವೆಗಳಲ್ಲಿ ಗುಣಮಟ್ಟ, ಹೊಣೆಗಾರಿಕೆ ಮತ್ತು ಸ್ಪಂದನಶೀಲತೆ ತರಲು ಒಂದು ಮಹತ್ವಪೂರ್ಣ ಹೆಜ್ಜೆಯಾಗಿದೆ ಎಂದರು.ಆ.5ಮತ್ತು 6ರಂದು ಈ ಎರಡು ದಿನ ತರಬೇತಿ ಕಾರ್ಯಕ್ರಮ ಜರುಗಲಿದ್ದು, 5ರಂದು ಕರ್ನಾಟಕದ ವಿವಿಧ ಕೇಂದ್ರ ವಿದ್ಯಾಲಯಗಳಿಂದ ಭಾಗವಹಿಸುವ ಶಿಕ್ಷಕರು ಪಾಲ್ಗೊಂಡಿದ್ದರು.  ವಿದ್ಯಾಲಯದ ವಾತಾವರಣ ಪ್ರೇರಣಾತ್ಮಕವಾಗಿದ್ದು, ನವೀನತೆ, ಸಹಭಾಗಿತ್ವ ಹಾಗೂ ನಾಗರಿಕ ಸೇವೆಯ ನವ ದೃಷ್ಟಿಕೋಣ ಬೆಳೆಸುವಲ್ಲಿ ಸಹಕಾರಿಯಾಯಿತು.