ಕನ್ನಡ ಮತ್ತು ಕನ್ನಡಿಗರು ನೀರಾಭಿಮಾನಿಗಳಾಗದೆ ಸ್ವಾಭಿಮಾನಿಗಲಾಗಬೇಕು : ಅಧ್ಯಕ್ಷ ಚೋಳಪ್ಪ ಕಸವಾಳ

ಕನ್ನಡ ಮತ್ತು ಕನ್ನಡಿಗರು ನೀರಾಭಿಮಾನಿಗಳಾಗದೆ ಸ್ವಾಭಿಮಾನಿಗಲಾಗಬೇಕು : ಅಧ್ಯಕ್ಷ ಚೋಳಪ್ಪ ಕಸವಾಳ Kannada and Kannadigas should not become water fanatics but self-respecting: President Cholappa Kas

                    ರಾಣೇಬೆನ್ನೂರು 30: ನ 29 ಕನ್ನಡ ಮತ್ತು ಕನ್ನಡಿಗರು ಇಂದು ನೀರಾಭಿಮಾನಿಗಳಾಗದೆ ಸ್ವಾಭಿಮಾನಿಗಳಾಗಬೇಕಾದ ಅಗತ್ಯವಿದೆ ಎಂದು ನಗರ ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ಚೋಳಪ್ಪ ಕಸವಾಳ ಹೇಳಿದರು. ಅವರು  ಮಾರುತಿ ನಗರದ ಶ್ರೀ ಮರುಳಸಿದ್ದೇಶ್ವರ ಸಭಾ ಭವನದಲ್ಲಿ, ಸ್ವಾಭಿಮಾನಿ ಕರ್ನಾಟಕ ರಕ್ಷಣಾ ವೇದಿಕೆ ಆಯೋಜಿಸಿದ್ದ, 70ನೇ ಕನ್ನಡ ರಾಜ್ಯೋತ್ಸವ, ಹಾಗೂ ಸಾಂಸ್ಕೃತಿಕ ಸಂಭ್ರಮ  ಉದ್ಘಾಟಿಸಿ ಮಾತನಾಡಿದರು. ಕನ್ನಡ ನಾಡು, ನುಡಿ, ನೆಲ ಜಲ ಭಾಷೆ ಮತ್ತು  ಸಂಸ್ಕೃತಿಗೆ ಅನ್ಯ ಭಾಷಿಕರಿಂದ ಧಕ್ಕೆ  ಬಂದಾಗ ಕೈಕಟ್ಟಿ ಕುಳಿತುಕೊಳ್ಳದೆ, ಒಂದಾಗಿ ಒಗ್ಗಟ್ಟಾಗಿ ಹೋರಾಟಕ್ಕೆ ಮುಂದಾಗುವುದು ಅನಿವಾರ್ಯವಾಗುವುದು ಎಂದರು. ರಾಜ್ಯಾಧ್ಯಕ್ಷ  ನಿತ್ಯಾನಂದ ಕುಂದಾಪುರ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಡಾ.ಪುನೀತ್ ರಾಜ್ ಅವರ ಸೇವೆ ಅನನ್ಯ ಮತ್ತು ಅಪಾರವಾಗಿದೆ. ಅವರು ನಾಡಿನ ಸಾಂಸ್ಕೃತಿಕ ಪರಂಪರೆಯ ಮೇರು ಪರ್ವತವಾಗಿದ್ದರು ಎಂದರು.

                   ಮುಖ್ಯ ಅತಿಥಿಯಾಗಿದ್ದ ಕೃಷಿ ಪರಿಕರಗಳ ಉದ್ಯಮಿ ಸಿ.ಸಿ.ಸಣ್ಣಗೌಡ್ರು ಅವರು ಸಾಧಕರ ಪುಣ್ಯ ಸ್ಮರಣೆಯಲ್ಲಿ ನಾವೆಲ್ಲರೂ ಪಾಲ್ಗೊಂಡಿರುವುದು ಪೂರ್ವಜನ್ಮದ ಪುಣ್ಯದ ಫಲವೆಂದು ಭಾವಿಸಬೇಕಾಗಿದೆ. ಪ್ರತಿಯೊಬ್ಬರು ವೃಕ್ಷಮಾತೆ ಸಾಲುಮರದ  ತಿಮ್ಮಕ್ಕ, ಡಾ.ಪುನೀತ್ ರಾಜ್ ಮತ್ತು ಕನ್ನಡಿಗರ ಸಾಹಿತ್ಯ ಕನ್ನಡ ಸಂಸ್ಕೃತಿ ರಾಜ್ಯೋತ್ಸವದಲ್ಲಿ ಪಾಲ್ಗೊಂಡಿರುವ ನಮ್ಮೆಲ್ಲರ ಅದೃಷ್ಟ ಎಂದರು. ವೇದಿಕೆಯಲ್ಲಿ ಶ್ರೀಧರ ಚಲವಾದಿ, ಮಲ್ಲಿಕಾರ್ಜುನ ಸಾವಕ್ಕನವರ, ಕೊಟ್ರೇಶಪ್ಪ ಎಮ್ಮಿ, ಪರಶುರಾಮ ಬಣಕಾರ್, ಪರಶುರಾಮ್ ಕುರುವತ್ತಿ, ಪ್ರೇಮ ಅಂಗಡಿ, ರಿಯಾಜ್ ದೊಡ್ಮನಿ, ನಂದೀಶ್ ಅಟವಾಳಗಿ, ತಿಪ್ಪೇಶ್ ಚಳಗೇರಿ, ಪರಶುರಾಮ ಕೋಲಕಾರ, ಹಾಲೇಶ್ ಚಲವಾದಿ, ಜನನಿ ಜಾನಪದ ಕಲಾತಂಡ, ಎನ್ ಎಸ್ ಸ್ನೇಹ ಜ್ಯೋತಿ ಮತ್ತು ಯಲ್ಲಾಪುರ   ಹಿರೇಮಠ ಸೇವಾ ಟ್ರಸ್ಟ್‌ ಪದಾಧಿಕಾರಿಗಳು ಗಣ್ಯರು  ಉಪಸ್ಥಿತರಿದ್ದರು. ಸುಪ್ರೀತಾ ಸಂಗಡಿಗರು ಪ್ರಾರ್ಥಿಸಿದರುಸಂಜೀವ್ ಕನವಳ್ಳಿ ಸ್ವಾಗತಿಸಿ, ಶಿವಕುಮಾರ ಜಾದವ ಪ್ರಾಸ್ತಾವಿಕವಾಗಿ ಮಾತನಾಡಿದರು.