ಕಪ್ಪಲಗುದ್ದಿ ಮಲ್ಲಿಕಾರ್ಜುನ ದೇವರ ಕಂಬಿ ಐದೇಶಿ ಸಂಪನ್ನ
Kappalaguddi Mallikarjuna's Kambi Ideshi Sampanna
ಪಾಲಬಾವಿ 30: ರಾಯಬಾಗ ತಾಲೂಕು ಕಪ್ಪಲಗುದ್ದಿ ಗ್ರಾಮದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಶ್ರೀ ಮಲ್ಲಿಕಾರ್ಜುನ ದೇವರ ಕಂಬಿ ಐದೇಶಿಯು ಮಾರ್ಚ. 30 ರಂದು ಸೋಮವಾರ ಸಡಗರ ಸಂಭ್ರಮದಿಂದ ಸಂಪನ್ನಗೊಂಡಿತು.ದಿ.30 ಸೋಮವಾರ ಮುಂಜಾನೆ 6 ಗಂಟೆಗೆ ಗುರುಮಠದ ಪೂಜ್ಯರಾದ ಪಂಚಾಕ್ಷರಿಯ್ಯ ಮಹಾ ಸ್ವಾಮೀಜಿಗಳ ದಿವ್ಯ ಸಾನಿಧ್ಯದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ಮುಂಜಾನೆ 6 ಗಂಟೆಗೆ ಶ್ರೀ ಮಲ್ಲಿಕಾರ್ಜುನ ದೇವರ ಲಿಂಗಕ್ಕೆ ಅಭಿಷೇಕ, ಹೂವು, ಪತ್ರಿ, ನವೇದ್ಯ ವಿಶೇಷ ಪೂಜೆ ನೆರವೇರಿತು. ಮುಂಜಾನೆ 9ಗಂಟೆಗೆ ಪುರವಂತರಿಂದ ಒಡಪು, ವಿರಾಗಸೆ, ಬಿರುದಾವಳಿ ಮತ್ತು ಶಸ್ತ್ರಧಾರಣ ಮಾಡಿಕೊಳ್ಳುವ ದೇವರ ಹರಕೆಯ ಕಾರ್ಯಕ್ರಮಗಳು ಜರುಗಿದವು.
10ಗಂಟೆಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಶ್ರೀ ಮಲ್ಲಿಕಾರ್ಜುನ ದೇವರ ಪಲ್ಲಕ್ಕಿ, ನಂದಿಕೋಲು ಉತ್ಸವದ ಭವ್ಯ ಮೆರವಣಿಗೆಯು ವಿವಿಧ ಕಲಾ ವಾದ್ಯ ಮೇಳದೊಂದಿಗೆ ನೆರವೇರಿತು. 12ಗಂಟೆಗೆ ದೇವಸ್ಥಾನದ ಮುಂಭಾಗದಲ್ಲಿ ಪುರವಂತರು, ಹರಕೆ ಹೊತ್ತ ಭಕ್ತರು ನಿಗಿನಿಗಿ ಉರಿಯುವ ಕೆಂಡವ ತುಳಿತು ಅಗ್ನಿ ಪ್ರವೇಶ ಮಾಡಿದರು. ನಂತರ ಮಧ್ಯಾಹ್ನ 1ಗಂಟೆಗೆ ದಾಸೋಹದ ಮಹಾಮನೆಯಲ್ಲಿ ಅನ್ನ ಸಂತರೆ್ಣ ನೆರವೇರಿತು. ರಾತ್ರಿ 10ಗಂಟೆಗೆ ದೇವಸ್ಥಾನದ ಮುಂಭಾಗದಲ್ಲಿ ಹಾಕಲಾದ ಭವ್ಯ ವೇದಿಕೆಯಲ್ಲಿ ಮೂಡಲಗಿ ಪಟ್ಟಣದ ಅಪ್ಪು ಮೆಲೋಡಿಸ್ ಕಲಾತಂಡ ಇವರಿಂದ ಹಾಸ್ಯ ರಸಮಂಜರಿ ಕಾರ್ಯಕ್ರಮವು ಜರುಗಿತು.
ಈ ಸಂದರ್ಭದಲ್ಲಿ ಮಲ್ಲಿಕಾರ್ಜುನ ದೇವಸ್ಥಾನ ಟ್ರಸ್ಟ್ ಕಮಿಟಿ ಅಧ್ಯಕ್ಷ ಅಡಿವೆಪ್ಪ ಬದ್ರಶೆಟ್ಟಿ, ಗ್ರಾಪಂ ಮಾಜಿ ಅಧ್ಯಕ್ಷ ಲಕ್ಷ್ಮಣ ಕೂಡಲಗಿ, ತಾಪಂ ಮಾಜಿ ಸದಸ್ಯ ಗಂಗಪ್ಪ ಕುರಣಿಂಗ, ಗ್ರಾಪಂ ಮಾಜಿ ಉಪಾಧ್ಯಕ್ಷ ಬರಮಪ್ಪ ಬಾಗೋಜಿ, ರೈತ ಸಂಘ ಹಸಿರು ಸೇನೆಯ ತಾಲೂಕು ಅಧ್ಯಕ್ಷ ರಮೇಶ ಕಲ್ಲಾರ, ಮಾಯಪ್ಪ ಸನದಿ, ಎಸ್ಡಿಎಂಸಿ ಅಧ್ಯಕ್ಷ ಗುರು ಅಂಗಡಿ, ಈರ್ಪ ಬಂಗಿ, ಗ್ರಾಪಂ ಮಾಜಿ ಅಧ್ಯಕ್ಷ ಪುಟ್ಟಗೌಡ ನಾಯಕ, ಮಹಾದೇವ ನಾಯಿಕ, ಎಸ್ಡಿಎಂಸಿ ಮಾಜಿ ಅಧ್ಯಕ್ಷ ಮುತ್ತಪ್ಪ ಬದ್ರಶೆಟ್ಟಿ, ಪಿಕೆಪಿಎಸ್ ಸಂಘದ ಅಧ್ಯಕ್ಷ ಮಹಾದೇವ ಅಂಗಡಿ, ಪಂಚಾಕ್ಷರಿ ಹಿರೇಮಠ, ಡಾ. ಮಲ್ಲಿಕಾರ್ಜುನ ಶಿರೋಳ, ಭರಮಪ್ಪ ಮಂಟೂರ,
ಪಿಡಿಓ ಶ್ರೀಕಾಂತ ಯಡ್ರಾಂವಿ, ಪ್ರಭಾಕರ ದಿವಾಕರ, ಗ್ರಾಮ ಮಾಜಿ ಉಪಾಧ್ಯಕ್ಷ ಕೆಂಪಣ್ಣ ಕುರನಿಂಗ, ಹನುಮಂತ ಮಂಟೂರ, ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಸಿದ್ದಪ್ಪ ಬದ್ರಶೆಟ್ಟಿ, ಶ್ರೀಶೈಲ ಕೂಡಲಗಿ, ಸದಾಶಿವ ನಾವಿ, ಯಮನಪ್ಪ ಮೆಳವಂಕಿ ಅಪ್ಪಾಸಾಬ ಬಡಿಗೇರ, ಬಾಳಪ್ಪ ಐದಮನಿ, ಮಾರುತಿ ಬಳಗಾರ, ಡಾ.ರಾಮು ಹೊರಟ್ಟಿ, ಪ್ರಕಾಶ ಬಳಗಾರ, ಮಹದೇವ ಮೂಸಿ, ಬಾಲಚಂದ್ರ ಮೇತ್ರಿ, ಬದ್ರು ನಾವಿ, ಮಹಾದೇವ ಬಳಗಾರ, ಹನುಮಂತ ಪಾತ್ರೂಟ, ಬಾಲರಾಜ ತುಕ್ಕಾನಟ್ಟಿ, ರಮೇಶ ಬಿಜ್ಜರಗಿ, ಶ್ರೀಶೈಲ ನಾವಿ, ನಿಂಗಪ್ಪ ಕಲ್ಲಾರ, ಶೇಖರ ಸಂಕಾನಟ್ಟಿ, ಮಹಾಲಿಂಗಪುರ ಪುರಸಭೆಯ ಕಂದಾಯ ಇಲಾಖೆ ಅಧಿಕಾರಿ ಬಸವರಾಜ ಬಳಗಾರ, ಶಿವಪ್ಪ ಕೋಟೆವಾಲೆ, ಚನ್ನಪ್ಪ ಬದ್ರಶೆಟ್ಟಿ ಇತರರು ಇದ್ದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 