ಕನ್ನಡ ಸಾಹಿತ್ಯ ಪರಿಷತ್ ನೂತನ ಅಧ್ಯಕ್ಷರ ನೇಮಕ
ಕೊಪ್ಪಳ, 09- ಕನ್ನಡ ಸಾಹಿತ್ಯ ಪರಿಷತ್ ಕೊಪ್ಪಳ ಜಿಲ್ಲಾ ಘಟಕ ವ್ಯಾಪ್ತಿಯಲ್ಲಿ ಬರುವ ಗಂಗಾವತಿ, ಕುಷ್ಟಗಿ ತಾಲೂಕ ಕನ್ನಡ ಸಾಹಿತ್ಯ ಪರಿಷತ್ ಎರಡು ಘಟಕಗಳಲ್ಲಿ ರಾಜೀನಾಮೆಯಿಂದ ಖಾಲಿಯಾಗಿರುವ ಅಧ್ಯಕ್ಷರ ಹುದ್ದೆಗಳನ್ನು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಶರಣೇಗೌಡ ಪೊಲೀಸ್ ನೂತನ ಅಧ್ಯಕ್ಷರನ್ನು ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.
ಕನ್ನಡ ಸಾಹಿತ್ಯ ಪರಿಷತ್ ಗಂಗಾವತಿ ತಾಲೂಕ ಅಧ್ಯಕ್ಷರನ್ನಾಗಿ ರುದ್ರೇಶ್ ಮಡಿವಾಳ್ ಇವರನ್ನು ಹಾಗೂ ಕನ್ನಡ ಸಾಹಿತ್ಯ ಪರಿಷತ್ ಕುಷ್ಟಗಿ ತಾಲೂಕ ಅಧ್ಯಕ್ಷರನ್ನಾಗಿ ಲೆಂಕಪ್ಪ ವಾಲಿಕಾರ್ ನೇಮಕ ಮಾಡಿದ್ದು ಕನ್ನಡ ನಾಡು-ನುಡಿ ಸೇವೆ ಮಾಡಿ ಕಸಾಪ ಕಟ್ಟುವ ಕೆಲ ಮಾಡುವಂತೆ ತಿಳಿಸಿದ್ದಾರೆ.