ಫೆ.15 ರಂದು ಶಿರಗುಂಪಿಯ ಕರಿಬಸವೇಶ್ವರರ ಮಹಾರಥೋತ್ಸವ
Karibasaveshwara Maharathotsava of Shiragumpi on Feb. 15
ಯಲಬುರ್ಗಾ 13: ತಾಲೂಕಿನ ಶಿರಗುಂಪಿ ಗ್ರಾಮದ ಕರಿಬಸವೇಶ್ವರ 11ನೇ ವರ್ಷದ ಜಾತ್ರಾ ಮಹೋತ್ಸವ ನಿಮಿತ್ಯ ಪುರಾಣ ಮಹಾ ಮಂಗಲೋತ್ಸವ,ಮಹಾ ರಥೋತ್ಸವವು ಜರಗಲಿದೆ.ಪ್ರತಿ ವರ್ಷದಂತೆ ಈ ವರ್ಷ ಕೂಡ ಕರಿಬಸವೇಶ್ವರ ಜಾತ್ರಾ ಮಹೋತ್ಸವ ನಿಮಿತ್ಯ ದೇವಸ್ಥಾನದಲ್ಲಿ ಫೆ.5 ರಿಂದ ಸುಮಾರು 11 ದಿನಗಳ ಕಾಲ ಪ್ರತಿನಿತ್ಯ ದೇವಸ್ಥಾನದ ಮಾತೋಶ್ರೀ ನೀಲಮ್ಮ ತಾಯಿ ಹೂಗಾರ ಇವರ ಸಾನಿಧ್ಯದಲ್ಲಿ ಪುರಾಣ ಪ್ರವಚನಕಾರ ಬಂಡಿ ಗ್ರಾಮದ ಶೇಖರಯ್ಯಸ್ವಾಮಿ ಹಿರೇಮಠ ಇವರಿಂದ ಶರಣಬಸವೇಶ್ವರ ಪುರಾಣ ಪ್ರವಚನವನ್ನು ನಡೆಸಿಕೊಡುವರು.ಇವರಿಗೆ ಪಂಚಾಕ್ಷರಯ್ಯ ಇಟಗಿಮಠ,ಬಸವರಾಜ ಕುರಟ್ಟಿ ಇವರು ಸಂಗೀತ ಸಾಥ ನೀಡುವರು.
ಫೆ.14 ರಂದು ಕರಿಬಸವೇಶ್ವರ ದೇವರಿಗೆ ಕುಂಬಾಭೀಷೇಕ ನಂತರ ಕರಿಬಸವೇಶ್ವರರ ಭಾವಚಿತ್ರದೊಂದಿಗೆ ಮುತ್ತೈದಿಯರಿಂದ ಕುಂಭ ಮೆರವಣಿಗೆಯು ಗ್ರಾಮದ ಪ್ರಮುಖ ರಸ್ತೆಗಳ ಮೂಲಕ ಸಂಚರಿಸಿ,ನಂತರ ದೇವಸ್ಥಾನಕ್ಕೆ ಆಗಮಿಸುವರು.ಅಲ್ಲದೇ ಫೆ.15 ರಂದು ಮಹಾ ಶಿವರಾತ್ರಿ ದಿವಸ ಬೆಳಿಗ್ಗೆ ರುದ್ರಾಭೀಷೇಕ, ಹಿರೇಮಠದ ಜಂಗಮಮೂರ್ತಿಗಳ, ಮಾತೋ ಬಸಮ್ಮ ಹೂಗಾರ ಇವರ ಸಾನಿಧ್ಯದಲ್ಲಿ ಮಾತೋಶ್ರೀ ನೀಲಮ್ಮತಾಯಿ ಹೂಗಾರ ಇವರಿಗೆ ತುಲಭಾರ ಕಾರ್ಯಕ್ರಮ ನಡೆಯಲಿದೆ.ಧಾರ್ಮಿಕ ಕಾರ್ಯಕ್ರಮ ನಂತರ ಪುರಾಣ ಮಹಾ ಮಂಗಲೋತ್ಸವ ನಡೆಯಲಿದೆ.ಸಂಜೆ ಮಹಾ ರಥೋತ್ಸವವು ವಿಜೃಂಭನೆಯಿಂದ ಜರಗಲಿದೆ.ಫೆ.16 ರಂದು ಸಂಜೆ ಉಚ್ಚಯ ಉತ್ಸವ ಕೂಡ ಜರಗಲಿದೆ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 