ಕನಕದಾಸರ ದಾಸ ಸಾಹಿತ್ಯ ಇಂದಿಗೂ ಮಾರ್ಗದರ್ಶಕ: ಪೂಜೇರಿ

ಕನಕದಾಸರ ದಾಸ ಸಾಹಿತ್ಯ ಇಂದಿಗೂ ಮಾರ್ಗದರ್ಶಕ: ಪೂಜೇರಿ Kanakadasa's Dasa Sahitya still guides: Pujeri


ಬೆಳಗಾವಿ 10: ದಾಸ ಶ್ರೇಷ್ಠ ಕನಕದಾಸರ ದಾಸ ಸಾಹಿತ್ಯ 21ನೇ ಶತಮಾನದ ಮುಂದುವರಿದ ಈ ವೈಜ್ಞಾನಿಕ ಕಾಲದಲ್ಲಿ ಕೂಡ ಮಾರ್ಗದರ್ಶನವಾಗಿವೆ. ದ್ವೈತ ವೇದಾಂತದ ತತ್ವಜ್ಞಾನಿಯಾದ ಅವರ ಹಿತ ವಚನಗಳನ್ನು ಇವತ್ತಿಗೂ ಪಾಲಿಸಬೇಕಾದ ಅವಶ್ಯಕತೆ ಇದೆ. ಅದೇ ರೀತಿ ಒಂದೇ ಮಾತರಂ ಗೀತೆಗೆ 150 ವರ್ಷದ ತುಂಬಿದ ಈ ಒಳ್ಳೆಯ ಸಂದರ್ಭಕ್ಕೆ ನಾವೆಲ್ಲರೂ ಸಾಕ್ಷಿಯಾಗಿರುವುದು ನಮ್ಮೆಲ್ಲರ ಪುಣ್ಯ ಎಂದು ಮಹಾಒಕ್ಕೂಟದ ಅಧ್ಯಕ್ಷ ಜಗದೀಶ ಪೂಜೇರಿ ಅವರು ಹೇಳಿದರು. 

ಬೆಳಗಾವಿ ಜಿಲ್ಲೆ ಮಾಜಿ ಸೈನಿಕರ ಸಂಘಟನೆಗಳ ಮಹಾ ಒಕ್ಕೂಟದ ಸೈನಿಕ ಸಂಪರ್ಕ ಕೇಂದ್ರದಲ್ಲಿ ದಾಸ ಶ್ರೇಷ್ಠ ಕನಕದಾಸರ ಜಯಂತಿ ಪ್ರಯುಕ್ತ ಕನಕದಾಸರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಅವರು ಅವರು ಮಾತನಾಡಿದರು . 

ಕನಕದಾಸರು ಕೇವಲ ಸಂತರಾಗಿ ಮಾತ್ರವಲ್ಲ, ಒಬ್ಬ ಉತ್ಕಟ ಸಮಾಜ ಸುಧಾಕರೂ ಆಗಿದ್ದರು. ಸಮಾಜದಲ್ಲಿ ಸಮತೋಲನವನ್ನು ತರುವುದಕ್ಕಾಗಿ ಪ್ರದಿಪಾದಿಸಿದರು. ಆ ಕಾಲದಲ್ಲಿ ಚಾಲ್ತಿಯಲ್ಲಿದ್ದ ಜಾತಿ ವ್ಯವಸ್ಥೆಯ ವಿರುದ್ಧ ನಿರಂತರವಾಗಿ ಹೋರಾಟ ಮಾಡಿದವರು ಎಂದರು. 

ಅದರ, ಜೊತೆಗೆ ಒಂದೇ ಮಾತರಂ ಗೀತೆಗೆ 150 ವರ್ಷದ ತುಂಬಿದ ಹೆಮ್ಮೆಯ ಗಳಿಗೆಯನ್ನು ವಂದೇ ಮಾತರಂ ಗೀತೆ ಹಾಡುವುದರ ಮೂಲಕ ಗೀತೆಗೆ ಗೌರವ ನಮನ ಸಲ್ಲಿಸಲಾಯಿತು. 

ಮಹಾ ಒಕ್ಕೂಟದ ಗೌರವಾಧ್ಯಕ್ಷ ರಮೇಶ್ ಚೌಗಲಾ, ಕಾರ್ಯದರ್ಶಿ ಶಿವಬಸಪ್ಪ ಕಾಡನ್ನವರ, ಉಪಾಧ್ಯಕ್ಷ ಸಂಗಪ್ಪ ಮೇಟಿ, ಖಜಾಂಚಿ ಸಂತೋಷ ಹಿರೇಮಠ, ಸಂಘಟನಾ ಕಾರ್ಯದರ್ಶಿ ಮಹೇಶ ಕಮ್ಮಾರ, ಮಡಿವಾಳಪ್ಪ ಕಲಭಾವಿ, ಹಿರಿಯರಾದಂತಹ ದಯಾನಂದ ಢಾಳಿ, ಅಶೋಕ ಮಜಗಿ, ಚಂದ್ರಕಾಂತ್ ಸುತಾರ, ಬಸವಂತಪ್ಪ ಕಾರಂವಿ, ಮಹಿಳಾ ಘಟಕದ ಅಧ್ಯಕ್ಷೆ ಸುನಿತಾ ಪಟ್ಟಣಶೆಟ್ಟಿ ಹಾಗೂ ಇತರರು ಇದ್ದರು.