ಕನ್ನಡ ಜಾನಪದ ಪರಿಷತ್ ಲಾಂಛನ ಬಿಡುಗಡೆ

ಕನ್ನಡ ಜಾನಪದ ಪರಿಷತ್ ಲಾಂಛನ ಬಿಡುಗಡೆ  Kannada Folk Parishad logo release

ಇಂಡಿ 07: ತಾಲ್ಲೂಕಿನ ಸುಕ್ಷೇತ್ರ ಬಂಥನಾಳದಲ್ಲಿ ಇಂದು ಬೆಳಗ್ಗೆ 10.30 ಘಂಟೆಗೆ ಕನ್ನಡ ಜಾನಪದ ಪರಿಷತ್ ಇಂಡಿ ತಾಲ್ಲೂಕಿನ ಎರಡನೆ ಜಾನಪದ ಸಮ್ಮೇಳನ ಲಾಂಛನ ಬಿಡುಗಡೆ ಸಮಾರಂಭ ಕಾರ್ಯಕ್ರಮ ಜರುಗಿತು.ಈ ಸಮಾರಂಭದಲ್ಲಿ ಡಾ.  ವೃಷಭಲಿಂಗ ಶಿವಯೋಗಿಗಳು ಫೆಬ್ರವರಿ 17ರಂದು ನಡೆಯಲಿರುವ ಸಮ್ಮೇಳನದ ಲಾಂಛನ ಬಿಡುಗಡೆಗೊಳಿಸಿ ಕಾರ್ಯಕ್ರಮ ನಾಡಿನ ಎಲ್ಲ ಜನಪದ ಕಲಾವಿದರೂ ಒಡಗೂಡಿ ಒಂದಾಗಿ ಚಂದಾಗಿ ಕಾರ್ಯಕ್ರಮ ನಡೆಸುವುದರ ಜೊತೆಗೆ ಸಮ್ಮೇಳನದ ಸರ್ವಾಧ್ಯಕ್ಷರಾದ ಚಿದಾನಂದ ವಿ ಗೌಡಗಾ ವಿ ಅಪ್ಪಟ ಜಾನಪದ ಕಲಾವಿದರನ್ನು ಗುರುತಿಸಿದ್ದು ಹೆಮ್ಮೆಯ ವಿಷಯ ಎಂದರು.

ಹಾಗೆಯೇ ಅಂದು ಸಂಗೊಳ್ಳಿ ರಾಯಣ್ಣ ಸರ್ಕಲ್ ದಿಂದ ಮಠದ ವೇದಿಕೆ ವರೆಗೆ ಸ್ಥಬ್ದಚಿತ್ರಗಳು ಜೊತೆಗೆ 35 ಕಲಾತಂಡಗಳ ಜೊತೆಗೆ ಆದ್ದರಿಯಾದ ಮೆರವಣಿಗೆ ಹಾಗೂ ಗೊಡ್ ಗೋಷ್ಠಿಗಳು ಮಹಿಳಾ ಗೋಷ್ಠಿ ವಿವಿಧ ಜಾನಪದ ಸಾಧಕರ ಸನ್ಮಾನ ಅನೇಕ ಕಲಾತಂಡಗಳ ಪ್ರದರ್ಶನ ನಡೆಯುವದರಿಂದ ಊರಿನ ಜನ ಸಹಾಕಾರ ನೀಡುವುದರ ಜೊತೆಗೆ, ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಮಾತನಾಡಿದರೂ ತಾಲೂಕಾ ಜಾನಪದ ಪರಿಷತ್ ಅಧ್ಯಕ್ಷ ಪಂಡಿತ ಅವಜಿ ಕಾರ್ಯದರ್ಶಿ ಜಟ್ಟೆಪ್ಪ ಮಾದರ ಸಂಘಟನಾ ಕಾರ್ಯದರ್ಶಿ ಸರದಾರ ಮುಲ್ಲಾ ಊರಿನ ಅನೇಕ ಜನ ಭಾಗವಹಿಸಿದ್ದರೂ ನಂತರ ಎಲ್ಲರಿಗೂ ಪ್ರಸಾದ ವ್ಯವಸ್ಥೆ ಮಾಡಲಾಯಿತ ಕಾರ್ಯದರ್ಶಿ ಜಟ್ಟಪ್ಪ ಸರ್ ನಿರೂಪಿಸಿದರು. ಸರದಾರ ಮುಲ್ಲಾ ಸ್ವಾಗತಿಸಿ ವಂದಿಸಿದರು.