ಕಂಪ್ಲಿ: ರಸ್ತೆ ದುರಸ್ತಿ ಕಾಮಗಾರಿಗೆ ಭೂಮಿ ಪೂಜೆ

ಲೋಕದರ್ಶನ ವರದಿ

ಕಂಪ್ಲಿ 05: ತಾಲೂಕಿನ ಚಿಕ್ಕಜಾಯಿಗನೂರು ಗ್ರಾಮದಲ್ಲಿ, ಬಳ್ಳಾರಿಯ ಗ್ರಾಮೀಣ ಅಭಿವೃದ್ದಿ ಮತ್ತು ಪಂಚಾಯತ್ರಾಜ್ ಇಂಜನಿಯರಿಂಗ್ ಇಲಾಖೆ ವಿಭಾಗದ, 2018-19ನೇ ಸಾಲಿನ 3054ಲೆಕ್ಕ ಶೀಷರ್ಿಕೆಯ ಯೋಜನಡಿಯಲ್ಲಿ, 45ಲಕ್ಷ ರೂ.ಗಳ ಅನುದಾನದಲ್ಲಿ ಚಿಕ್ಕಜಾಯಿಗನೂರು ಗ್ರಾಮದಿಂದ ಸಕ್ಕರೆ ಕಾಖರ್ಾನೆವರೆಗೆ 5ಕಿ.ಮೀ. ದುರಸ್ತಿ, ನಿರ್ವಹಣೆ ಕಾಮಗಾರಿಗೆ ಶಾಸಕ ಜೆ.ಎನ್.ಗಣೇಶ್  ಭೂಮಿ ಪೂಜೆ ನೆರವೇರಿಸಿ ನತಂರ ಮಾತನಾಡಿ,  ಚಿಕ್ಕಜಾಯಿಗನೂರು ಗ್ರಾಮದಿಂದ ನೆಲ್ಲೂಡಿ ಗ್ರಾಮತನಕ, ಎಚ್ಕೆಆರ್ಡಿಬಿಯ 3ಕೋಟಿ ರೂ.ಗಳಲ್ಲಿ,ವೆಚ್ಚದಲ್ಲಿ. ರಸ್ತೆ ಅಭಿವೃದ್ದಿ ಕಾಮಗಾರಿಗೆ ಅತಿ ಶಿಘ್ರದಲ್ಲಿ ಭೂಮಿಪೂಜೆ ಮಾಡಲಾಗುವುದು ಎಂದು ಹೇಳಿದರು. 

ಕಂಪ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರನ್ನಾಗಿ ಇಟ್ಗಿ ಬಸವರಾಜಗೌಡ, ಕುರುಗೋಡು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರನ್ನಾಗಿ ಬಂಗಿ ಮಲ್ಲಯ್ಯ ಅವರನ್ನು ನೇಮಕಮಾಡಲಾಗುವುದು ಎಂದರು 

ಭೂಮಿ ಪೂಜೆ ಸಂದರ್ಭದಲ್ಲಿ ತಾಪಂ ಸದಸ್ಯ ಎಚ್.ಈರಣ್ಣ, ಮುಖಂಡರಾದ ಬಿ.ದುರುಗಪ್ಪ, ವಿ.ಹನುಮಪ್ಪ, ಕೆ.ಭೀಮಲಿಂಗ, ಆನಂದಗೌಡ, ಮೆಹಬೂಬ್ಸಾಬ್, ವಿ.ಹನುಮೇಶ್, ಆರ್.ರವಿಗೌಡ, ಜಿ.ಶಂಕರಗೌಡ, ಗುರುರಾಜ, ಗೋವಿಂದರಾಜು ಸೇರಿ ಗ್ರಾಮದ ಮುಖಂಡರು ಉಪಸ್ಥಿತರಿದ್ದರು.