ಕನಕದುರ್ಗಮ್ಮ ಸಿಡಿಬಂಡಿ ಉತ್ಸವ: ರಸ್ತೆ ಸಂಚಾರ ಬದಲಾವಣೆ
Kanakadurgamma Sidibandi Festival: Road traffic changes
ಕನಕದುರ್ಗಮ್ಮ ಸಿಡಿಬಂಡಿ ಉತ್ಸವ: ರಸ್ತೆ ಸಂಚಾರ ಬದಲಾವಣೆ
ಬಳ್ಳಾರಿ 10: ಮಾ.11 ರಂದು ನಡೆಯುವ ಶ್ರೀ ಕನಕ ದುರ್ಗಮ್ಮ ಸಿಡಿ ಬಂಡಿ ಉತ್ಸವದ ಹಿನ್ನೆಲೆಯಲ್ಲಿ ಸಾರ್ವಜನಿಕ ಸುರಕ್ಷತೆ ಹಾಗೂ ಸುಗಮ ಸಂಚಾರ ವ್ಯವಸ್ಥೆ ಕಲ್ಪಿಸುವ ಹಿತದೃಷ್ಠಿಯಿಂದ ಕನಕ ದುರ್ಗಮ್ಮ ದೇವಸ್ಥಾನದ ಕಡೆಯಿಂದ, ಎಸ್.ಪಿ ವೃತ್ತದ ಕಡೆಯಿಂದ, ರಾಯಲ್ ವೃತ್ತದ ಕಡೆಯಿಂದ, ಕೂಲ್ ಕಾರ್ನರ್ ವೃತ್ತದ ಕಡೆಯಿಂದ, ಕಪ್ಪಗಲ್ಲು ರಸ್ತೆ ಕಡೆಯಿಂದ ಹಾಗೂ ಮೋಕ ರಸ್ತೆ ಕಡೆಯಿಂದ ದೇವಸ್ಥಾನಕ್ಕೆ ಬರುವ ವಾಹನಗಳಿಗೆ ರಸ್ತೆ ಸಂಚಾರವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಿ ಪರ್ಯಾಯ ಮಾರ್ಗಗಳಲ್ಲಿ ರಸ್ತೆ ಸಂಚಾರ ಮಾಡಬೇಕು ಎಂದು ಜಿಲ್ಲಾ ದಂಡಾಧಿಕಾರಿಯಾಗಿರುವ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು ತಿಳಿಸಿದ್ದಾರೆ.
ಮೋಟರ್ ವಾಹನ ಕಾಯ್ದೆ 1988 ರ ಅಧಿನಿಯಮ 115 ಹಾಗೂ ಕರ್ನಾಟಕ ಮೋಟರ್ ವಾಹನ ನಿಯಮಗಳು 1989 ರ ನಿಯಮ 221 ಎ (5) ರನ್ವಯ ಪ್ರದತ್ತವಾದ ಅಧಿಕಾರ ಚಲಾಯಿಸಿ ಈ ಕೆಳಗಿನಂತೆ ಮಾರ್ಗ ಬದಲಾವಣೆ ಮಾಡಿ ಆದೇಶಿಸಿದ್ದಾರೆ.
ಮಾ.11 ರಂದು ಮಧ್ಯಾಹ್ನ 02 ಗಂಟೆಯಿಂದ ಮಾ.12 ರ ಬೆಳಿಗ್ಗೆ 06 ಗಂಟೆಯವರೆಗೆ ಬೆಂಗಳೂರು ಕಡೆಯಿಂದ ಸಿರುಗುಪ್ಪ ಕಡೆಗೆ ಹೋಗುವ ಮತ್ತು ಬರುವ ಮಧ್ಯಮ ಹಾಗೂ ಭಾರಿ ವಾಹನಗಳು ಬೆಂಗಳೂರು ರಸ್ತೆ ಬೈಪಾಸ್ ರೈಲ್ವೇಗೇಟ್, ಹೊಸಪೇಟೆ ರಸ್ತೆ ಬೈಪಾಸ್, ವಿನಾಯಕ ನಗರ, ಸುಧಾ ಕ್ರಾಸ್, ಎಸ್.ಪಿ ಸರ್ಕಲ್ ಮುಖಾಂತರ ಸಂಚರಿಸುವುದು.
ಮಾ.11 ರಂದು ಬೆಳಿಗ್ಗೆ 10 ಗಂಟೆಯಿಂದ ಮಾ.12 ರಂದು ಬೆಳಿಗ್ಗೆ 06 ಗಂಟೆಯವರೆಗೆ ಸಿರುಗುಪ್ಪ ಕಡೆಯಿಂದ ಮೋಕ ಕಡೆಗೆ ಹೋಗುವ ಮತ್ತು ಬರುವ ದ್ವಿಚಕ್ರ, ತ್ರಿಚಕ್ರ ಹಾಗೂ ಇನ್ನಿತರ ಲಘು ವಾಹನಗಳು ಎಸ್.ಪಿ ಸರ್ಕಲ್, ಮೋತಿ ಸರ್ಕಲ್, ಡಿ.ಸಿ ಸರ್ಕಲ್, ರಾಯಲ್ ಸರ್ಕಲ್, ಇಂದಿರಾ ಸರ್ಕಲ್, ಕೂಲ್ ಕಾರ್ನರ್, ಕೆ.ಇ.ಬಿ ಮುಖಾಂತರ ಸಂಚರಿಸುವುದು.
ಮಾ.11 ರಂದು ಬೆಳಿಗ್ಗೆ 10 ಗಂಟೆಯಿಂದ ಮಾ.12 ರಂದು ಬೆಳಿಗ್ಗೆ 06 ಗಂಟೆಯವರೆಗೆ ಬೆಂಗಳೂರು ಹಾಗೂ ಹೊಸಪೇಟೆ ಕಡೆಯಿಂದ ಮೋಕ ಕಡೆಗೆ ಹೋಗುವ ಮತ್ತು ಬರುವ ದ್ವಿಚಕ್ರ, ತ್ರಿಚಕ್ರ ಹಾಗೂ ಇನ್ನಿತರ ಲಘು ವಾಹನಗಳು ಮೋತಿ ಸರ್ಕಲ್, ಡಿ.ಸಿ ಸರ್ಕಲ್, ರಾಯಲ್ ಸರ್ಕಲ್, ಇಂದಿರಾ ಸರ್ಕಲ್, ಕೂಲ್ ಕಾರ್ನರ್, ಕೆ.ಇ.ಬಿ ಮುಖಾಂತರ ಸಂಚರಿಸುವುದು.
ಮಾ.11 ರಂದು ಬೆಳಿಗ್ಗೆ 10 ಗಂಟೆಯಿಂದ ಮಾ.12 ರಂದು ಬೆಳಿಗ್ಗೆ 06 ಗಂಟೆಯವರೆಗೆ ಕಪ್ಪಗಲ್, ತಾಳೂರು ಕಡೆಯಿಂದ ಬಳ್ಳಾರಿ ನಗರದೊಳಗೆ ಹೋಗುವ ಮತ್ತು ಬರುವ ದ್ವಿಚಕ್ರ, ತ್ರಿಚಕ್ರ ಹಾಗೂ ಇನ್ನಿತರ ಲಘು ವಾಹನಗಳು ತಾಳೂರು-ಕಪ್ಪಗಲ್ ರಸ್ತೆಯ ಕಾಲುವೆಯ ಮೇಲೆ ಹವಂಭಾವಿ, ಎಸ್.ಪಿಸರ್ಕಲ್ ಮುಖಾಂತರ ಸಂಚರಿಸುವುದು.
ಮಾ.11 ರಂದು ಬೆಳಿಗ್ಗೆ 10 ಗಂಟೆಯಿಂದ ಮಾ.12 ರಂದು ಬೆಳಿಗ್ಗೆ 06 ಗಂಟೆಯವರೆಗೆ ಹೊಸಪೇಟೆ, ಸಿರುಗುಪ್ಪ ಹಾಗೂ ಬೆಂಗಳೂರು ಕಡೆಯಿಂದ ಅನಂತಪುರ ಕಡೆಗೆ ಹೋಗುವ ಮತ್ತು ಬರುವ ಮಧ್ಯಮ ಹಾಗೂ ಭಾರಿ ವಾಹನಗಳು ಅನಂತಪರ ಬೈಪಾಸ್, ಇಂದಿರಾ ಸರ್ಕಲ್, ಎಸ್.ಎನ್.ಪೇಟೆ, ಫ್ಲೈಓವರ್, ಕೆ.ಇ.ಬಿ ಸರ್ಕಲ್ ಮುಖಾಂತರ ಸಂಚರಿಸುವುದು ಎಂದು ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು ಆದೇಶದಲ್ಲಿ ತಿಳಿಸಿದ್ದಾರೆ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 