ರಕ್ಷಣೆ ಮತ್ತು ಜ್ಞಾಪಕ ಶಕ್ತಿ ವೃದ್ದಿಸಿಕೊಳ್ಳಲು ಕರಾಟೆ ಅವಶ್ಯ: ವೀರೇಂದ್ರ ಬಳಿಗಾರ
Karate is essential for protection and memory enhancement: Veerendra Baligar
ರಕ್ಷಣೆ ಮತ್ತು ಜ್ಞಾಪಕ ಶಕ್ತಿ ವೃದ್ದಿಸಿಕೊಳ್ಳಲು ಕರಾಟೆ ಅವಶ್ಯ: ವೀರೇಂದ್ರ ಬಳಿಗಾರ
ಶಿಗ್ಗಾವಿ 11: ಪ್ರಸ್ತುತ ದಿನಮಾನಗಳಲ್ಲಿ ತಮ್ಮ ವೈಯಕ್ತಿಕ ರಕ್ಷಣೆ ಮತ್ತು ಜ್ಞಾಪಕ ಶಕ್ತಿ ವೃದ್ದಿಸಿಕೊಳ್ಳಲು ಕರಾಟೆ ಬಹಳ ಅವಶ್ಯವಾಗಿದೆ ಎಂದು ಕರಾಟೆ ತರಬೇತುದಾರ ವಿರೇಂದ್ರ ಬಳಿಗಾರ ಹೇಳಿದರು. ಪಟ್ಟಣದಲ್ಲಿ ನಡೆದ ಹಾವೇರಿ ಜಿಲ್ಲಾ ಮಟ್ಟದ ಕರಾಟೆ ಸ್ಪರ್ದೇಯಲ್ಲಿ ಪ್ರಥಮ ಸ್ಥಾನಗಳಿಸಿ ರಾಜ್ಯ ಮಟ್ಟಕ್ಕೆ ಆಯ್ಕೆಯಾದ ವಿಧ್ಯಾರ್ಥಿಗಳಿಗೆ ಸನ್ಮಾನಿಸಿ ಮಾತನಾಡಿದ ಅವರು ಕಳೆದ 35 ವರ್ಷಗಳಿಂದ ನಿರಂತರವಾಗಿ ಅಭ್ಯಾಸ ,ಸತತ ಪ್ರಯತ್ನ ಹಾಗೂ ಶ್ರಮದಿಂದ ಅನೇಕ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ ಎಂದರು. ತರಬೇತುದಾರ ಹನುಮಂತ ಗದಗ ಮಾತನಾಡಿ ಮೊದಲಿಗೆ ಕರಾಟೆ ಬರೆ ಹುಡಾಳ ಹುಡುಗರು ಕಲಿಯುವದು ಅಂತ ಇತ್ತು ಆದರೆ ಈಗ ಆತ್ಮ ರಕ್ಷಣೆಗಾಗಿ ಯಾರು ಬೇಕಾದರೂ ಕರಾಟೆ ಕಲಿಯಬಹುದು ಎಂದರು. ತರಬೇತುದಾರ ಬಸವರಾಜ ಕುಲಕರ್ಣಿ ಮಾತನಾಡಿ ಅತಿ ಹೆಚ್ಚು ವಿದ್ಯಾರ್ಥಿಗಳು ಈ ಭಾರಿ ರಾಜ್ಯಮಟ್ಟಕ್ಕೆ ಆಯ್ಕೆ ಆಗಿದ್ದಾರೆ ಅಲ್ಲಿ ಜಯಶಾಲಿಯಾಗಿ ದೇಶ ಮಟ್ಟ ಪ್ರತಿನಿಧಿಸಿ ಶಿಗ್ಗಾವಿ ತಾಲೂಕಿನ ಕೀರ್ತಿ ಹೆಚ್ಚಿಸಬೇಕು ಎಂದರು. ರಾಜ್ಯಮಟ್ಟಕ್ಕೆ ಆಯ್ಕೆಯಾದ ವಿಧ್ಯಾರ್ಥಿಗಳು ಸೂರಜ್ ಹೂಗಾರ, ನವಲಗುಂದ, ಅರುಣ ಅಣ್ಣಿಗೇರಿ, ಹಸನ ಮುಂದಿನಮನಿ, ಅಮೋಘ ಕಲಾಲ, ಜೀವನ ಮತ್ತೂರ, ಪ್ರವೀಣ ಗದಗ, ಗೀರೀಶ ಗದಗ ಆಯ್ಕೆ ಆಗಿದ್ದಾರೆ. ಈ ಸಂದರ್ಭದಲ್ಲಿ ಪುರಸಭೆ ಸದಸ್ಯ ಗೌಸಖಾನ ಮುನಶಿ, ಸೇರಿದಂತೆ ಇತರರು ಉಪಸ್ಥಿತರಿದ್ದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 